WhatsAppನಲ್ಲಿ ಕಳುಹಿಸಿರುವ ಮೆಸೇಜ್ ಅನ್ನು ಈಗ Edit ಮಾಡಬಹುದು !

ಈ ವೈಶಿಷ್ಟ್ಯದೊಂದಿಗೆ ಬಳಕೆದಾರರು ತಮ್ಮ ಸಂದೇಶಗಳು ಸ್ಪಷ್ಟ, ಸಂಕ್ಷಿಪ್ತ ಮತ್ತು ದೋಷ-ಮುಕ್ತವಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಒಂದು ಮಾರ್ಗವನ್ನು ಒದಗಿಸುತ್ತದೆ. 

Written by - Ranjitha R K | Last Updated : Mar 28, 2023, 02:12 PM IST
  • ವಾಟ್ಸಾಪ್ ನಲ್ಲಿ ಹೊಸ ಹೊಸ ವೈಶಿಷ್ಟ್ಯ ಪರಿಚಯ
  • ಹೊಸ ವೈಶಿಷ್ಟ್ಯ ಬಳಕೆದಾರರಿಗೆ ಅತ್ಯಂತ ಪ್ರಯೋಜನಕಾರಿಯಾಗಿರಲಿದೆ.
  • WhatsApp ಈ ಹೊಸ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ
WhatsAppನಲ್ಲಿ ಕಳುಹಿಸಿರುವ ಮೆಸೇಜ್ ಅನ್ನು ಈಗ Edit ಮಾಡಬಹುದು ! title=

ಬೆಂಗಳೂರು : ವಾಟ್ಸಾಪ್ ನಲ್ಲಿ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗುತ್ತಿದೆ. ಈ ವರ್ಷ ಪರಿಚಯವಾಗಲಿರುವ ಹೊಸ ವೈಶಿಷ್ಟ್ಯ ಬಳಕೆದಾರರಿಗೆ ಅತ್ಯಂತ ಪ್ರಯೋಜನಕಾರಿಯಾಗಿರಲಿದೆ.   WhatsApp ಈ ಹೊಸ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ . iOS ನಲ್ಲಿ ಸಂದೇಶಗಳನ್ನು ಎಡಿಟ್ ಮಾಡುವ ಆಪ್ಷನ್ ಇನ್ನು ಮುಂದೆ ಬಳಕೆದಾರರಿಗೆ ನೀಡಲಾಗುವುದು.  ಈ ವೈಶಿಷ್ಟ್ಯದೊಂದಿಗೆ ಬಳಕೆದಾರರು ಹೆಚ್ಚುವರಿ ಸಂದೇಶಗಳನ್ನು ಕಳುಹಿಸದೆ ಮೊದಲೇ ಕಳುಹಿಸಲಾಗಿರುವ ಸಂದೇಶಗಳನ್ನು ಎಡಿಟ್  ಮಾಡಬಹುದಾಗಿದೆ. 

15 ನಿಮಿಷಗಳಲ್ಲಿ ಎಡಿಟ್ ಮಾಡಬೇಕಾಗುತ್ತದೆ :
ಈ ವೈಶಿಷ್ಟ್ಯದೊಂದಿಗೆ ಬಳಕೆದಾರರು ತಮ್ಮ ಸಂದೇಶಗಳು ಸ್ಪಷ್ಟ, ಸಂಕ್ಷಿಪ್ತ ಮತ್ತು ದೋಷ-ಮುಕ್ತವಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಒಂದು ಮಾರ್ಗವನ್ನು ಒದಗಿಸುತ್ತದೆ. ಆದರೆ, ಇಲ್ಲಿ  ಸಂದೇಶಗಳನ್ನು 15 ನಿಮಿಷಗಳಲ್ಲಿ ಎಡಿಟ್ ಮಾಡಬೇಕಾಗುತ್ತದೆ.  ಅಲ್ಲದೆ, ಮೆಸೇಜ್ ಬಬಲ್‌ನಲ್ಲಿ ಎಡಿಟ್ ಲೇಬಲ್‌ನೊಂದಿಗೆ ಇದನ್ನು ಗುರುತಿಸಲಾಗುತ್ತದೆ. 

ಇದನ್ನೂ ಓದಿ :  IPL ಪ್ರಿಯರಿಗಾಗಿ ಅಗ್ಗದ ಬೆಲೆಯಲ್ಲಿ ಅನ್ಲಿಮಿಟೆಡ್ ಇಂಟರ್ನೆಟ್ ಪ್ಲಾನ್ ಪರಿಚಯಿಸಿದ ರಿಲಯನ್ಸ್ ಜಿಯೋ
 
ಏತನ್ಮಧ್ಯೆ, WhatsApp ತನ್ನ ಅಧಿಕೃತ ಚಾಟ್ ಅನ್ನು ಪ್ಲಾಟ್‌ಫಾರ್ಮ್‌ನಲ್ಲಿ ಪ್ರಾರಂಭಿಸಿದೆ. ಅಲ್ಲಿ ಬಳಕೆದಾರರು ಅಪ್ಲಿಕೇಶನ್‌ನ ಕುರಿತು ಇತ್ತೀಚಿನ ಮಾಹಿತಿಯನ್ನು ಪಡೆಯಬಹುದಾಗಿದೆ. iOS ಮತ್ತು Android ನಲ್ಲಿ ಅದನ್ನು ಬಳಸುವ ಕುರಿತು ಅಪ್ಡೇಟ್ ಮತ್ತು  ಸಲಹೆ ಸೇರಿದಂತೆ ಎಲ್ಲಾ ಮಾಹಿತಿ ಸಿಗಲಿದೆ.

ಚಾಟ್‌ಗಳನ್ನು ಹಸಿರು ಬ್ಯಾಡ್ಜ್ ನೊಂದಿಗೆ ಗುರುತಿಸಲಾಗಿದೆ.ಇಲ್ಲಿ   ಅಪ್ಲಿಕೇಶನ್ ಅನ್ನು ಹೇಗೆ ಬಳಸುವುದು,ಬಿಡುಗಡೆಯಾಗಿರುವ ಹೊಸ ವೈಶಿಷ್ಟ್ಯಗಳು ಮತ್ತು ಅವುಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ಸಲಹೆಗಳು ಸೂಚನೆಗಳನ್ನು ನೀಡಲಾಗುತ್ತದೆ. ವೆರಿಫೈಡ್ ಬ್ಯಾಡ್ಜ್‌ಗಳು ಚಾಟ್‌ಗಳು ಕಾನೂನುಬದ್ಧವಾಗಿವೆ ಎನ್ನುವುದನ್ನು ಖಚಿತಪಡಿಸುತ್ತದೆ.  ಇದು ಅಧಿಕೃತ WhatsApp ಖಾತೆಗಳನ್ನು ಅನುಕರಿಸುವ ಸ್ಕ್ಯಾಮ್‌ಗಳು ಅಥವಾ ಫಿಶಿಂಗ್ ಪ್ರಯತ್ನಗಳಿಗೆ ಬಲಿಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ :  Best Cars: 26 ಕಿಮೀ ಮೈಲೇಜ್ ಕೊಡೋ 7 ಸೀಟರ್ ಕಾರು: ಬಲು ಅಗ್ಗದ ಈ ಕಾರಿನ ಫೀಚರ್ ಮತ್ತಷ್ಟು ಸೂಪರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News