Best Recharge Plan: 84 ದಿನಗಳ ಸಿಂಧುತ್ವ, ನಿತ್ಯ ಉಚಿತ 2 ಜಿಬಿ ಡೇಟಾ-ಕರೆ ಸೌಲಭ್ಯ, ತಿಂಗಳ ವೆಚ್ಚ ಕೇವಲ 240 ರೂ.ಮಾತ್ರ!

Best Recharge Plan From Jio: ರಿಲಯನ್ಸ್ ಜಿಯೋ ಕಂಪನಿಯ ಈ ರೀಚಾರ್ಜ್ ಯೋಜನೆಯು ತುಂಬಾ ಮಿತವ್ಯಯಕಾರಿಯಾಗಿದೆ, ಆದರೆ ಇದರಲ್ಲಿ ಲಭ್ಯವಿರುವ ಪ್ರಯೋಜನಗಳು ತುಂಬಾ ಉತ್ತಮವಾಗಿವೆ, ಇಂತಹ ಪ್ರಯೋಜನಗಳನ್ನು ನಾವು ಸಾಮಾನ್ಯವಾಗಿ ದುಬಾರಿ ರೀಚಾರ್ಜ್‌ ಪ್ಲಾನ್ ಗಳಲ್ಲಿ  ಮಾತ್ರ ನೋಡಬಹುದು.  

Written by - Nitin Tabib | Last Updated : Mar 27, 2023, 06:06 PM IST
  • ಹೌದು, ಈ ಯೋಜನೆಯ ಸಿಂಧುತ್ವ ತುಂಬಾ ಹೆಚ್ಚಾಗಿದೆ ಮತ್ತು
  • ಇದರಲ್ಲಿ ನೀವು ಪ್ರತಿ ತಿಂಗಳು ರೀಚಾರ್ಜ್ ಮಾಡುವ ಜಂಜಾಟದಿಂದ ಮುಕ್ತರಾಗುವಿರಿ.
  • ಈ ಯೋಜನೆ ಮತ್ತು ಅದರಲ್ಲಿ ಲಭ್ಯವಿರುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ,
Best Recharge Plan: 84 ದಿನಗಳ ಸಿಂಧುತ್ವ, ನಿತ್ಯ ಉಚಿತ 2 ಜಿಬಿ ಡೇಟಾ-ಕರೆ ಸೌಲಭ್ಯ, ತಿಂಗಳ ವೆಚ್ಚ ಕೇವಲ 240 ರೂ.ಮಾತ್ರ! title=
ಅತ್ಯುತ್ತಮ ರೀಚಾರ್ಜ್ ಯೋಜನೆ!

Jio Offer: ರಿಲಯನ್ಸ್ ಜಿಯೋ ಕಂಪನಿಯ ರೀಚಾರ್ಜ್ ಯೋಜನೆಗಳಲ್ಲಿ ನೀವು ಸಾಕಷ್ಟು ವೈವಿಧ್ಯತೆಯನ್ನು ನೋಡಬಹುದು. ಕಂಪನಿಯು ಬಳಕೆದಾರರ ಬಜೆಟ್ ಮೇಲೆ ಕಡಿಮೆ ಹೊರೆ ಬೀಳುವಂತೆ ಮಾಡುವುದೇ ಕಂಪನಿಯ ಉದ್ದೇಶವಾಗಿರುತ್ತದೆ, ಹೀಗಾಗಿ ಪ್ರತಿ ಬಳಕೆದಾರರ ಪಾಕೆಟ್ ಬಗ್ಗೆ ಹೆಚ್ಚಿನ ಕಾಳಜಿವಹಿಸುತ್ತದೆ. ನೀವು ಪ್ರಿಪೇಯ್ಡ್ ಗ್ರಾಹಕರಾಗಿದ್ದರೆ ಮತ್ತು ನೀವು ಪ್ರತಿ ತಿಂಗಳು ರೀಚಾರ್ಜ್ ಮಾಡುವ ತೊಂದರೆಯನ್ನು ತೊಡೆದುಹಾಕಲು ಬಯಸಿದರೆ, ಈ ಯೋಜನೆಯು ನಿಮಗೆ ಒಂದು ಅತ್ಯುತ್ತಮ ಡೀಲ್ ಎಂದೇ ಸಾಬೀತಾಗಲಿದೆ. ಹೌದು, ಈ ಯೋಜನೆಯ ಸಿಂಧುತ್ವ ತುಂಬಾ ಹೆಚ್ಚಾಗಿದೆ ಮತ್ತು ಇದರಲ್ಲಿ ನೀವು ಪ್ರತಿ ತಿಂಗಳು ರೀಚಾರ್ಜ್ ಮಾಡುವ ಜಂಜಾಟದಿಂದ ಮುಕ್ತರಾಗುವಿರಿ. ಈ ಯೋಜನೆ ಮತ್ತು ಅದರಲ್ಲಿ ಲಭ್ಯವಿರುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ, 

ಇದನ್ನೂ ಓದಿ-Textationship ಬಗ್ಗೆ ನಿಮಗೆಷ್ಟು ಗೊತ್ತು? ಬನ್ನಿ ತಿಳಿದುಕೊಳ್ಳೋಣ

ಯಾವ ಪ್ರಯೋಜನಗಳು ಇದರಲ್ಲಿ ಸಿಗುತ್ತವೆ
ನಾವು ಜಿಯೋ ಕಂಪನಿಯ ಈ ರೀಚಾರ್ಜ್ ಯೋಜನೆಯ ಬೆಲೆಯ ಕುರಿತು ಮಾತನಾಡುವುದಾದರೆ, ಇದಕ್ಕಾಗಿ ಗ್ರಾಹಕರು ಕೇವಲ 719 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಈ ಯೋಜನೆಯಲ್ಲಿ, ಗ್ರಾಹಕರು ಪೂರ್ಣ 84 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಈ ಮಾನ್ಯತೆಯು ಪ್ರತಿ ತಿಂಗಳು ರೀಚಾರ್ಜ್ ಮಾಡುವ ತಾಪತ್ರಯದಿಂದ ನಿಮ್ಮನ್ನು ಕಾಪಾಡುತ್ತದೆ. ಯೋಜನೆಯಲ್ಲಿ ಈ ಪ್ರಯೋಜನ ಮಾತ್ರ ಸೇರಿಸಲಾಗಿದೆ ಎಂದು ನೀವು ಭಾವಿಸುತ್ತಿದ್ದರೆ ಅದು ತಪ್ಪು, ಏಕೆಂದರೆ ಈ ರೀಚಾರ್ಜ್ ಯೋಜನೆಯಲ್ಲಿ ಹೆಚ್ಚಿನ ಪ್ರಯೋಜನಗಳಿವೆ ಮತ್ತು ಅವು ನಿಮಗೂ ಕೂಡ ಇಷ್ಟವಾಗಲಿವೆ ಎಂಬುದು ನಮ್ಮ ಅಭಿಮತ.

ಇದನ್ನೂ ಓದಿ-Jio Big Dhamaka! ಮಾರುಕಟ್ಟೆಯನ್ನೆ ತಲ್ಲಣಗೊಳಿಸುವ ಜಬ್ಬರ್ದಸ್ತ್ ಫ್ಯಾಮಿಲಿ ರಿಚಾರ್ಜ್ ಯೋಜನೆ ಬಿಡುಗಡೆಗೊಳಿಸಿದ ಜಿಯೋ!

ಈ ರೀಚಾರ್ಜ್ ಯೋಜನೆಯಲ್ಲಿ ಉತ್ತಮ ಮಾನ್ಯತೆಯ ಜೊತೆಗೆ, ಗ್ರಾಹಕರು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಾರೆ, ಇದರಲ್ಲಿ ಪ್ರತಿನಿತ್ಯ 2GB ಡೇಟಾ ಲಭ್ಯವಿದೆ, ಇದು ಗ್ರಾಹಕರಿಗೆ 84 ದಿನಗಳವರೆಗೆ ಪ್ರತಿದಿನ ನೀಡಲಾಗುತ್ತದೆ. ಈ ಡೇಟಾದ ಸಹಾಯದಿಂದ, ಗ್ರಾಹಕರು ತಮ್ಮ ಇಂಟರ್ನೆಟ್ ಸಂಬಂಧಿತ ಅಗತ್ಯಗಳನ್ನು ಪೂರೈಸಬಹುದು, ಇದರಲ್ಲಿ ವೀಡಿಯೊಗಳನ್ನು ವೀಕ್ಷಿಸುವುದು, ಆಟಗಳನ್ನು ಆಡುವುದು ಮತ್ತು ಚಲನಚಿತ್ರಗಳನ್ನು ಡೌನ್‌ಲೋಡ್ ಮಾಡುವುದು ಇತ್ಯಾದಿಗಳು ಶಾಮೀಳಾಗಿವೆ. ಅಷ್ಟೇ ಅಲ್ಲ, ಈ ರೀಚಾರ್ಜ್ ಯೋಜನೆಯಿಂದಾಗಿ ಗ್ರಾಹಕರು ದೇಶದ ಯಾವುದೇ ಭಾಗದಿಂದ ಎಲ್ಲಿ ಬೇಕಾದರೂ ಉಚಿತ ಕರೆ ಮಾಡಬಹುದು ಮತ್ತು ಅನಿಯಮಿತ ಉಚಿತ ಕರೆಯನ್ನು ಆನಂದಿಸಬಹುದು. ಈ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರು ನಿತ್ಯ 100 s.m.s. ಉಚಿತವಾಗಿ ಕಳುಹಿಸಬಹುದು.  ಇದರಿಂದ ನೀವು ಪಠ್ಯ ಸಂದೇಶಗಳಿಗಾಗಿ ಪ್ರತ್ಯೇಕವಾಗಿ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News