Toyota ಹೊರತರುತ್ತಿದೆ ಅಗ್ಗದ SUV! ವೈಶಿಷ್ಟ್ಯ ಕೂಡಾ ಬಲು ಸೊಗಸು

Toyota Fortuner Facelift: ಹೊಸ ಫಾರ್ಚುನರ್ ಹೊರತುಪಡಿಸಿ, ಟೊಯೋಟಾ ಇನ್ನೂ ಎರಡು SUV ಗಳನ್ನು ಬಿಡುಗಡೆ ಮಾಡಬಹುದು. ಲೈವ್ ಮಿಂಟ್‌ನಲ್ಲಿನ ವರದಿಯ ಪ್ರಕಾರ, ಟೊಯೊಟಾ ಮುಂದಿನ ಎರಡು ಮೂರು ವರ್ಷಗಳಲ್ಲಿ ಭಾರತದಲ್ಲಿ ತನ್ನ SUV ಲೈನ್ ಅನ್ನು ವಿಸ್ತರಿಸುವ ಬಗ್ಗೆ ಯೋಜಿಸುತ್ತಿದೆ.   

Written by - Ranjitha R K | Last Updated : Mar 27, 2023, 02:43 PM IST
  • ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಇನ್ನೋವಾ ಹೈಕ್ರಾಸ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆ
  • ಮುಂಬರುವ ದಿನಗಳಲ್ಲಿ ಹೊಸ SUV ಬಿಡುಗಡೆ ಮಾಡುವ ಸಿದ್ದತೆ
  • ಹೊಸ ಟೊಯೊಟಾ ಫಾರ್ಚುನರ್ ಫೇಸ್‌ಲಿಫ್ಟ್
Toyota ಹೊರತರುತ್ತಿದೆ ಅಗ್ಗದ SUV! ವೈಶಿಷ್ಟ್ಯ ಕೂಡಾ ಬಲು ಸೊಗಸು  title=

Toyota Fortuner Facelift : ಟೊಯೊಟಾ ಇತ್ತೀಚೆಗೆ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಇನ್ನೋವಾ ಹೈಕ್ರಾಸ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.  ಮುಂಬರುವ ದಿನಗಳಲ್ಲಿ ಕಂಪನಿಯು ಭಾರತೀಯ ಮಾರುಕಟ್ಟೆಗಳಿಗೆ ಹೊಸ SUV ಅನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ. ಇವುಗಳಲ್ಲಿ ಪ್ರಮುಖವಾದದ್ದು ಅದರ ಜನಪ್ರಿಯ ಎಸ್‌ಯುವಿ ಫಾರ್ಚುನರ್. ಇದನ್ನು ಫೇಸ್‌ಲಿಫ್ಟೆಡ್ ಅವತಾರ್‌ನಲ್ಲಿ ಪುನರಾಗಮನ ಮಾಡುವ ಸಾಧ್ಯತೆಯಿದೆ. ಹೊಸ ಫಾರ್ಚುನರ್ ಹೊರತುಪಡಿಸಿ, ಟೊಯೋಟಾ ಇನ್ನೂ ಎರಡು SUV ಗಳನ್ನು ಬಿಡುಗಡೆ ಮಾಡಬಹುದು. ಲೈವ್ ಮಿಂಟ್‌ನಲ್ಲಿನ ವರದಿಯ ಪ್ರಕಾರ, ಟೊಯೊಟಾ ಮುಂದಿನ ಎರಡು ಮೂರು ವರ್ಷಗಳಲ್ಲಿ ಭಾರತದಲ್ಲಿ ತನ್ನ SUV ಲೈನ್ ಅನ್ನು ವಿಸ್ತರಿಸುವ ಬಗ್ಗೆ ಯೋಜಿಸುತ್ತಿದೆ. ಇವುಗಳಲ್ಲಿ ಒಂದು ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಫ್ರಾಂಕ್ಸ್ ಅನ್ನು ಆಧರಿಸಿದೆ. 

ಹೊಸ ಟೊಯೊಟಾ ಫಾರ್ಚುನರ್ ಫೇಸ್‌ಲಿಫ್ಟ್ :
ಫಾರ್ಚುನರ್ ಎಸ್‌ಯುವಿಯ ಮುಂಬರುವ ಆವೃತ್ತಿಯನ್ನು ಮುಂದಿನ ವರ್ಷ ಬಿಡುಗಡೆ ಮಾಡಬಹುದು. SUV ನವೀಕೃತ  ಇಂಟಿರಿಯರ್ ಮತ್ತು ಹೊಸ ಎಂಜಿನ್ ಆಯ್ಕೆಗಳೊಂದಿಗೆ ಹೊಸ ಲುಕ್ ನೊಂದಿಗೆ ಬರುವ ಸಾಧ್ಯತೆಯಿದೆ. ಇದು ಕಂಪನಿಯ TNGA-F ಆರ್ಕಿಟೆಕ್ಚರ್ ಅನ್ನು ಆಧರಿಸಿರುತ್ತದೆ. ಹೊಸ ಫಾರ್ಚುನರ್ ಹೈಬ್ರಿಡ್ ಆವೃತ್ತಿಯನ್ನು ಹೊಂದಿರಲಿದೆ ಎನ್ನುವ ನಿರೀಕ್ಷೆಯಿದೆ. ಕಂಪನಿಯು ಡೀಸೆಲ್ ಎಂಜಿನ್ ಅನ್ನು ಮುಂದುವರಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ : ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ! ಖರೀದಿಗೆ ಇದೇ ಬೆಸ್ಟ್ ಟೈಮ್

ಕಂಪನಿಯು ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಇನ್ನೋವಾ ಹೈಕ್ರಾಸ್ ಅನ್ನು ಬಿಡುಗಡೆ ಮಾಡಿದೆ. ಇವು ಎರಡೂ ಪೆಟ್ರೋಲ್ ಆವೃತ್ತಿಗಳಾಗಿದ್ದು,  ಮೈಲ್ಡ್ ಹೈಬ್ರಿಡ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ವೆರಿಯೇಂಟ್ ಆಗಿದೆ.  ಜಪಾನಿನ ಕಾರು ತಯಾರಕರು ಹೊಸ  ತ್ರೀ ರೋ SUV ಯಲ್ಲೂ ಕೆಲಸ ಮಾಡುತ್ತಿದ್ದಾರೆ. ಇದು ಭಾರತದಲ್ಲಿ ಮಹೀಂದ್ರಾ XUV700, ಹ್ಯುಂಡೈ ಅಲ್ಕಾಜರ್ ಮತ್ತು ಜೀಪ್ ಮೆರಿಡಿಯನ್‌ ನೊಂದಿಗೆ ಸ್ಪರ್ಧಿಸಬಹುದು. 

ಬರಲಿದೆ ಅಗ್ಗದ SUV : 
ಇವೆಲ್ಲವುಗಳ ಹೊರತಾಗಿ, Toyota ಸಹ ಮಾರುತಿ ಸುಜುಕಿ Fronx ಆಧಾರಿತ SUVಯನ್ನು ಅಭಿವೃದ್ಧಿಪಡಿಸುತ್ತಿದೆ. ಕಂಪನಿಯ ಇತ್ತೀಚಿನ SUV ಯ ಕೋಡ್ ನೇಮ್ A15 ಆಗಿದೆ. ವರದಿಗಳ ಪ್ರಕಾರ, ಟೊಯೊಟಾ ಎಸ್‌ಯುವಿ ವಿನ್ಯಾಸವು ಯಾರಿಸ್ ಕ್ರಾಸ್ ಮಾದರಿಯಿಂದ ಪ್ರಭಾವಿತವಾಗಿರಲಿದೆ. ಇದು 1.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಮತ್ತು 1.2-ಲೀಟರ್ ನೈಸರ್ಗಿಕವಾಗಿ ಆಸ್ಪಿರೇಟೆಡ್ ಎಂಜಿನ್ ಅನ್ನು ನೀಡುವ ಸಾಧ್ಯತೆಯಿದೆ. ಎರಡೂ ಎಂಜಿನ್‌ಗಳು ಹೈಬ್ರಿಡ್ ಆವೃತ್ತಿಗಳೊಂದಿಗೆ ಬರುವ ನಿರೀಕ್ಷೆಯಿದೆ.

ಇದನ್ನೂ ಓದಿ : ಜನಸಾಮಾನ್ಯರಿಗೆ ಮತ್ತೊಂದು ಶಾಕ್; ಬಡ್ಡಿ ದರ ಮತ್ತಷ್ಟು ಹೆಚ್ಚಳ ಸಾಧ್ಯತೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News