Viral Video: ಚಾಮರಾಜನಗರದ ಜಮೀನಿನಲ್ಲಿ ಜೋಡಿ‌ ಹುಲಿ ಪ್ರತ್ಯಕ್ಷ- ಆತಂಕದಲ್ಲಿ ಗ್ರಾಮಸ್ಥರು

Viral Video: ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಎಂಬ ಗ್ರಾಮದಲ್ಲಿ ಮಂಗಳವಾರ (ನವೆಂಬರ್ 29) ದಂದು ರೈತರ ಜಮೀನಿನಲ್ಲಿ ಎರಡು ಹುಲಿಗಳು ಕಾಣಿಸಿಕೊಂಡಿದ್ದು ಆ ಭಾಗದ ಜನರನ್ನು ಆತಂಕಕ್ಕೆ ಒಳಪಡಿಸಿವೆ. ಹುಲಿ ಓಡಾಟ, ಪೇರಿ ಕೀಳುವ ದೃಶ್ಯಗಳನ್ನು ರೈತರು ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಿದ್ದು ವೀಡಿಯೋ ವೈರಲ್ ಆಗಿದೆ.

Written by - Yashaswini V | Last Updated : Nov 30, 2022, 09:13 AM IST
  • ಮಂಗಳವಾರ (ನವೆಂಬರ್ 29) ಬೆಳಗ್ಗೆ ಕೊಡಸೋಗೆ ಗ್ರಾಮದ ರವಿ ಎಂಬ ರೈತರ ಮುಸುಕಿನ ಜೋಳದ ಹೊಲದಲ್ಲಿ ಎರಡು ಹುಲಿಗಳು ಕಾಣಿಸಿಕೊಂಡಿವೆ
  • ಕಾಡಿನಿಂದ ನಾಡಿಗೆ ಬಂದು ಹಂದಿ ಬೇಟೆಯಾಡಿರುವ ಹುಲಿಗಳು
  • ಹುಲಿ ಓಡಾಟ, ಪೇರಿ ಕೀಳುವ ದೃಶ್ಯ ರೈತರ ಕ್ಯಾಮರಾದಲ್ಲಿ ಸೆರೆ
Viral Video: ಚಾಮರಾಜನಗರದ ಜಮೀನಿನಲ್ಲಿ ಜೋಡಿ‌ ಹುಲಿ ಪ್ರತ್ಯಕ್ಷ- ಆತಂಕದಲ್ಲಿ ಗ್ರಾಮಸ್ಥರು  title=
Tigers in Village- Video Viral

Viral Video: ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳೆಲ್ಲಾ ನಾಡಿನತ್ತ ಆಗಮಿಸತೊಡಗಿವೆ. ಕಳೆದ ಒಂದು ತಿಂಗಳ ಹಿಂದೆ ಕೆಆರ್ಎಸ್ ಬೃಂದಾವನದಲ್ಲಿ ಪ್ರತ್ಯಕ್ಷವಾಗಿರುವ ಚಿರತೆ ಆಗಾಗ್ಗೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದು ಎತ್ತ ಬೋನ್ ಇಟ್ಟರೂ ಬೋನಿಗೆ ಬೀಳದೆ ಜನರನ್ನು ಆತಂಕದಲ್ಲಿಯೇ ಕಾಲ ಕಳೆಯುವಂತೆ ಮಾಡಿದೆ. ಇದೀಗ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಜೋಡಿ ಹುಲಿಗಳು ಕಾಣಿಸಿಕೊಂಡಿದ್ದು ರೈತರನ್ನು ಬೆಚ್ಚಿ ಬೀಳಿಸಿವೆ.

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಎಂಬ ಗ್ರಾಮದಲ್ಲಿ ಮಂಗಳವಾರ (ನವೆಂಬರ್ 29) ದಂದು ರೈತರ ಜಮೀನಿನಲ್ಲಿ ಎರಡು ಹುಲಿಗಳು ಕಾಣಿಸಿಕೊಂಡಿದ್ದು ಆ ಭಾಗದ ಜನರನ್ನು ಆತಂಕಕ್ಕೆ ಒಳಪಡಿಸಿವೆ. ಹುಲಿ ಓಡಾಟ, ಪೇರಿ ಕೀಳುವ ದೃಶ್ಯಗಳನ್ನು ರೈತರು ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಿದ್ದು ವೀಡಿಯೋ ವೈರಲ್ ಆಗಿದೆ.

ಇದನ್ನೂ ಓದಿ- Cobra Video: ಒಂದೇ ಬಾರಿಗೆ ಲೀಟರ್ ನೀರು ಕುಡಿದ ಹಾವು: ಯಾಕೆ ಅಂತ ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ!!

ಮಂಗಳವಾರ  (ನವೆಂಬರ್ 29) ಬೆಳಗ್ಗೆ  ಕೊಡಸೋಗೆ ಗ್ರಾಮದ ರವಿ ಎಂಬ ರೈತರ ಮುಸುಕಿನ ಜೋಳದ ಹೊಲದಲ್ಲಿ ಎರಡು ಹುಲಿಗಳು ಕಾಣಿಸಿಕೊಂಡಿದ್ದು, ಸಂಜೆ ಹಂದಿಯೊಂದನ್ನು ಬೇಟೆಯಾಡಿ ತಿಂದು ಕಾಡಿನತ್ತ ಮರಳಿವೆ ಎಂದು ಹೇಳಲಾಗುತ್ತಿದೆ. ಬೇಟೆಯಾಡಿದ ಬಳಿಕ ಆ ಜೋಡಿ ಹುಲಿಗಳು ಕಾಡಿನತ್ತ ಮರಳಿವೆ ಎನ್ನಲಾಗುತ್ತಿದ್ದರೂ ಕೂಡ ರೈತರಲ್ಲಿ ಆತಂಕ ಮಾತ್ರ ಕಡಿಮೆಯಾಗಿಲ್ಲ. 

ಇದನ್ನೂ ಓದಿ- ಸೊಂಡಿಲಿನಿಂದ ಡ್ರಮ್ ನುಡಿಸುತ್ತಿರುವ ಆನೆ.! ಗಜರಾಜನ ಸಂಗೀತ ಪ್ರೀತಿಗೆ ಸಾಕ್ಷಿ ಈ ವಿಡಿಯೋ

ಇನ್ನು ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿರುವ ತೆರಕಣಾಂಬಿ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಸದ್ಯ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಕಾಡಿನಿಂದ ನಾಡಿಗೆ ಪ್ರವೇಶಿಸಿರುವ ಹುಲಿಗಳನ್ನು ಹಿಡಿಯಲು ಸೂಕ್ತ ಕ್ರಮ ಕೈಗೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆಕ್ಲಿಕ್ ಮಾಡಿ.

Trending News