ಸೊಂಡಿಲಿನಿಂದ ಡ್ರಮ್ ನುಡಿಸುತ್ತಿರುವ ಆನೆ.! ಗಜರಾಜನ ಸಂಗೀತ ಪ್ರೀತಿಗೆ ಸಾಕ್ಷಿ ಈ ವಿಡಿಯೋ

Viral video : ಆನೆ ಎದುರಾದಾಗ ಅರೆ ಕ್ಷಣ ಭಯವಾದರೂ ಅದರ ಮೇಲೆ ಪ್ರೀತಿ ಕೂಡಾ ಹಾಗೆಯೇ ಮೂಡುತ್ತದೆ. ಆನೆಗೆ ಸಂಬಂಧ ಪಟ್ಟ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುತ್ತವೆ.   

Written by - Ranjitha R K | Last Updated : Nov 29, 2022, 04:12 PM IST
  • ಆನೆಗಳು ಈ ಭೂಮಿಯ ಮೇಲಿರುವ ಅತ್ಯಂತ ಬುದ್ದಿವಂತ ಪ್ರಾಣಿ.
  • ಆನೆಗೆ ನಮ್ಮ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನ ಕೂಡಾ ಇದೆ
  • ಆನೆಗೆ ಸಂಬಂಧ ಪಟ್ಟ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್
ಸೊಂಡಿಲಿನಿಂದ ಡ್ರಮ್ ನುಡಿಸುತ್ತಿರುವ ಆನೆ.! ಗಜರಾಜನ ಸಂಗೀತ ಪ್ರೀತಿಗೆ ಸಾಕ್ಷಿ ಈ ವಿಡಿಯೋ   title=
Elephant Viral Video (photo twitter)

Viral video : ಆನೆಗಳು ಈ ಭೂಮಿಯ ಮೇಲಿರುವ ಅತ್ಯಂತ ಬುದ್ದಿವಂತ ಪ್ರಾಣಿ. ಆನೆಗಳು ಎಂಥಹ ಬುದ್ದಿ ಮತ್ತೆಯನ್ನು ಹೊಂದಿರುತ್ತವೆ ಎನ್ನುವುದು ಈಗಾಗಲೇ ಅನೇಕ ಘಟನೆಗಳಿಂದ ಸಾಬೀತಾಗಿದೆ. ಆನೆಗೆ ನಮ್ಮ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನ ಕೂಡಾ ಇದೆ. ಆನೆ ವಿಶಾಲಕಾಯವನ್ನು ಹೊಂದಿರುವ ಪ್ರಾಣಿ. ಆನೆ ಎದುರಾದಾಗ ಅರೆ ಕ್ಷಣ ಭಯವಾದರೂ ಅದರ ಮೇಲೆ ಪ್ರೀತಿ ಕೂಡಾ ಹಾಗೆಯೇ ಮೂಡುತ್ತದೆ. ಆನೆಗೆ ಸಂಬಂಧ ಪಟ್ಟ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುತ್ತವೆ. 

ಮೊದಲೇ ಹೇಳಿದಂತೆ ಆನೆ ಅತಿ ಬುದ್ದಿವಂತ ಪ್ರಾಣಿ. ಅನೇಕ ದೇವಸ್ಥಾನಗಲ್ಲಿ ಕೂಡಾ ಆನೆಯನ್ನು ಸಾಕಾಲಾಗುತ್ತದೆ. ಅಲ್ಲಿ ಆನೆಗಳಿಗೆ ಆಹಾರ ಅಥವಾ ಹಣ ನೀಡುವಾಗ ತನ್ನ ಸೊಂಡಿಲಿನಿಂದ ಆಶೀರ್ವಾದ ನೀಡುತ್ತದೆ. ಹಾಗೆ ಆಶೀರ್ವಾದ ನೀಡುವಾಗಲೂ ಅದು ಮಕ್ಕಳು, ಹಿರಿಯರು ಎನ್ನುವುದನ್ನು ಗಮನಿಸಿಯೇ  ತನ್ನ ಸೊಂಡಿಲನ್ನು ಮೇಲೆತ್ತುತ್ತದೆ. 

ಇದನ್ನೂ ಓದಿ : Viral Video: ಜುಟ್ಟು ಎಳೆದಾಡಿಕೊಂಡು ಪರಸ್ಪರರಿಗೆ ಗೂಸಾ ಕೊಟ್ಟ ಹುಡುಗಿಯರು.. ಕಾರಣ ಏನು?

ಇದೀಗ ಆನೆಯ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದು ಝೂನಲ್ಲಿರುವ ಆನೆ ಎನ್ನುವುದು ವಿಡಿಯೋ ನೋಡುವಾಗ ತಿಳಿಯುತ್ತದೆ.  ಇಲ್ಲಿ ವ್ಯಕ್ತಿಯೊಬ್ಬರು ಆನೆಯ ಮುಂದೆ ಡ್ರಮ್ ಬಾರಿಸುತ್ತಿರುವುದು ಕಾಣಿಸುತ್ತದೆ. ಆಣೆ ಕೂಡಾ ಆ ಡ್ರಮ್ ದನಿಗೆ ಕಿವಿಯಾಗಿದೆ. ಆ ಮಧುರ ನಾದಕ್ಕೆ ತಲೆಯಾಡಿಸುತ್ತಿದೆ. 

ಸ್ವಲ್ಪ ಸಮಯದ ಬಳಿಕ ವ್ಯಕ್ತಿ ಡ್ರಮ್ ಬಾರಿಸುವುದನ್ನು ನಿಲ್ಲಿಸುತ್ತಾರೆ. ಆ ವ್ಯಕ್ತಿ ಹಾಗೆಯೇ ಆನೆಯನ್ನು ದಿಟ್ಟಿಸಿ ನೋಡುತ್ತಾರೆ. ಆನೇ ಒಂದು ಕ್ಷಣ ಯೋಚನೆ ಮಾಡಿ   ಆ ವ್ಯಕ್ತಿಯ ಬಳಿಯಿದ್ದ ಡ್ರಮ್ ಅನ್ನು ತನ್ನ ಬಳಿಗೆ ಎಳೆದುಕೊಳ್ಳುತ್ತದೆ. ತನ್ನ ಸೊಂಡಿಲಿನ ಮೂಲಕ ತಾನು ಕೂಡಾ ಡ್ರಮ್ ಬಾರಿಸಲು ಆರಂಭಿಸುತ್ತದೆ. 

 

ಇದನ್ನೂ ಓದಿ : Viral Video: ಸಾರ್ವಜನಿಕರ ಎದುರೆ ವಧುವಿನ ಜೊತೆ ವರ ಮಾಡಿದ ಈ ಕೃತ್ಯ, ನಂತರ ನಡೆದಿದ್ದು ... ತಾಂಡವ
  
ಎರಿಕ್ ಸ್ಕಿಫರ್ ಎಂಬವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.  ಈ ವಿಡಿಯೋ 470 ಸಾವಿರಕ್ಕೂ ಹೆಚ್ಚು  ವ್ಯೂವ್ಸ್ ಪಡೆದುಕೊಂಡಿದೆ. ಮಾತ್ರವಲ್ಲ ವೀಕ್ಷಕರು ಕೂಡಾ ಈ ವಿಡಿಯೋಗೆ ಸಾಕಷ್ಟು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.  

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

 

Trending News