Cobra Video: ಒಂದೇ ಬಾರಿಗೆ ಲೀಟರ್ ನೀರು ಕುಡಿದ ಹಾವು: ಯಾಕೆ ಅಂತ ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ!!

Cobra Video: ಹಾವುಗಳಿಗೆ ಸಂಬಂಧಿಸಿದ ಅನೇಕ ವಿಡಿಯೋಗಳನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡಿರುತ್ತೇವೆ. ಆದರೆ ಇಂದು ಒಂದು ವಿಡಿಯೋದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಇದರಲ್ಲಿ ಹಾವೊಂದು ಒಂದೇ ಬಾರಿಗೆ ಒಂದು ಲೀಟರ್ ನೀರು ಕುಡಿದಿದೆ. ಕಾರಣ ಏನು ಎಂಬುದನ್ನು ಮುಂದಕ್ಕೆ ತಿಳಿದುಕೊಳ್ಳೋಣ.

Written by - Bhavishya Shetty | Last Updated : Nov 30, 2022, 05:23 AM IST
    • ಹಾವುಗಳಿಗೆ ಸಂಬಂಧಿಸಿದ ಅನೇಕ ವಿಡಿಯೋಗಳನ್ನು ನಾವು ನೋಡಿರುತ್ತೇವೆ
    • ಹಾವೊಂದು ಒಂದೇ ಬಾರಿಗೆ ಒಂದು ಲೀಟರ್ ನೀರು ಕುಡಿದಿದೆ
    • ಕಾರಣ ಏನು ಎಂಬುದನ್ನು ಮುಂದಕ್ಕೆ ತಿಳಿದುಕೊಳ್ಳೋಣ
Cobra Video: ಒಂದೇ ಬಾರಿಗೆ ಲೀಟರ್ ನೀರು ಕುಡಿದ ಹಾವು: ಯಾಕೆ ಅಂತ ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ!!  title=
cobra

Cobra Video: ನಾಗರಹಾವು ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು ಕಡಿಮೆ. ಅವುಗಳು ತುಂಬಾ ಅಪಾಯಕಾರಿ ಹಾವು. ಆದರೆ ಇವುಗಳ ಮೇಲೂ ಅಪಾಯ ಮಾಡುವ ಅನೇಕ ಜೀವಿಗಳು ಭೂಮಿ ಮೇಲೆ ಇರುವುದರಿಂದ ಹೊರಗೆ ಕಾಣಿಸಿಕೊಳ್ಳುವುದು ಅಪರೂಪ. ಇನ್ನು ನಾಗರ ಹಾವುಗಳು ಹೆಚ್ಚಾಗಿ ಅಮೆಜಾನ್ ಕಾಡುಗಳಲ್ಲಿ ಸಂಚರಿಸುತ್ತವೆ. ಇಂಟರ್ನೆಟ್ ಬಳಕೆ ಹೆಚ್ಚಳದಿಂದ ಅನೇಕ ಜನರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವೀಡಿಯೊಗಳನ್ನು ವೀಕ್ಷಿಸಲು ಆಸಕ್ತಿ ಹೊಂದಿದ್ದಾರೆ.

ಇದನ್ನೂ ಓದಿ: Viral Video: ಮದುವೆ ಶಾಸ್ತ್ರದ ವೇಳೆಯೇ ಲಿಪ್‌ಲಾಕ್‌ ಮಾಡಿದ ನವ ಜೋಡಿ..!

ಹಾವುಗಳಿಗೆ ಸಂಬಂಧಿಸಿದ ಅನೇಕ ವಿಡಿಯೋಗಳನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡಿರುತ್ತೇವೆ. ಆದರೆ ಇಂದು ಒಂದು ವಿಡಿಯೋದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಇದರಲ್ಲಿ ಹಾವೊಂದು ಒಂದೇ ಬಾರಿಗೆ ಒಂದು ಲೀಟರ್ ನೀರು ಕುಡಿದಿದೆ. ಕಾರಣ ಏನು ಎಂಬುದನ್ನು ಮುಂದಕ್ಕೆ ತಿಳಿದುಕೊಳ್ಳೋಣ.

ಈ ನಾಗರಹಾವು ಏಳು ದಿನಗಳವರೆಗೆ ಮೀನುಗಾರಿಕೆ ಬಲೆಗಳಲ್ಲಿ ಸಿಲುಕಿಕೊಂಡಿದೆ. ಸ್ಥಳೀಯರು ಸಿಕ್ಕಿಬಿದ್ದ ಹಾವುಗಳನ್ನು ಹೊರ ತೆಗೆದ ದೃಶ್ಯಗಳನ್ನು ಈ ವಿಡಿಯೋದಲ್ಲಿ ನೋಡಬಹುದು. ಇದೇ ಸಂದರ್ಭದಲ್ಲಿ ಹಾವಿಗೆ ನೀರು ಕುಡಿಯಲು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

 

 

ನಿರ್ಜನ ಪ್ರದೇಶದಲ್ಲಿ ಹಾವು ಬಲೆ ಬಿದ್ದು, ಒದ್ದಾಡಿದೆ. ಇದನ್ನು ಕಂಡ ಸ್ಥಳೀಯರು ಕೂಡಲೇ ಹಾವು ಹಿಡಿಯುವವರಿಗೆ ಕರೆ ಮಾಡಿ ಹಾವನ್ನು ಹೊರ ತೆಗೆಯಲು ಯತ್ನಿಸಿದ್ದಾರೆ. ಒಂದು ವಾರದಿಂದ ಹಾವು ಬಲೆಯಲ್ಲಿ ಸಿಲುಕಿ ಬಾಯಾರಿಕೆಯಾಗಿರುವುದನ್ನು ಗಮನಿಸಿದ ಉರಗ ತಜ್ಞರು, ಹಾವಿಗೆ ಬಾಟಲಿ ಸಮೇತ ನೀರು ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಹಾವು ನೀರು ಕುಡಿಯಲು ಆರಂಭಿಸುತ್ತದೆ.

ಹೀಗೆ ಎರಡು ನಿಮಿಷಗಳ ಕಾಲ ಹಾವಿಗೆ ನೀರು ಹಾಕಿ ಕೊನೆಗೆ ಹಾವನ್ನು ಬಲೆಯಿಂದ ಬಿಡಿಸುತ್ತಾರೆ. ನಂತರ ಈ ಹಾವನ್ನು ಚೀಲದಲ್ಲಿ ಇಟ್ಟುಕೊಂಡು ಅರಣ್ಯ ಪ್ರದೇಶದಲ್ಲಿ ಬಿಡಲಾಗುತ್ತದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಮಾರ್ಚ್ 2024 ರ ವೇಳೆಗೆ ಏರ್ ಇಂಡಿಯಾ, ವಿಸ್ತಾರಾ ವಿಲೀನ

ಉರಗ ತಜ್ಞರು ಈ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋವನ್ನು 78 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕ ಮಂದಿ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆಕ್ಲಿಕ್ ಮಾಡಿ.

Trending News