Alien Viral Video: ಅಮೆರಿಕದಲ್ಲಿ ಪತ್ತೆಯಾದ ಏಲಿಯನ್‌ಗಳು.. ಅಚ್ಚರಿ ಮೂಡಿಸುವ ವಿಡಿಯೋ ವೈರಲ್!

Alien Viral Video: ಇತ್ತೀಚೆಗಷ್ಟೇ ಅಮೆರಿಕದ ಮಾಲ್‌ನಿಂದ ಏಲಿಯನ್‌ಗಳು ಹೊರಬರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

Written by - Chetana Devarmani | Last Updated : Jan 7, 2024, 08:48 AM IST
  • ಅಮೆರಿಕದ ಮಾಲ್‌ ಬಳಿ ಏಲಿಯನ್‌ ಪತ್ತೆ!
  • ಅಮೆರಿಕದಲ್ಲಿ ಪತ್ತೆಯಾದ ಅನ್ಯಗ್ರಹ ಜೀವಿ?
  • ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌
Alien Viral Video: ಅಮೆರಿಕದಲ್ಲಿ ಪತ್ತೆಯಾದ ಏಲಿಯನ್‌ಗಳು.. ಅಚ್ಚರಿ ಮೂಡಿಸುವ ವಿಡಿಯೋ ವೈರಲ್!  title=
Alien

Alien Viral Video: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಲಕ್ಷಾಂತರ ವಿಡಿಯೋಗಳು ವೈರಲ್ ಆಗುತ್ತಿವೆ. ಆದರೆ ಇತ್ತೀಚೆಗಷ್ಟೇ ಮಾಲ್‌ನಲ್ಲಿ ಅನ್ಯಗ್ರಹ ಜೀವಿಯೊಬ್ಬ ಓಡಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಹಲವರಿಗೆ ಆಶ್ಚರ್ಯವಾಗಬಹುದು. ಈ ವಿಡಿಯೋ ಭೂಮಿಯ ಮೇಲೆ ಇನ್ನೂ ಅನ್ಯಗ್ರಹ ಜೀವಿಗಳು ಇದ್ದಾರೆಯೇ? ಎಂಬ ಚರ್ಚೆ ಹುಟ್ಟು ಹಾಕಿದೆ. ಆದರೆ ಈ ವಿಡಿಯೋದಲ್ಲಿ ನಿಜವಾಗಿಯೂ ಅನ್ಯಗ್ರಹ ಜೀವಿ ಸುತ್ತಾಡುತ್ತಿದೆಯೇ? ವೈರಲ್ ಆದ ವಿಡಿಯೋ ನಿಜವೇ? ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.

ಇದನ್ನೂ ಓದಿ: ಲಕ್ಷದ್ವೀಪದಲ್ಲಿ ಪ್ರಧಾನಿ ಮೋದಿ ಇನ್‌ ಕೂಲ್‌ ಮೂಡ್‌..! ಫೋಟೋಸ್‌ ನೋಡಿ 

ಅಮೆರಿಕದ ಮಾಲ್‌ನಿಂದ ಏಲಿಯನ್‌ ಹೊರ ಹೋಗುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ. ಅನ್ಯಗ್ರಹ ಜೀವಿ 10 ಅಡಿಗೂ ಹೆಚ್ಚು ಎತ್ತರವಿದ್ದು, ಮಾಲ್ ನ ಬಳಿಯಿದ್ದ ಜನರೆಲ್ಲ ಕಿರುಚಿಕೊಂಡು ಗಾಬರಿಗೊಂಡು ಓಡಿಹೋಗುವುದನ್ನ ಈ ವಿಡಿಯೋದಲ್ಲಿ ನೋಡಬಹುದು. ಅನ್ಯಲೋಕದ 10 ಅಡಿ ಎತ್ತರದ ವ್ಯಕ್ತಿ ಮಾಲ್‌ನಿಂದ ಹೊರಬರುತ್ತಿರುವುದು ಈ ವಿಡಿಯೋದಲ್ಲಿ ಕಂಡುಬಂದಿದೆ.

 

 

ಅಮೆರಿಕದ ಮಿಯಾಮಿ ಮಾಲ್ ನಲ್ಲಿ ಜನವರಿ 1ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಹೊಸ ವರ್ಷಾಚರಣೆ ಅಂಗವಾಗಿ ಹಲವು ಮಂದಿ ಮಾಲ್‌ಗೆ ಆಗಮಿಸಿದ್ದರು. ಈ ವೇಳೆ ಏಲಿಯನ್‌ ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಲ್ಲಿಗೆ ಬಂದು ಅನ್ಯಗ್ರಹ ಜೀವಿಯನ್ನು ಸುತ್ತುವರೆದಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ: ಏರ್‌ಪ್ಲೇನ್ ಮೂಡ್‌ನಲ್ಲಿ ಇಂಟರ್ನೇಟ್‌ ಬಳಸಲು ಈ ಟ್ರೀಕ್‌ ಫಾಲೋ ಮಾಡಿ.. 

ಈ ಕುರಿತು ಮಿಯಾಮಿ ಪೊಲೀಸ್ ಇಲಾಖೆ ಹೇಳಿಕೆ ನೀಡಿದ್ದು, ಕೆಲವರು ಮಾಲ್ ನ ವಿಡಿಯೋವನ್ನು ಶೇರ್ ಮಾಡಿ ಅನ್ಯಗ್ರಹ ಜೀವಿಗಳು ಓಡಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿಸಿದ್ದಾರೆ. ಇಲ್ಲಿಯವರೆಗೆ ಯಾವುದೇ ಅನ್ಯಗ್ರಹ ಜೀವಿಗಳು ಅಲ್ಲಿಗೆ ಬಂದಿಲ್ಲ ಮತ್ತು ಮಾಲ್‌ನಿಂದ ಯಾರೂ ಓಡಿಹೋಗಿಲ್ಲ ಎಂದು ತಿಳಿಸಿದ್ದಾರೆ. ಕೆಲವರು ಜನರ ದಾರಿತಪ್ಪಿಸಲು ಇಂತಹ ವಿಡಿಯೋಗಳನ್ನು ಸೃಷ್ಟಿಸಿದ್ದಾರೆ. ಏಲಿಯನ್‌ಗಳು ಇದ್ದಾರೆ ಎಂಬ ನಂಬಿಕೆ ಇದೆ, ಆದರೆ ಇನ್ನೂ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News