ಕ್ರಿಕೆಟ್‌ ಪಂದ್ಯದ ನಡುವೆ ಸ್ಟೇಡಿಯಂನಲ್ಲಿಯೇ "ಪ್ರೇಮಿಗಳ ಕುಚುಕುಚು"..! ಪ್ರೇಕ್ಷಕರಿಗೆ ಫ್ರೀ ಶೋ

AUS Vs PAK couple romance : ಕ್ರಿಕೆಟ್‌ ಲೈವ್ ಪಂದ್ಯದ ವೇಳೆ ಪ್ರೇಮಿಗಳಿಬ್ಬರು ಸರಸ ಸಲ್ಲಾಪದಲ್ಲಿ ಮುಳುಗಿದ್ದ ಘಟನೆ ನಡೆದಿದೆ. ಈ ದೃಶ್ಯ ನೋಡಿ ಕ್ಯಾಮೆರಾಮ್ಯಾನ್‌ ಸುಮ್ನೆ ಇರ್ತಾನಾ.. ಆ ಪ್ರೇಮಿಗಳ ರೊಮ್ಯಾನ್ಸ್‌‌ ಅನ್ನ ಝೂಮ್‌ ಹಾಕಿ ಹಾಕಿ ತೋರಿಸಿದ್ದಾರೆ. ಸಧ್ಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Written by - Krishna N K | Last Updated : Dec 30, 2023, 05:13 PM IST
  • ಕ್ರಿಕೆಟ್‌ ಲೈವ್ ಪಂದ್ಯದ ವೇಳೆ ಪ್ರೇಮಿಗಳ ಸರಸ ಸಲ್ಲಾಪ
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌
  • ಮೈದಾನದಲ್ಲೇ ಮೈಮರೆತು ಕುಚುಕುಚು ನಡೆಸಿದ ಲವರ್ಸ್‌
ಕ್ರಿಕೆಟ್‌ ಪಂದ್ಯದ ನಡುವೆ ಸ್ಟೇಡಿಯಂನಲ್ಲಿಯೇ "ಪ್ರೇಮಿಗಳ ಕುಚುಕುಚು"..! ಪ್ರೇಕ್ಷಕರಿಗೆ ಫ್ರೀ ಶೋ title=

Couple romance at stadium : ಪ್ರೀತಿಗೆ ಹೊತ್ತು ಗೊತ್ತಿಲ್ಲ ಅಂತಾರಲ್ಲ ಒಮ್ಮೊಮ್ಮೆ ಅದು ನಿಜ ಅನಿಸುತ್ತದೆ. ಇಷ್ಟು ದಿನ ಪಾರ್ಕ್‌, ಸಂದಿ-ಗೊಂದಿ, ಸಿನಿಮಾ ಥಿಯೇಟರ್‌ನಲ್ಲಿ ಮೈಮರೆಯುತ್ತಿದ್ದ ಜೋಡಿಗಳು ಇತ್ತೀಚಿಗೆ ಮೆಟ್ರೋದಲ್ಲಿ ಬಹಿರಂಗವಾಗಿ ರೊಮ್ಯಾನ್ಸ್‌ ಮಾಡೋಕೆ ಶುರು ಮಾಡಿದ್ದಾರೆ. ಅಷ್ಟೇ ಅಲ್ಲ, ಅದಕ್ಕೂ ಮೀರಿ ಇದೀಗ ಸಾವಿರಾರು ಜನರಿದ್ದ ಸ್ಟೇಡಿಯಂನಲ್ಲೇ ಲವರ್ಸ್‌ಗಳಿಬ್ಬರು ಮೈಮರೆತು ಕುಚುಕುಚು ನಡೆಸಿದ ಘಟನೆ ಪ್ರೇಕ್ಷಕರನ್ನು ದಂಗುಬಡಿಸಿದೆ.

ಹೌದು.. ಕ್ರಿಕೆಟ್‌ ಲೈವ್ ಪಂದ್ಯದ ವೇಳೆ ಪ್ರೇಮಿಗಳಿಬ್ಬರು ಸರಸ ಸಲ್ಲಾಪದಲ್ಲಿ ಮುಳುಗಿದ್ದ ಘಟನೆ ನಡೆದಿದೆ. ಲವರ್ಸ್‌ ಪ್ರೇಮದಾಟ ಕ್ಯಾಮೆರಾಮ್ಯಾನ್‌ ಕಣ್ಣಿಗೆ ಬಿದ್ದಿದ್ದು, ಅದನ್ನು ಸ್ಕ್ರೀನ್‌ಗೆ ಲೈವ್‌ ಬಿಟ್ಟು ಪ್ರೇಕ್ಷಕರಿಗೆ ಫ್ರೀ ಶೋ ಮಾಡಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಚಿತ್ರ ವಿಚಿತ್ರವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ. ಈ ಘಟನೆ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿದ್ದ ದ್ವಿತೀಯ ಟೆಸ್ಟ್​ ಪಂದ್ಯದ ವೇಳೆ ನಡೆದಿದೆ.  

ಇದನ್ನೂ ಓದಿ: ಚುಮುಚುಮು ಚಳಿಗೆ ಬಿಸಿಬಿಸಿ ಬಯಕೆ..! ಸಿರಿಯಲ್‌ ನಟಿ ಹಾಟ್‌ ವಿಡಿಯೋ ವೈರಲ್‌

ಲೈವ್ ಪಂದ್ಯದ ವೇಳೆ ಪ್ರೇಮಿಗಳಿಬ್ಬರು ಮೈಮರೆತು ಪ್ರೇಮದಾಟದಲ್ಲಿ ನಿರತರಾಗಿದ್ದರು. ಇದು ಕ್ಯಾಮೆರಾಮ್ಯಾನ್‌ ಕಣ್ಣಿಗೆ ಬಿದ್ದಿದೆ. ಹುಡುಕಾಡುತ್ತಿದ್ದ ಬಳ್ಳಿ ಕಾಲಡಿಯಲ್ಲೇ ಸಿಕ್ಕಂತೆ ಇಂತಹ ದೃಶ್ಯ ನೋಡಿ ಕ್ಯಾಮೆರಾಮ್ಯಾನ್‌ ಸುಮ್ನೆ ಇರ್ತಾನಾ.. ಆ ಪ್ರೇಮಿಗಳ ರೊಮ್ಯಾನ್ಸ್‌‌ ಅನ್ನ ಝೂಮ್‌ ಹಾಕಿ ಹಾಕಿ ತೋರಿಸಿದ್ದಾರೆ. ಗ್ರೌಂಡ್‌ನಲ್ಲಿದ್ದ ಸ್ಕ್ರೀನ್‌ ಮೇಲೆ ಈ ಪ್ರೇಮಿಗಳು ರೊಮ್ಯಾನ್ಸ್‌ ಲೈವ್‌ ಟೆಲಿಕಾಸ್ಟ್ ಆಗಿದೆ, ಇದನ್ನು ನೋಡಿ ಲವರ್ಸ್ ಗಾಬರಿಯಾಗಿದ್ದಾರೆ. ಅಲ್ಲದೆ, ಆಟಗಾರರು ಸಹ ಕೆಲಕಾಲ ಶಾಕ್‌ ಆದರು.

ಮೈದಾನದಲ್ಲಿ ನೆರೆದಿದ್ದ ಜನರೆಲ್ಲಾ ಸ್ಕ್ರೀನ್‌ ಮೇಲೆ ವಿಡಿಯೋ ಬರುತ್ತಿದ್ದಂತೆ ಜೋರಾಗಿ ಕಿರುಚಾಡಿ ನಕ್ಕಿದ್ದಾರೆ. ಅಲ್ಲಿ ನೆರೆದಿದ್ದ ಜನರೆಲ್ಲಾ ಒನ್ಸ್‌ ಮೋರ್‌ ಅಂತ ಕೇಕೆ ಹಾಕಿದರು. ಆಗ ಆ ಯುವಕ ಜಾಕೆಟ್‌ನಲ್ಲಿ ತನ್ನ ಮುಖ ಮುಚ್ಚಿಕೊಂಡು ಅಲ್ಲಿಂದ ಎಸ್ಕೇಪ್‌ ಆದ. ಇತ್ತ ಹುಡುಗಿ ಕೂಡ ಯಾರಿಗೂ ಗೊತ್ತಾಗದಂತೆ ಮೈದಾನದಿಂದ ಹೊರಗೆ ಹೋದಳು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News