ಚುಮುಚುಮು ಚಳಿಗೆ ಬಿಸಿಬಿಸಿ ಬಯಕೆ..! ಸಿರಿಯಲ್‌ ನಟಿ ಹಾಟ್‌ ವಿಡಿಯೋ ವೈರಲ್‌

Shrirasthu Shubhamasthu Serial : ಜನ ಮೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಶ್ರೀರಸ್ತು ಶುಭಮಸ್ತು ಧಾರಾವಾಹಿ ಖ್ಯಾತಿಯ ಪೂರ್ಣಿ ಹಾಟ್‌ ರೊಮ್ಯಾಂಟಿಕ್‌ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..

Written by - Krishna N K | Last Updated : Dec 30, 2023, 03:47 PM IST
  • ಶ್ರೀರಸ್ತು ಶುಭಮಸ್ತು ಧಾರಾವಾಹಿ ಖ್ಯಾತಿಯ ಪೂರ್ಣಿ ಹಾಟ್‌ ರೊಮ್ಯಾಂಟಿಕ್‌ ವಿಡಿಯೋ ವೈರಲ್‌
  • ಪೂರ್ಣಿ ಪಾತ್ರದ ಮೂಲಕ ಫ್ಯಾನ್ಸ್‌ ಮನಗೆದ್ದಿರುವ ಲಾವಣ್ಯ
  • ನಟಿ ಲಾವಣ್ಯ ತಮ್ಮ ಪತಿ ಶಶಿ ಜೊತೆ ರೀಲ್ಸ್‌ಗೆ ಹೆಜ್ಜೆ ಹಾಕಿರುವ ವಿಡಿಯೋ
ಚುಮುಚುಮು ಚಳಿಗೆ ಬಿಸಿಬಿಸಿ ಬಯಕೆ..! ಸಿರಿಯಲ್‌ ನಟಿ ಹಾಟ್‌ ವಿಡಿಯೋ ವೈರಲ್‌ title=

Actress Lavanya viral video : ನಟಿ ಲಾವಣ್ಯ ಅಂದ್ರೆ ತಕ್ಷಣ ಗೊತ್ತಾಗುತ್ತೋ ಇಲ್ವೋ ನಿಮ್ಗೆ, ಆದ್ರೆ ಪೂರ್ಣಿ ಅಂದ್ರೆ ಥಟ್‌ ಅಂತ ಶ್ರೀರಸ್ತು ಶುಭಮಸ್ತು ಸಿರಿಯಲ್‌ ನೆನಪಾಗುತ್ತೆ. ಸಧ್ಯ ಪೂರ್ಣಿ ಪಾತ್ರದ ಮೂಲಕ ಫ್ಯಾನ್ಸ್‌ ಮನಗೆದ್ದಿರುವ ಲಾವಣ್ಯಗೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅಲ್ಲದೆ, ಜೊತೆಯಲ್ಲಿರುವ ಹುಡುಗ ಯಾರು ಅಂತ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಶ್ರೀರಸ್ತು ಶುಭಮಸ್ತು ಸೀರಿಯಲ್‌ ನಟಿ ಲಾವಣ್ಯ ತಮ್ಮ ಪತಿ ಶಶಿ ಜೊತೆ ರೀಲ್ಸ್‌ಗೆ ಹೆಜ್ಜೆ ಹಾಕಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ ಎನ್ನುತ್ತಾ ಸಖತ್‌ ಹಾಟ್‌ ಆಗಿ ಪತಿ ಜೊತೆ ರೊಮ್ಯಾನ್ಸ್‌ ಮಾಡಿದ್ದಾರೆ. ವಿಡಿಯೋದಲ್ಲಿರುವ ವ್ಯಕ್ತಿ ಲಾವಣ್ಯ ಪತಿ ಅಂತ ಗೋತ್ತಿರದವರು, ಯಾರುದು ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಇನ್ನೂ ಹಲವರು ಸೂಪರ್‌ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.

 
 
 
 

 
 
 
 
 
 
 
 
 
 
 

A post shared by Zee Kannada (@zeekannada)

ಇದನ್ನೂ ಓದಿ: Salaar: ಶೀಘ್ರದಲ್ಲೇ OTT ವೇದಿಕೆಗೆ ಎಂಟ್ರಿ ಕೊಡಲಿರುವ ಸಲಾರ್..!‌ ಯಾವಾಗ ಗೊತ್ತಾ?

ಲಾವಣ್ಯ ಅವರು ಡಾನ್ಸ್‌ ಮಾಡಿರುವುದು ತಮ್ಮ ರಿಯಲ್‌ ಪತಿ ಜೊತೆ ಅವರ ಹೆಸರು ಶಶಿ. ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಸಧ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೋಡಿ ನಂಬರ್‌ 1 ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಶೋನ ಕಳೆದ ಕೆಲ ಸಂಚಿಕೆಗಳಲ್ಲಿ ಅಣ್ಣಯ್ಯ ಚಿತ್ರದ ಹಾಡಿಗೆ ನೃತ್ಯ ಮಾಡಿ ಪ್ರೇಮದ ಕಿಚ್ಚು ಹೊತ್ತಿಸಿದ್ದರು. ಅಲ್ಲದೆ, ಲಾವಣ್ಯ ದಂಪತಿ ಪ್ರದರ್ಶನಕ್ಕೆ ಫ್ಯಾನ್ಸ್​ ಫಿದಾ ಆಗಿದ್ದರು.

ಇದೀಗ ಈ ಜೋಡಿ ಸಕತ್​ ರೊಮ್ಯಾನ್ಸ್​ ಮಾಡಿದ್ದು, ಈ ಕುರಿತು ವಿಡಿಯೋವನ್ನು ಜೀ ಕನ್ನಡ ವಾಹಿನಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದೆ. ವಿಡಿಯೋ ನೋಡಿದ ಅಭಿಮಾನಿಗಳು ಸಖತ್‌ ಹಾಟ್‌ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ. ಅಲ್ಲದೆ, ಕೆಲವು ನೆಟ್ಟಿಗರು ಇಂಥದ್ದೆಲ್ಲಾ ಬೇಕಾ ಅಂತ ಪ್ರಶ್ನೆ ಮಾಡಿದ್ದಾರೆ. ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಜೋಡಿ ತಮ್ಮ ಕೆಲಸದಲ್ಲಿ ತಾವಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News