Russia-Ukraine Conflict: ಆರಂಭವಾಯ್ತಾ ರಕ್ತದೋಕುಳಿ? ಐವರು ನುಸುಳುಕೋರರನ್ನು ಸದೆಬಡಿದ ರಷ್ಯಾ, Fake News ಎಂದ ಉಕ್ರೇನ್!

Russia Attacked On Five Ukrainian Saboteurs: ಉಕ್ರೇನ್‌ನ ಸೇನೆಯು (Ukraine Military) ತನ್ನ ಸೇನಾ ರಕ್ಷಣಾ ಪೋಸ್ಟ್‌ ಮೇಲೆ ಬಾಂಬ್‌ ದಾಳಿ ನಡೆಸಿದೆ ಎಂದು ರಷ್ಯಾದ ಸೇನೆ (Russian Military) ಸೋಮವಾರ ಹೇಳಿಕೆ ನೀಡಿತ್ತು. ಈ ಘಟನೆಗೆ ಪ್ರತ್ಯುತ್ತರ ನೀಡಿದ ರಷ್ಯಾ (Russia) ಸೇನೆ ಐವರು ಉಕ್ರೇನಿಯನ್ (Ukraine) ವಿಧ್ವಂಸಕರನ್ನು ಹತ್ಯೆಗೈಯಲಾಗಿದೆ ಎಂದಿದೆ.

Written by - Nitin Tabib | Last Updated : Feb 21, 2022, 09:31 PM IST
  • ಉಕ್ರೇನ್ ನ ಐವರು ವಿಧ್ವಂಸಕರನ್ನು ಹತ್ಯೆಗೈಯಲಾಗಿದೆ ಎಂದ ರಷ್ಯಾ
  • ಆದರೆ ಈ ರೀತಿ ಯಾವುದೇ ಘಟನೆ ನಡೆದಿಲ್ಲ ಎಂದ ಉಕ್ರೇನ್
  • ಈ ರೀತಿ ವದಂತಿ ಹರಡುವುದು ರಷ್ಯಾದ ಕುತಂತ್ರ ಎಂದ ಉಕ್ರೇನ್
Russia-Ukraine Conflict: ಆರಂಭವಾಯ್ತಾ ರಕ್ತದೋಕುಳಿ? ಐವರು ನುಸುಳುಕೋರರನ್ನು ಸದೆಬಡಿದ ರಷ್ಯಾ, Fake News ಎಂದ ಉಕ್ರೇನ್! title=
Russia-Ukraine Conflict Updates (File Photo)

Russia Attacked On Five Ukrainian Saboteurs: ಉಕ್ರೇನ್‌ನ ಸೇನೆಯು (Ukraine Military) ತನ್ನ ಸೇನಾ ರಕ್ಷಣಾ ಪೋಸ್ಟ್‌ ಮೇಲೆ ಬಾಂಬ್‌ ದಾಳಿ ನಡೆಸಿದೆ ಎಂದು ರಷ್ಯಾದ ಸೇನೆ (Russian Military) ಸೋಮವಾರ ಹೇಳಿಕೆ ನೀಡಿತ್ತು. ಈ ಘಟನೆಗೆ ಪ್ರತ್ಯುತ್ತರ ನೀಡಿದ ರಷ್ಯಾ (Russia) ಸೇನೆ ಐವರು ಉಕ್ರೇನಿಯನ್ (Ukraine) ವಿಧ್ವಂಸಕರನ್ನು ಹತ್ಯೆಗೈಯಲಾಗಿದೆ ಎಂದಿದೆ. ಆದರೆ, ಉಕ್ರೇನ್ ಇದನ್ನು ರಷ್ಯಾದ ಕುತಂತ್ರ ಎಂದು ಬಣ್ಣಿಸಿದ್ದು, ರಷ್ಯಾ ಉದ್ವಿಗ್ನತೆಯನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲು (Russia Attack On Ukrainian Military) ನೆಪ ಹುಡುಕಾಟದಲ್ಲಿ ತೊಡಗಿದೆ ಎಂದು ಉಕ್ರೇನ್ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಪದೇ ಪದೇ ಹೇಳುತ್ತಿರುವ ಹಿನ್ನೆಲೆ ಘಟನೆ ನಡೆದಿರುವುದು ಭಾರಿ ಮಹತ್ವ ಪಡೆದುಕೊಂಡಿದೆ.
ಪಾಶ್ಚಿಮಾತ್ಯ ದೇಶಗಳು ರಷ್ಯಾ ತನ್ನ ನೆರೆಯ ದೇಶವನ್ನು ಆಕ್ರಮಿಸಲು ಯೋಜಿಸುತ್ತಿದೆ ಎಂದು ಆರೋಪಿಸಿವೆ. 1991 ರಲ್ಲಿ ಸೋವಿಯತ್ ಒಕ್ಕೂಟದ ಪತನದವರೆಗೂ ಉಕ್ರೇನ್ ರಷ್ಯಾದ ಭಾಗವಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಆದರೆ, ಮಾಸ್ಕೋ ಮಾತ್ರ ಯಾವುದೇ ದಾಳಿಯ ಯೋಜನೆಗಳನ್ನು ನಿರಾಕರಿಸುತ್ತದೆ, ಆದರೆ ಅದು ಸಮಗ್ರ ಭದ್ರತಾ ಖಾತರಿಗಳಿಗೆ ಕರೆ ನೀಡುವುದರ ಜೊತೆಗೆ, ಉಕ್ರೇನ್ ಎಂದಿಗೂ NATO ಗೆ ಸೇರುವುದಿಲ್ಲ ಎಂಬ ಭರವಸೆಯನ್ನು ಸಹ ಕೇಳಿದೆ.

ಉಕ್ರೇನ್ ದಾಳಿ ನಡೆಸಿದೆ ಎಂದ ರಷ್ಯಾ
ರಷ್ಯಾದ FSB ಭದ್ರತಾ ಸೇವೆಯು ಮೊದಲ ಬಾರಿಗೆ ಉಕ್ರೇನ್ ರಷ್ಯಾದ ಗಡಿ ಪೋಸ್ಟ್ ವೊಂದರ ಮೇಲೆ ದಾಳಿ ಮಾಡಿದೆ ಎಂದಿದೆ. ಅಲ್ಲಿನ ಸ್ಥಳೀಯ ಕಾಲಮಾನ ಪ್ರಕಾರ ಬೆಳಗ್ಗೆ 9:50ಕ್ಕೆ ಅಪರಿಚಿತ ಕ್ಷಿಪಣಿಯೊಂದು ನಮ್ಮ ಗಡಿಯೊಳಗೆ ನುಸುಳಿ 150 ಮೀಟರ್ ದೂರದಲ್ಲಿರುವ FSBಪೋಸ್ಟ್‌ ಅನ್ನು ಧ್ವಂಸಗೊಳಿಸಿದೆ ಎಂದು ಹೇಳಿದೆ. ಇದರಲ್ಲಿ ಹೊರ ಠಾಣೆ ಸಂಪೂರ್ಣ ನಾಶವಾಗಿದೆ ಎಂದು ಅದು ಹೇಳಿದೆ.

ಶೆಲ್ ದಾಳಿಯಲ್ಲಿ, ರೋಸ್ಟೊವ್ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಸೇನಾ ನೆಲೆಯು ಸಂಪೂರ್ಣವಾಗಿ ನಾಶವಾಗಿದ್ದು, ಈ ಪೋಸ್ಟ್ ಅನ್ನು ಗಡಿಯಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿ ಬಳಸುತ್ತಿದ್ದರು ಎಂದು ರಷ್ಯಾ ಹೇಳಿದೆ. ರಷ್ಯಾ ಸೇನೆಯು ಭದ್ರತಾ ಪೋಸ್ಟ್  ಅನ್ನು ಅದರ ಸೀಲಿಂಗ್ ಮತ್ತು ಗೋಡೆಗಳನ್ನು ಕೆಡುಹಿದ ಚಿತ್ರಗಳೊಂದಿಗೆ ಮತ್ತು ರಷ್ಯಾದ ಧ್ವಜವನ್ನು ಚದುರಿದ ವೀಡಿಯೊವನ್ನು ಸಹ ಬಿಡುಗಡೆ ಮಾಡಿದೆ.

ನಾವು 5 ಉಕ್ರೇನ್ ವಿಧ್ವಂಸಕರನ್ನು ಹತ್ಯೆಗೈದಿದ್ದೇವೆ ಎಂದ ರಷ್ಯಾ
"ಘರ್ಷಣೆಯ ಸಮಯದಲ್ಲಿ, ಉಕ್ರೇನ್‌ನಿಂದ ರಷ್ಯಾದ ಗಡಿಗೆ ನುಸುಳುತ್ತಿದ್ದ ಐವರು  ವಿಧ್ವಂಸಕರ ಗುಂಪನ್ನು ಹತ್ಯೆಗೈಯಲಾಗಿದೆ" ಎಂದು ರಷ್ಯಾದ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ. ಹೇಳಿಕೆಯ ಪ್ರಕಾರ, ರೋಸ್ಟೊವ್ ಪ್ರದೇಶದ ಮಿತ್ಯಕಿನ್ಸ್ಕಾಯಾ ಗ್ರಾಮದ ಬಳಿ ಸ್ಥಳೀಯ ಸಮಯ ಬೆಳಿಗ್ಗೆ 6:00 ಗಂಟೆಗೆ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ-Russia-Ukraine ಮಹಾಯುದ್ದ ಆರಂಭವಾಯಿತೇ? ಯುಕ್ರೇನ್ ಬಾಂಬ್ ದಾಳಿಗೆ ತನ್ನ ಗಡಿ ಪೋಸ್ಟ್ ಸ್ಪೋಟಗೊಂಡಿದೆ ಎಂದ ರಷ್ಯಾ!

ಈ ಘಟನೆಗಳು ಉಕ್ರೇನಿಯನ್ ಗಡಿಯಲ್ಲಿ ತನ್ನ ಮಿಲಿಟರಿ ನಿರ್ಮಾಣವನ್ನು ಸಮರ್ಥಿಸಿಕೊಳ್ಳಲು ಮಾಸ್ಕೋ ಮನ್ನಣೆಗಳನ್ನು ಹುಡುಕುತ್ತಿದೆ ಎಂಬ ಕಳವಳವನ್ನು ಹುಟ್ಟುಹಾಕಿದೆ. 

ಇದನ್ನೂ ಓದಿ-Russia-Ukraine Conflict: Nuclear Drill ನಡೆಸಿ ಶಕ್ತಿ ಪ್ರದರ್ಶಿಸಿದ Vladimir Putin, ಕಪ್ಪು ಸಮುದ್ರದಲ್ಲಿನ ಹಲ್-ಚಲ್ ನಿಂದ ಮತ್ತಷ್ಟು ಆಳವಾದ ಉಕ್ರೇನ್ ಬಿಕ್ಕಟ್ಟು

ದಾಳಿಯ ವರದಿಯನ್ನು ತಳ್ಳಿಹಾಕಿದ ಉಕ್ರೇನ್
ಈ ಕುರಿತು ಹೇಳಿಕೆ ನೀಡಿರುವ ರಷ್ಯಾದ ಬೆಂಬಲಿತ ಪ್ರತ್ಯೇಕತಾವಾದಿಗಳ ವಿರುದ್ಧ ಜಂಟಿ ಮಿಲಿಟರಿ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿರುವ ಉಕ್ರೇನಿಯನ್ ವಕ್ತಾರ ಪಾವ್ಲೋ ಕೊವಲ್ಚುಕ್, "ರಷ್ಯಾ ಅವಕಾಶ ಪಡೆದುಕೊಳ್ಳಲು ಪ್ರತಿದಿನ ಇಂತಹ ವದಂತಿಗಳನ್ನು ಹರಡುತ್ತಿದೆ. ಅವರು ಮಾಡುತ್ತಿರುವುದನ್ನು ನಾವು ತಡೆಯಲು ಸಾಧ್ಯವಿಲ್ಲ. ನಮ್ಮ ಸೇನೆ ಸೇನಾ ಪೋಸ್ಟ್ ಗಳ ಮೇಲೆ ಎಂದಿಗೂ ದಾಳಿ ನಡೆಸುವುದಿಲ್ಲ. ಕೆಲ ಪ್ರದೇಶಗಳಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳ ಹಿಡಿತವಿದ್ದು, ಉಕ್ರೇನ್ ಸೇನೆ ನಾವು ಅವರ ಮೇಲೆ ಗುಂಡಿನ ದಾಳಿ ಅಥವಾ ತೋಪುಗಳನ್ನೂ ಬಳುವುದಿಲ್ಲ" ಎಂದಿದ್ದಾರೆ.

ಇದನ್ನೂ ಓದಿ-Ukraine Russia Crisis: ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿ: ದೇಶಕ್ಕೆ ಮರಳುವಂತೆ ಭಾರತೀಯ ರಾಜತಾಂತ್ರಿಕರ ಕುಟುಂಬಗಳಿಗೆ ಸೂಚನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News