Ukraine-Russia War: ಪರಮಾಣು ಜಲಾಂತರ್ಗಾಮಿ ನೌಕೆಯನ್ನು ನೀರಿಗಿಳಿಸಿದ ರಷ್ಯಾ, ಹೆಚ್ಚಾದ ಪರಮಾಣು ಯುದ್ಧದ ಅಪಾಯ!

Russia-Ukraine Conflict - ಉಕ್ರೇನ್ (Ukraine) ಮೇಲೆ ರಷ್ಯಾದ (Russia) ಆಕ್ರಮಣ ಕಳೆದ ಒಂದು ತಿಂಗಳಿನಿಂದ ಜಾರಿಯಲ್ಲಿದೆ ಮತ್ತು ಮಾಸ್ಕೋದ (Mascow) ಈ ಆಕ್ರಮಣ ನಿಲ್ಲುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ತನ್ನ ಪರಮಾಣು ಪಡೆಗಳನ್ನು (Nuclear Forces) ವಿಶೇಷ ಎಚ್ಚರಿಕೆಯಲ್ಲಿ ಇರಿಸಿರುವ ಹಲವು ಗಂಟೆಗಳ ನಂತರ ರಷ್ಯಾ ತನ್ನ ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು (Nuclear Submarine) ಸಮುದ್ರಕ್ಕೆ ಇಳಿಸಿದೆ. ಇದರಿಂದಾಗಿ ಪರಮಾಣು ಯುದ್ಧದ ಅಪಾಯ ಎದುರಾಗಿದೆ.  

Written by - Nitin Tabib | Last Updated : Mar 26, 2022, 04:03 PM IST
  • ಪರಮಾಣು ಜಲಾಂತರ್ಗಾಮಿ ನೌಕೆಯನ್ನು ನೀರಿಗಿಳಿಸಿದ ರಷ್ಯಾ
  • ಎದುರಾದ ಪರಮಾಣು ಯುದ್ಧದ ಅಪಾಯ
  • ತಜ್ಞರ ಅಭಿಮತ ಏನು? ತಿಳಿಯಲು ವರದಿ ಹೇಳಿ
Ukraine-Russia War: ಪರಮಾಣು ಜಲಾಂತರ್ಗಾಮಿ ನೌಕೆಯನ್ನು ನೀರಿಗಿಳಿಸಿದ ರಷ್ಯಾ, ಹೆಚ್ಚಾದ ಪರಮಾಣು ಯುದ್ಧದ ಅಪಾಯ! title=
Russia-Ukraine Conflict

Russia-Ukraine Conflict - ಉಕ್ರೇನ್ (Ukraine) ಮೇಲೆ ರಷ್ಯಾದ (Russia) ಆಕ್ರಮಣ ಕಳೆದ ಒಂದು ತಿಂಗಳಿನಿಂದ ಜಾರಿಯಲ್ಲಿದೆ ಮತ್ತು ಮಾಸ್ಕೋದ (Mascow) ಈ ಆಕ್ರಮಣ ನಿಲ್ಲುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ತನ್ನ ಪರಮಾಣು ಪಡೆಗಳನ್ನು (Nuclear Forces) ವಿಶೇಷ ಎಚ್ಚರಿಕೆಯಲ್ಲಿ ಇರಿಸಿರುವ ಹಲವು ಗಂಟೆಗಳ ನಂತರ ರಷ್ಯಾ ತನ್ನ ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು (Nuclear Submarine) ಸಮುದ್ರಕ್ಕೆ ಇಳಿಸಿದೆ. ಇದರಿಂದಾಗಿ ಪರಮಾಣು ಯುದ್ಧದ ಅಪಾಯ ಎದುರಾಗಿದೆ.

ರಷ್ಯಾದ ಪರಮಾಣು ಜಲಾಂತರ್ಗಾಮಿ ನೌಕೆಗಳು 16 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸಾಗಿಸಬಲ್ಲವು
ರಷ್ಯಾದ ಪರಮಾಣು ಜಲಾಂತರ್ಗಾಮಿ ನೌಕೆಗಳು 16 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಏಕಕಾಲದಲ್ಲಿ ಸಾಗಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ಜಲಾಂತರ್ಗಾಮಿ ನೌಕೆಗಳನ್ನು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ  (North-Atlantic Ocean) ಇಳಿಸಲಾಗಿದೆ. ರಷ್ಯಾದ ಈ ಕ್ರಮಕ್ಕೆ ಸಂಬಂಧಿಸಿದಂತೆ, ಕ್ರೆಮ್ಲಿನ್ ತನ್ನ ಸ್ಥಾನವನ್ನು ಬಲಪಡಿಸಲು ಯಾವುದೇ ಹಂತಕ್ಕೆ ಹೋಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಕ್ರಮಣಕಾರಿ ಕಾರ್ಯತಂತ್ರದ ಭಾಗವಾಗಿ ಪುಟಿನ್ ಪರಮಾಣು ಬೆದರಿಕೆಗಳನ್ನು  ಒಡ್ಡುತ್ತಿದ್ದಾರೆ ಎಂದು ರಷ್ಯಾವನ್ನು ವೀಕ್ಷಿಸುತ್ತಿರುವ ತಜ್ಞರು ಹೇಳುತ್ತಾರೆ. 2014 ರ ಕ್ರಿಮಿಯನ್ ಯುದ್ಧದ ಸಮಯದಲ್ಲಿ ಪುಟಿನ್ ಇದೇ ರೀತಿ ಮಾಡಿದ್ದರು. 

ಇದನ್ನೂ ಓದಿ-Lion Buffalo Fight Video - ಸಿಂಹಕ್ಕೆ ದುಸ್ವಪ್ನವಾಗಿ ಪರಿಣಮಿಸಿದ ಕಾಡುಕೋಣದ ಜೊತೆಗಿನ ಕಾದಾಟ

ವರದಿಗಳ ಪ್ರಕಾರ, ಮಾರ್ಚ್ 3 ರಿಂದ ರಷ್ಯಾ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಹೈ ಅಲರ್ಟ್ ನಲ್ಲಿ ಇರಿಸಿದೆ. ಮಾರ್ಚ್ 22 ರಂದು ಮಾಸ್ಕೋ ನ್ಯಾಟೋಗೆ ಬೆದರಿಕೆ ಹಾಕಿತ್ತು, ನ್ಯಾಟೋ  ಒಂದು ವೇಳೆ ಗಡಿಯನ್ನು ದಾಟಿದರೆ, ಕ್ರೆಮ್ಲಿನ್ ಪರಮಾಣು ದಾಳಿಯನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಅದು ಹೇಳಿತ್ತು. ಒಂದು ವೇಳೆ "ಅಸ್ತಿತ್ವದ ಬೆದರಿಕೆ" ಎದುರಾದರೆ ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದರು.

ಇದನ್ನೂ ಓದಿ-'Breast Milk Jewelry' ಬಗ್ಗೆ ನಿಮಗೆಷ್ಟು ಗೊತ್ತು? ಇದರಿಂದ ಒಂದು ಕಂಪನಿ ಕೋಟ್ಯಾಂತರ ರೂ. ಸಂಪಾದಿಸುತ್ತಿದೆ

ದಿ ಟೈಮ್ಸ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಈ ಪರಮಾಣು ಜಲಾಂತರ್ಗಾಮಿ ನೌಕೆಗಳು ಶೀಘ್ರದಲ್ಲೇ 'ರಷ್ಯಾಕ್ಕೆ ಮರಳಿವೆ ಮತ್ತು ಆಗಿನಿಂದ ಚಟುವಟಿಕೆಗಳು ಸಾಮಾನ್ಯವಾಗಿವೆ. ಎಂದು ಹೇಳಿದೆ.  ಆದರೆ, ರಷ್ಯಾದ ಈ ಕ್ರಮದಿಂದ, ಪಾಶ್ಚಿಮಾತ್ಯ ಗುಪ್ತಚರ ಸಂಸ್ಥೆಗಳು ಕ್ರೆಮ್ಲಿನ್‌ನ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹದ ಮೇಲೆ ತೀವ್ರ ನಿಗಾ ಇಡಲು ಆರಂಭಿಸಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News