'Breast Milk Jewelry' ಬಗ್ಗೆ ನಿಮಗೆಷ್ಟು ಗೊತ್ತು? ಇದರಿಂದ ಒಂದು ಕಂಪನಿ ಕೋಟ್ಯಾಂತರ ರೂ. ಸಂಪಾದಿಸುತ್ತಿದೆ

Breast Milk Jewelry - ಜಗತ್ತಿನ ಅತ್ಯಂತ ಸುಂದರ ಭಾವ ಎಂದರೆ ‘ಮಾತೃತ್ವ ಸುಖ’. ತಾಯಿ ಮತ್ತು ಮಗುವಿನ ನಡುವೆ ಅಂತಹ ಭಾವನಾತ್ಮಕ ಬಂಧವಿದೆ, ಈ ಬಂಧವನ್ನು ಪದಗಳಲ್ಲಿ ವಿವರಿಸಲು ಕಷ್ಟ ಸಾಧ್ಯ. ತಾಯಿಯು ತನ್ನ ಮಗುವನ್ನು ಎದೆಗೊತ್ತಿ ಹಾಲುಣಿಸಿದಾಗ, ಅದರ ಭಾವನೆ ಕೇವಲ ಅವಳೇ ಅರ್ಥಮಾಡಿಕೊಳ್ಳಬಹುದು. ಜಗತ್ತಿನಲ್ಲಿ ಇಂತಹ ಅನೇಕ ತಾಯಂದಿರು ತಮ್ಮ ಎದೆಹಾಲನ್ನು ಸಂರಕ್ಷಿಸುತ್ತಿದ್ದಾರೆ. ಎದೆಹಾಲು ಆಭರಣ ಕೂಡ ಅವುಗಳಲ್ಲಿ ಒಂದು.   

Written by - Nitin Tabib | Last Updated : Mar 24, 2022, 12:59 PM IST
  • ತಾಯಿ ಮತ್ತು ಮಗುವಿನ ನಡುವಿನ ಬಂಧ ಅತ್ಯಮೂಲ್ಯ
  • ಮಾತೃತ್ವದ ನೆನಪು ಒಂದು ಅವಿಸ್ಮರಣೀಯ ಅನುಭವ
  • ಇದನ್ನೇ ಸಂಗ್ರಹಿಸಿ ಇಡಲು ಬಂದ ಹೊಸ ಟ್ರೆಂಡ್ 'Breast Milk Jewelry'
'Breast Milk Jewelry' ಬಗ್ಗೆ ನಿಮಗೆಷ್ಟು ಗೊತ್ತು? ಇದರಿಂದ ಒಂದು ಕಂಪನಿ ಕೋಟ್ಯಾಂತರ ರೂ. ಸಂಪಾದಿಸುತ್ತಿದೆ title=
Breast Milk Jewelry

Memory Of Motherhood - ಯಾವುದೇ ಒಂದು ಮನೆಯಲ್ಲಿ ಮಗುವಿನ ಮೊದಲ ಅಳು ಪ್ರತಿಧ್ವನಿಸಿದರೆ, ತಂದೆ-ತಾಯಿ ಸೇರಿದನಂತೆ ಇಡೀ ಕುಟುಂಬದ ಸದಸ್ಯರ ಮುಖದಲ್ಲಿ ಸಂತಸದ ಅಲೆಯೇ ಹರಿಯುತ್ತದೆ. ಪೋಷಕರು ತಮ್ಮ ಮಗುವಿಗೆ ಸಂಬಂಧಿಸಿದ ಪ್ರತಿಯೊಂದು ನೆನಪನ್ನು ಸಂಗ್ರಹಿಸಿಟ್ಟುಕೊಳ್ಳಲು ಬಯಸುತ್ತಾರೆ. ಅದಕ್ಕಾಗಿ ಅವರು ತಮ್ಮ ಮಗುವಿನ ಮೊದಲ ಸ್ಮೈಲ್ ಆಗಿರಲಿ ಅಥವಾ ಮೊದಲು ಕೂಗು ಆಗಿರಲಿ ಅಥವಾ ಮೊದಲ ಹೆಜ್ಜೆಯ ಗುರುತಾಗಲಿ, ಎಲ್ಲವನ್ನೂ ಸಂಗ್ರಹಿಸಿಟ್ಟುಕೊಳ್ಳಲು ಬಯಸುತ್ತಾರೆ. ಇಂದಿನ ಮೊಬೈಲ್ ಫೋನ್ ಯುಗದಲ್ಲಿ ಇದು ಇನ್ನೂ ಸುಲಭವಾಗಿದೆ. ಇದೇ ವೇಳೆ, ಎದೆ ಹಾಲನ್ನು ಸಂಗ್ರಹಿಸಿಟ್ಟುಕೊಳ್ಳುವ ಕೆಲ ಮಹಿಳೆಯರು ಇದ್ದಾರೆ. ಅವರು ತಮ್ಮ ಎದೆ ಹಾಲಿನ ಆಭರಣದ ರೂಪದಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದಾರೆ. ಇದನ್ನೇ 'Breast Milk Jewelry' ಎಂದು ಕರೆಯಲಾಗುತ್ತದೆ.

ಎದೆಹಾಲು ಆಭರಣಗಳ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಹೀಗಾಗಿ ಅವರು ಅದನ್ನು ನಂಬುವುದಿಲ್ಲ. ಆದರೆ ಇದು ಶೇ. 100 ರಷ್ಟು ನಿಜ. ಯುನೈಟೆಡ್ ಕಿಂಗ್ದಂನಲ್ಲಿರುವ (United Kingdom) ಮೆಜೆಂಟಾ ಫ್ಲವರ್ಸ್(Megenta Flowers) ಕಂಪನಿಯ ಸಂಸ್ಥಾಪಕರಾಗಿರುವ, ಸಫಿಯಾ (Safeyya) ಮತ್ತು ಆಡಮ್ ರಿಯಾದ್ (Adam Riyadh), ಎದೆ ಹಾಲಿನ (Breast Milk) ಆಭರಣ ತಯಾರಿಕೆಯ ಕೆಲಸದಲ್ಲಿ ನಿರತರಾಗಿದ್ದಾರೆ ಮತ್ತು ಇಂದು ಅವರ ಈ  ವ್ಯವಹಾರ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ.

ಇದನ್ನೂ ಓದಿ-Coronavirus 4th Wave: ಕೊರೊನಾ ನಾಲ್ಕನೇ ಅಲೆಗೆ ಈ ದೇಶ ತತ್ತರ, ನಿತ್ಯ 20 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿ

ಇದು ಕೆಲವರಿಗೆ ಅಸಂಬದ್ಧವೆಂಬಂತೆ ತೋರಬಹುದು, ಆದರೆ, ಇಂದು ತಾಯಿಯ ಎದೆ ಹಾಲು ಒಂದು ಲಾಭದಾಯಕ ಉದ್ಯಮ ಎಂದು ಸಾಬೀತಾಗಿದೆ ಎಂದರೆ ನಿಮಗೂ ಆಶ್ಚರ್ಯವಾದೀತು. ಇತ್ತೀಚಿನ ದಿನಗಳಲ್ಲಿ ಎದೆ ಹಾಲನ್ನು ಆಭರಣವನ್ನಾಗಿ ಪರಿವರ್ತಿಸುವ ಕ್ರೇಜ್ ಮಹಿಳೆಯರಲ್ಲಿ ಹೆಚ್ಚುತ್ತಿದೆ. ಸಫಿಯಾ ಮತ್ತು ಆಡಮ್ ರಿಯಾದ್ ಇದನ್ನೇ ಒಂದು ಯಶಸ್ವಿ ವ್ಯಾಪಾರವಾಗಿ ಪರಿವರ್ತಿಸಿದ್ದಾರೆ. 2019 ರಲ್ಲಿ, ಇಬ್ಬರೂ ಮೆಜೆಂಟಾ ಫ್ಲವರ್ಸ್ ಹೆಸರಿನ ಕಂಪನಿಯನ್ನು ಸ್ಥಾಪಿಸಿದ್ದಾರೆ. ಇದುವರೆಗೆ ಈ ಕಂಪನಿಯು ವಿಶ್ವಾದ್ಯಂತ 4 ಸಾವಿರಕ್ಕೂ ಹೆಚ್ಚು ಆರ್ಡರ್ ಗಳನ್ನು ಪೂರೈಸಿದೆ. ಇತ್ತೀಚೆಗೆ ಈ ಕಂಪನಿಯು ಎದೆಹಾಲಿಗೆ ಆಭರಣದ ರೂಪ ನೀಡಿದೆ ಮತ್ತು 2023 ರ ವೇಳೆಗೆ ಕಂಪನಿಯು £ 1.5 ಮಿಲಿಯನ್ ವ್ಯವಹಾರವನ್ನು ಮಾಡುವ  ನಿರೀಕ್ಷೆ ಹೊಂದಿದೆ.

ಇದನ್ನೂ ಓದಿ-ಮಣ್ಣು ಉಳಿಸಿ ಅಭಿಯಾನಕ್ಕಾಗಿ ಲಂಡನ್‌ನಿಂದ 100-ದಿನಗಳ ಮೋಟಾರ್‌ಸೈಕಲ್ ಪ್ರಯಾಣ ಆರಂಭಿಸಿದ ಸದ್ಗುರು

ತಾಯ್ತನದ ನೆನಪು ಸಂಗ್ರಹಣೆ (Memory Of Motherhood)
ವಿಶ್ವಾದ್ಯಂತ ತಾಯಂದಿರು ತಮ್ಮ ತಾಯ್ತನದ ಹಾಲಿಗೆ (Breastfeeding Mother) ಅಮೂಲ್ಯವಾದ ಹರಳಿನ ರೂಪ ನೀಡಿ ತಮ್ಮ ಮಾತೃತ್ವದ ನೆನಪನ್ನು ಅವಿಸ್ಮರಣೀಯವಾಗಿಸಲು ಬಯಸುತ್ತಿದ್ದಾರೆ. ಇದೇ ಕಾರಣಕ್ಕಾಗಿ, ಈ ಕಂಪನಿಯು ಶೇ. 483 ವಾರ್ಷಿಕ ಆದಾಯದ ಬೆಳವಣಿಗೆಯ ಗುರಿ ಹೊಂದಿದೆ. ಮೂವರು ಮಕ್ಕಳಿಗೆ ತಾಯಿಯಾಗಿರುವ ಸಫಿಯಾ ಅವರಿಗೆ ತಾಯಿ ತನ್ನ ಮಕ್ಕಳಿಗೆ ಹಾಲುಣಿಸುವುದು ಎಷ್ಟೊಂದು ಅವಿಸ್ಮರಣೀಯವಾಗಿರುತ್ತದೆ ಎಂಬುದು ನೇರವಾಗಿ ತಿಳಿದಿದೆ. ಮಗು ತಾಯಿಯ ಹಾಲು ಕುಡಿಯುವುದನ್ನು ನಿಲ್ಲಿಸಿದಾಗ, ತಾಯಿ ಆ ಕ್ಷಣವನ್ನು ತುಂಬಾ ನೆನಪಿಸಿಕೊಳ್ಳುತ್ತಾಳೆ. ಸ್ತನ್ಯಪಾನವು ತಾಯಿ ಮತ್ತು ಮಗುವಿನ ನಡುವೆ ಭಾವನಾತ್ಮಕ ಬಂಧವನ್ನು ಸ್ಥಾಪಿಸುತ್ತದೆ, ಅದು ಶಾಶ್ವತವಾಗಿ ಇರುತ್ತದೆ ಎಂದು ಸಫಿಯಾ ಹೇಳುತ್ತಾರೆ. ಮೆಜೆಂಟಾ ಫ್ಲವರ್ಸ್ ಈ ಭಾವನಾತ್ಮಕ ಬಂಧವನ್ನು ಸ್ಮರಣಿಕೆಯಾಗಿ ಸಂರಕ್ಷಿಸಲು ಕೆಲಸ ಮಾಡುತ್ತಿದೆ ಎಂದು ಅವರು ಹೇಳುತ್ತಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News