7th Pay Commission: ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದು ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ತುಟ್ಟಿಭತ್ಯೆ(DA Hike), ಮನೆಬಾಡಿಗೆ ಭತ್ಯೆ  (HRA Hike) ಹೆಚ್ಚಳದ ಬಳಿಕ ಇದೀಗ ಗ್ರ್ಯಾಚೂಟಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಮೋದಿ ಸರ್ಕಾರವು ಗ್ರಾಚ್ಯುಟಿಯ ತೆರಿಗೆ ಮುಕ್ತ ಮಿತಿಯನ್ನು (Tax Free Gratuity Limit) 25 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ಅರ್ಥಾತ್,  ಈ ಮೊತ್ತದವರೆಗಿನ ಗ್ರಾಚ್ಯುಟಿಗೆ ಯಾವುದೇ ತೆರಿಗೆ ಇರುವುದಿಲ್ಲ. ಮೊದಲು ಇದರ ಮಿತಿ 20 ಲಕ್ಷ ರೂ.ಗಳಾಗಿತ್ತು.  ಮಾರ್ಚ್ 8, 2019 ರ ಅಧಿಸೂಚನೆಯಲ್ಲಿ, ಸಿಬಿಡಿಟಿ ತೆರಿಗೆ ಮುಕ್ತ ಗ್ರಾಚ್ಯುಟಿ ಮಿತಿಯನ್ನು 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಿತ್ತು.(Business News In Kannada)


COMMERCIAL BREAK
SCROLL TO CONTINUE READING

ಇದನ್ನೂ ಓದಿ-HRA Hike: ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಸರ್ಕಾರಿ ನೌಕರರ ಈ ಈ ಭತ್ಯೆಯಲ್ಲಿಯೂ ಶೇ. 3 ರಷ್ಟು ಹೆಚ್ಚಳ!


ತುಟ್ಟಿ ಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳ
ಇದಲ್ಲದೇ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. 4ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ (Modi Cabinet) ಒಪ್ಪಿಗೆ ಸೂಚಿಸಿದೆ. ಅದರಂತೆ ಇದೀಗ ನೌಕರರು ಶೇ. 50 ರ ದರದಲ್ಲಿ  ತುಟ್ಟಿಭತ್ಯೆಯನ್ನು ಪಡೆಯಲಿದ್ದಾರೆ. ಈ ತುಟ್ಟಿಭತ್ಯೆ ಜನವರಿ 1, 2024 ರಿಂದ ಅನ್ವಯಿಸಲಿದೆ. ಅರ್ಥಾತ್ ಮಾರ್ಚ್ ತಿಂಗಳ ವೇತನದ ಜೊತೆಗೆ ಜನವರಿ ಮತ್ತು ಫೆಬ್ರುಯರಿ ತುಟ್ಟಿಭತ್ಯೆ ಕೂಡ ಅರಿಯರ್ ರೂಪದಲ್ಲಿ ಸಿಗಲಿದೆ. ನಾಲ್ಕನೇ ಬಾರಿ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆಯಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ತುಟ್ಟಿ ಭತ್ಯೆ ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ 12,868.72 ರೂ.ಗಳಷ್ಟು ಆರ್ಥಿಕ ಹೊರೆ ಬೀಳಲಿದೆ.


ಇದನ್ನೂ ಓದಿ-Salary Hike: ಬಂದೇ ಬಿಟ್ತು ಗುಡ್ ನ್ಯೂಸ್, ಸರ್ಕಾರಿ ನೌಕರ ತುಟ್ಟಿಭತ್ಯೆಯಲ್ಲಿ ಶೇ. 4 ರಷ್ಟು ಹೆಚ್ಚಳ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ