Salary Hike: ಬಂದೇ ಬಿಟ್ತು ಗುಡ್ ನ್ಯೂಸ್, ಸರ್ಕಾರಿ ನೌಕರ ತುಟ್ಟಿಭತ್ಯೆಯಲ್ಲಿ ಶೇ. 4 ರಷ್ಟು ಹೆಚ್ಚಳ

Salary Hike: ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ದೇಶಾದ್ಯಂತದ 50 ಲಕ್ಷ ಸರ್ಕಾರಿ ನೌಕರರಿಗೆ ಮತ್ತು 62 ಲಕ್ಷ ಪಿಂಚಣಿದಾರರಿಗೆ ಮೋದಿ ಸರ್ಕಾರ ಭರ್ಜರಿ ಉಡುಗೊರೆಯೊಂದನ್ನು ನೀಡಿದೆ. ಹೌದು, ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ, ಕೇಂದ್ರ ಸರ್ಕಾರಿ (Modi Government) ನೌಕರರ ವೇತನ ಹೆಚ್ಚಿಸಿ ಆದೇಶ ಹೊರಡಿಸಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇಂದು ಸರ್ಕಾರಿ ನೌಕರರ ಡಿಎ-ಡಿಆರ್ ನಲ್ಲಿ ಶೇ.4ರಷ್ಟು ಹೆಚ್ಚಳ ಮಾಡುವುದಾಗಿ ಘೋಷಿಸಲಾಗಿದೆ (Business News In Kannada)  

Written by - Nitin Tabib | Last Updated : Mar 7, 2024, 09:07 PM IST
  • ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ(Central Government Employees) ನೌಕರರ
  • ಡಿಎ-ಡಿಆರ್ ನಲ್ಲಿ ಶೇ.4ರಷ್ಟು ಹೆಚ್ಚಳ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಹೋಳಿ ಹಬ್ಬಕ್ಕೂ ಮುನ್ನ ಕೇಂದ್ರ ನೌಕರರಿಗೆ ಸರ್ಕಾರ ಖಜಾನೆ ತೆರೆದಿದೆ.
  • ಕೇಂದ್ರ ಸಚಿವ ಸಂಪುಟವು ತುಟ್ಟಿಭತ್ಯೆಯಲ್ಲಿ ಶೇಕಡಾ 4 ರಷ್ಟು ಹೆಚ್ಚಳವನ್ನು ಅನುಮೋದಿಸುವ ಮೂಲಕ ಲಕ್ಷಾಂತರ ಉದ್ಯೋಗಿಗಳ ದೀರ್ಘಾವಧಿಯ ನಿರೀಕ್ಷೆಯನ್ನು ಅಂತ್ಯಗೊಳಿಸಿದೆ
Salary Hike: ಬಂದೇ ಬಿಟ್ತು ಗುಡ್ ನ್ಯೂಸ್, ಸರ್ಕಾರಿ ನೌಕರ ತುಟ್ಟಿಭತ್ಯೆಯಲ್ಲಿ ಶೇ. 4 ರಷ್ಟು ಹೆಚ್ಚಳ  title=

Salary Hike: ಮುಂಬರುವ ಲೋಕಸಭೆ ಚುನಾವಣೆಗೂ (Lok Sabha Elections 2022) ಮುನ್ನ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ದೇಶಾದ್ಯಂತದ 50 ಲಕ್ಷ ನೌಕರರು ಹಾಗೂ 62 ಲಕ್ಷ ಪಿಂಚಣಿದಾರರಿಗೆ ಬಹುದೊಡ್ಡ ಉಡುಗೊರೆ ನೀಡಿದೆ. ಕೇಂದ್ರ ನೌಕರರ ವೇತನ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರಿಕಾರಿ (Central Government Employees) ನೌಕರರ ಡಿಎ-ಡಿಆರ್ ನಲ್ಲಿ ಶೇ.4ರಷ್ಟು ಹೆಚ್ಚಳ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಹೋಳಿ ಹಬ್ಬಕ್ಕೂ ಮುನ್ನ ಕೇಂದ್ರ ನೌಕರರಿಗೆ ಸರ್ಕಾರ ಖಜಾನೆ ತೆರೆದಿದೆ. ಕೇಂದ್ರ ಸಚಿವ ಸಂಪುಟವು ತುಟ್ಟಿಭತ್ಯೆಯಲ್ಲಿ ಶೇಕಡಾ 4 ರಷ್ಟು ಹೆಚ್ಚಳವನ್ನು ಅನುಮೋದಿಸುವ ಮೂಲಕ ಲಕ್ಷಾಂತರ ಉದ್ಯೋಗಿಗಳ ದೀರ್ಘಾವಧಿಯ ನಿರೀಕ್ಷೆಯನ್ನು ಅಂತ್ಯಗೊಳಿಸಿದೆ (Business News In Kannada)

ತುಟ್ಟಿಭತ್ಯೆ ಶೇ.50ಕ್ಕೆ ಏರಿಕೆ, 2 ತಿಂಗಳ ಬಾಕಿ ಕೂಡ ಸಿಗಲಿದೆ
ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಸರ್ಕಾರ ಶೇ 4ರಷ್ಟು ಹೆಚ್ಚಿಸಿದೆ. ಈ ಹೆಚ್ಚಳದ ನಂತರ, ಅವರ ಡಿಎ ಇದೀಗ ಶೇ. 50 ಕ್ಕೆ ತಲುಪಿದೆ. ಇದನ್ನು ಜನವರಿ 1, 2024 ರಿಂದ ಜಾರಿಗೆ ತರಲಾಗಿದೆ. ಮಾರ್ಚ್ 2024 ರ ವೇತನ ಹೊಸ ಡಿಎಯೊಂದಿಗೆ ಪಾವತಿಸಲಾಗುವುದು ಎಂದು ಸರ್ಕಾರ ಹೇಳಿದೆ. ಜನವರಿಯಿಂದ ಡಿಎ ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಅಂದರೆ ನೌಕರರಿಗೆ ಎರಡು ತಿಂಗಳ ಬಾಕಿ ಹಣವೂ ಕೂಡ ಸಿಗಲಿದೆ.  ಅಂದರೆ ಮಾರ್ಚ್‌ ತಿಂಗಳ ವೇತನ ನೌಕರ ಕೈಸೇರಿದಾಗ, ಅದರಲ್ಲಿ ಎರಡು ತಿಂಗಳ ಬಾಕಿ ಕೂಡ ಶಾಮಿಲಾಗಿರಲಿದೆ.

ಇದನ್ನೂ ಓದಿ-StartUp Idea: ಅತ್ಯಂತ ಕಡಿಮೆ ಹೂಡಿಕೆಯಲ್ಲಿ ಈ ಉದ್ಯಮ ಆರಂಭಿಸಿ, ತಿಂಗಳಿಗೆ ಕೈತುಂಬಾ ಹಣ ಕೊಡುತ್ತೇ!

ಡಿಎ ಹೆಚ್ಚಳದ ನಂತರ ವೇತನ ಎಷ್ಟು ಹೆಚ್ಚಾಗಲಿದೆ?
ಸಾಮಾನ್ಯವಾಗಿ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸ್ಲಾಗುತ್ತದೆ. ಜನವರಿ ಮತ್ತು ಜುಲೈ ತಿಂಗಳಲ್ಲಿ ಡಿಎ ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಅಕ್ಟೋಬರ್ 2023 ರಲ್ಲಿ, ಸರ್ಕಾರವು ಕೇಂದ್ರ ನೌಕರರ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಿತ್ತು. ನಂತರ ಕೇಂದ್ರ ನೌಕರರ ಡಿಎ ಶೇ.42ರಿಂದ ಶೇ.46ಕ್ಕೆ ತಲುಪಿತ್ತು. ಇದೀಗ ಈ ಶೇ.4ರಷ್ಟು ಹೆಚ್ಚಳದೊಂದಿಗೆ ನೌಕರರ ಒಟ್ಟು ಡಿಎ ಶೇ.50ಕ್ಕೆ ತಲುಪಿದೆ. ತುಟ್ಟಿಭತ್ಯೆ ಹೆಚ್ಚಳದೊಂದಿಗೆ, ಉದ್ಯೋಗಿಗಳ ಮನೆಗೆ ಟೇಕ್-ಹೋಮ್ ಸ್ಯಾಲರಿ ಕೂಡ ಹೆಚ್ಚಾಗಲಿದೆ.

ಇದನ್ನೂ ಓದಿ-Internet Banking ಗಾಗಿ ಬರಲಿದೆ ಹೊಸ ವ್ಯವಸ್ಥೆ, ಆರ್ಬಿಐನಿಂದ ಮಹತ್ವದ ಘೋಷಣೆ!

ತುಟ್ಟಿಭತ್ಯೆ ಹೇಗೆ ಲೆಕ್ಕ ಹಾಕಲಾಗುತ್ತದೆ? 
ಡಿಎ ಹೆಚ್ಚಿಸಿದ ನಂತರ ಸರ್ಕಾರಿ ನೌಕರ ವೇತನ ಎ ಎಷ್ಟು ಹೆಚ್ಚಾಗುತ್ತದೆ ಎಂಬುದಕ್ಕೆ ಸರಳ ಸೂತ್ರವಿದೆ. ಈ ಸೂತ್ರದ ಪ್ರಕಾರ ಡಿಎ ಲೆಕ್ಕಹಾಕಲಾಗುತ್ತದೆ. (ಮೂಲ ವೇತನ + ಗ್ರೇಡ್ ಪೇ) *ಡಿಎ%. ಅಂದರೆ, ನಿಮ್ಮ ಮೂಲ ವೇತನಕ್ಕೆ ಗ್ರೇಡ್ ಪೇ ಸೇರಿಸಿದ ನಂತರ, ಡಿಎಯಿಂದ ಗುಣಿಸಲಾಗುತ್ತದೆ. ಅದರ ಉತ್ತರ ನಿಮ್ಮ ತುಟ್ಟಿಭತ್ಯೆ ಇರಲಿದೆ. ಉದಾಹರಣೆಗಾಗಿ, ನಿಮ್ಮ ಮೂಲ ವೇತನ ಮತ್ತು ಗ್ರೇಡ್ ಪೇ ಕೂಡಿಸಿದ ನಂತರ ಅದು ರೂ 18000 ಆಗುತ್ತದೆ ಎಂದು ತಿಳಿಯಿರಿ. ಇದರ ಪ್ರಕಾರ, ಇದುವರೆಗೆ ಶೇ. 46 ತುಟ್ಟಿಭತ್ಯೆಗಳ ಲೆಕ್ಕಾಚಾರದ ಆಧಾರದ ಮೇಲೆ ನೀವು 8280 ರೂ.ಗಳನ್ನು ತುಟ್ಟಿಭತ್ಯೆಯಾಗಿ ಪಡೆಯುತ್ತಿರಿ. ಈಗ ತುಟ್ಟಿಭತ್ಯೆ ಶೇ.46ರಿಂದ ಶೇ.50ಕ್ಕೆ ಏರಿಕೆಯಾಗಿದೆ. ಅಂದರೆ ಡಿಎ ವಾರ್ಷಿಕವಾಗಿ 9000 ರೂ.ಗೆ ಏರಿಕೆಯಾಗಲಿದೆ. ಅಂದರೆ, ಡಿಎ ಹೆಚ್ಚಳದಿಂದಾಗಿ, ನಿಮ್ಮ ವೇತನ  ಪ್ರತಿ ತಿಂಗಳು 720 ರೂಪಾಯಿಗಳಷ್ಟು ಹೆಚ್ಚಾಗುತ್ತದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News