ಆಧಾರ್ ಕಾರ್ಡ್ ನವೀಕರಣ: ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಫೋನ್ ಸಂಖ್ಯೆಯನ್ನು ಲಿಂಕ್ ಮಾಡುವುದರಿಂದ ಹಿಡಿದು ಪ್ರಮುಖ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸುವವರೆಗೆ, ನೀವು ವಿವಿಧ ಕಾರಣಗಳಿಗಾಗಿ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕಾಗಬಹುದು. ನಿಮ್ಮ ಹತ್ತಿರದ ಆಧಾರ್ ಕೇಂದ್ರವನ್ನು ಹುಡುಕಲು ನೀವು ಪ್ರಯತ್ನಿಸುತ್ತಿದ್ದರೆ ಇಲ್ಲಿದೆ ಗುಡ್‍ ನ್ಯೂಸ್. ವಾಸ್ತವವಾಗಿ ಕೆಲವು ಹಂತಗಳನ್ನು ಪಾಲಿಸುವ ಮೂಲಕ ನೀವು ಆನ್‌ಲೈನ್‌ನಲ್ಲಿ ಆಧಾರ್ ಕೇಂದ್ರವನ್ನು ಪತ್ತೆ ಮಾಡಬಹುದು. ಅಲ್ಲಿಗೆ ಹೋಗುವ ಮೂಲಕ ನೀವು ಅಗತ್ಯ ನವೀಕರಣಗಳನ್ನು ಮಾಡಿಕೊಳ್ಳಬಹುದು.


COMMERCIAL BREAK
SCROLL TO CONTINUE READING

ಆಧಾರ್ ಕಾರ್ಡ್


ಆಧಾರ್ ಕಾರ್ಡ್ ಅನ್ನು ಇಂದು ಭಾರತದಲ್ಲಿ ಪ್ರಮುಖ ದಾಖಲೆಯಾಗಿ ಬಳಸಲಾಗುತ್ತದೆ. ಅನೇಕ ಸರ್ಕಾರಿ ಮತ್ತು ಸರ್ಕಾರೇತರ ಯೋಜನೆಗಳಿಗೆ ಆಧಾರ್ ಕಾರ್ಡ್ ಅಗತ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ನಾಗರಿಕರು ಆಧಾರ್ ಕಾರ್ಡ್ ಹೊಂದಿರುವುದು ಅನಿವಾರ್ಯವಾಗಿದೆ. ಅದೇ ರೀತಿ ಜನರು ತಮ್ಮ ಆಧಾರ್ ಕಾರ್ಡ್‌ನಲ್ಲಿ ಕೆಲವು ನವೀಕರಣಗಳನ್ನು ಮಾಡುವುದು ಅಗತ್ಯವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಆಧಾರ್ ಕೇಂದ್ರಕ್ಕೆ ಹೋಗಿ ಅಗತ್ಯ ನವೀಕರಣಗಳನ್ನು ಮಾಡಬಹುದು.


ಇದನ್ನೂ ಓದಿ: ಹಬ್ಬಕ್ಕೆ ಮುನ್ನ ಬೆಳ್ಳಿ-ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ! ಇಂದು 10 ಗ್ರಾಂ ಚಿನ್ನದ ದರ ಎಷ್ಟಿದೆ?


ಆನ್‌ಲೈನ್‌ನಲ್ಲಿ ಆಧಾರ್ ಕೇಂದ್ರ 


ಆನ್‌ಲೈನ್ ಆಧಾರ್ ಕೇಂದ್ರವನ್ನು ಹುಡುಕಲು UIDAI ವೆಬ್‌ಸೈಟ್‌ಗೆ ಭೇಟಿ ನೀಡಿ. ಈ ಹಂತದ ವಿಧಾನದ ನಂತರ ಆನ್‌ಲೈನ್ ಆಧಾರ್ ಕಾರ್ಡ್ ಕೇಂದ್ರವನ್ನು ಹುಡುಕಬಹುದು.


ಹಂತ 1: https://appointments.uidai.gov.in/easearch.aspx ವೆಬ್‌ಸೈಟ್‌ಗೆ ಭೇಟಿ ನೀಡಿ.


ಹಂತ 2: ಅಧಿಕೃತ ಆಧಾರ್ ನೋಂದಣಿ ಮತ್ತು ನವೀಕರಣ ಕೇಂದ್ರವನ್ನು ಪತ್ತೆಹಚ್ಚಲು 3 ಮಾರ್ಗಗಳಿವೆ. ಒಂದು ರಾಜ್ಯದ ಮೂಲಕ, 2ನೇಯದು ಪಿನ್ ಕೋಡ್ ಮೂಲಕ ಮತ್ತು 3ನೇ ಹಂತ Search box ಮೂಲಕ. ಇಲ್ಲಿ ನಗರ, ಜಿಲ್ಲೆ ಇತ್ಯಾದಿಗಳನ್ನು ಟೈಪ್ ಮಾಡಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದೇ ವಿಧಾನವನ್ನು ಬಳಸಿ.


ಹಂತ 3: ನಾವು ಹತ್ತಿರದ ಆಧಾರ್ ಅಪ್‌ಡೇಟ್ ಕೇಂದ್ರವನ್ನು ಹುಡುಕಲು ಪಿನ್ ಕೋಡ್ ಅನ್ನು ಬಳಸಿದ್ದರೆ, ಸೂಕ್ತ ಕಾಲಮ್‌ನಲ್ಲಿ ಪಿನ್ ಕೋಡ್ ಅನ್ನು ಟೈಪ್ ಮಾಡಿ. ನೀವು 'ಶಾಶ್ವತ ಕೇಂದ್ರಗಳನ್ನು ಮಾತ್ರ ತೋರಿಸು' ಆಯ್ಕೆಯನ್ನು ಕ್ಲಿಕ್ ಮಾಡಿದರೆ, ಆ ಪ್ರದೇಶದಲ್ಲಿ ಲಭ್ಯವಿರುವ ಶಾಶ್ವತ ಆಧಾರ್ ನವೀಕರಣ ಕೇಂದ್ರಗಳ ಪಟ್ಟಿಯನ್ನು ನಿಮಗೆ ತೋರಿಸಲಾಗುತ್ತದೆ. ಆದಾಗ್ಯೂ, UIDAI ತಾತ್ಕಾಲಿಕ ಕೇಂದ್ರಗಳನ್ನು ಹೊಂದಿದೆ ಎಂಬುದನ್ನು ನೆನಪಿನಲ್ಲಿಡಿ. ನೀವು 'ಶಾಶ್ವತ ಕೇಂದ್ರಗಳನ್ನು ಮಾತ್ರ ತೋರಿಸು' ಆಯ್ಕೆಯನ್ನು ಕ್ಲಿಕ್ ಮಾಡದಿದ್ದರೆ, ಇದು ಒಂದು ಪ್ರದೇಶದಲ್ಲಿ ತಾತ್ಕಾಲಿಕ ಮತ್ತು ಶಾಶ್ವತ ಆಧಾರ್ ಕೇಂದ್ರಗಳನ್ನು ತೋರಿಸುತ್ತದೆ.


ಹಂತ 4: ಕ್ಯಾಪ್ಚಾವನ್ನು ಭರ್ತಿ ಮಾಡಿ ನಂತರ 'ಲೊಕೇಟ್ ಎ ಸೆಂಟರ್' ಬಟನ್ ಕ್ಲಿಕ್ ಮಾಡಿ.


ಹಂತ 5: ಹೊಸ ವೆಬ್‌ಪುಟವು ತೆರೆಯುತ್ತದೆ. ಈ ಹೊಸ ವೆಬ್‌ಪುಟವು ಎಲ್ಲಾ ದಾಖಲಾತಿ ಕೇಂದ್ರಗಳ ಪಟ್ಟಿಯನ್ನು ಹೊಂದಿರುತ್ತದೆ. ಯಾವುದೇ ವ್ಯಕ್ತಿ ಕೂಡ ಅಪ್‌ಡೇಟ್ ದಿನಾಂಕವನ್ನು ಹೇಳಲಾದ ದಾಖಲಾತಿ / ಅಪ್‌ಡೇಟ್ ಕೇಂದ್ರದ ವಿಳಾಸದ ಕೆಳಗೆ ನೋಡಲು ಸಾಧ್ಯವಾಗುತ್ತದೆ.


ಇದನ್ನೂ ಓದಿ: Cheapest Car: 6.33 ಲಕ್ಷದ ಈ ಕಾರು 13 ಲಕ್ಷದ 7 ಸೀಟರ್ ಕಾರನ್ನೂ ಮೀರಿಸುತ್ತದೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.