ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವ ಈ ಜಬ್ಬರ್ದಸ್ತ್ ಟ್ರಿಕ್ ನಿಮಗೆ ತಿಳಿದಿದೆಯಾ?

Mutual Fund Investment Trick: ಸುರಕ್ಷಿತ ಹೂಡಿಕೆಯ ಮೂಲಕ ಒಂದು ವೇಳೆ ನೀವೂ ಕೂಡ ಕಡಿಮೆ ಅವಧಿಯಲ್ಲಿ ಕೋಟ್ಯಾಧಿಪತಿಯಾಗಬೇಕು ಎಂಬ ಕನಸು ಕಾಣುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಏಕೆಂದರೆ, ಇಂದು ನಾವು ನಿಮಗೆ ಕೇವಲ 15 ವರ್ಷಗಳಲ್ಲಿ 15000 ರೂ.ಗಳ ನಿಯಮಿತ ಹೂಡಿಕೆಯ ಮೂಲಕ 1 ಕೋಟಿ ರೂ. ಗಳಿಕೆ ಮಾಡುವ ರಾಮಬಾಣ ಉಪಾಯವೊಂದನ್ನು ಹೇಳಲಿದ್ದೇವೆ(Business News In Kannada).  

Written by - Nitin Tabib | Last Updated : Aug 12, 2023, 10:49 PM IST
  • ಕೇವಲ 15 ಸಾವಿರ ರೂ.ಗಳ ನಿಯಮಿತ ಹೂಡಿಕೆ
  • ನಿಮಗೆ ನೀಡಲಿದೆ ಶೇ.15 ರಷ್ಟು ಆದಾಯ
  • 15 ವರ್ಷಗಳಲ್ಲಿ ಕೋಟ್ಯಾಧಿಪತಿಯಾಗುವ ನಿಮ್ಮ ಕನಸು ನನಸಾಗಲಿದೆ.
ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವ ಈ ಜಬ್ಬರ್ದಸ್ತ್ ಟ್ರಿಕ್ ನಿಮಗೆ ತಿಳಿದಿದೆಯಾ? title=

ಬೆಂಗಳೂರು: ಸುರಕ್ಷಿತ ಹೂಡಿಕೆಯ ಮೂಲಕ ನೀವೂ ಕೂಡ ಕೋಟ್ಯಾಧಿಪತಿಯಾಗುವ ಕನಸನ್ನು ಕಾಣುತ್ತಿದ್ದರೆ, ತಕ್ಷಣವೆ ಈ ಸುದ್ದಿಯನ್ನು ಓದಿ (Business News In Kannada). ಮ್ಯೂಚುವಲ್ ಫಂಡ್‌ಗಳಲ್ಲಿ ಒಂದು ವಿಶೇಷ ನಿಯಮವನ್ನು ಅನುಸರಿಸುವ ಮೂಲಕ ಹೂಡಿಕೆ ಮಾಡಿದರೆ, ನೀವು ಸುಲಭವಾಗಿ 1 ಕೋಟಿ ರೂಪಾಯಿಗಳ ಮೊತ್ತವನ್ನು ಪಡೆಯಬಹುದು. ಹೌದು, ಇದಕ್ಕಾಗಿ ನಿಮಗೆ '15-15-15 ರೂಲ್', ಉಳಿತಾಯ ಮತ್ತು ಹೂಡಿಕೆ ನಿಯಮ ನಿಮಗೆ ಸಹಾಯ ಮಾಡಲಿದೆ. ಈ ನಿಯಮದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ  ಬನ್ನಿ.

ಏನಿದು 15-15-15 ನಿಯಮ?
ಈ ನಿಯಮದಲ್ಲಿ ಮೂರು ಬಾರಿ ಬರೆಯಲಾದ 15 15 15,  ಬೆಳವಣಿಗೆ ದರ, ಹೂಡಿಕೆಯ ಅವಧಿ ಮತ್ತು ಮಾಸಿಕ ಉಳಿತಾಯದ ಮೊತ್ತವನ್ನು ಸೂಚಿಸುತ್ತವೆ. ಇದರ ಪ್ರಕಾರ, ನೀವು ವಾರ್ಷಿಕವಾಗಿ 15% ಆದಾಯವನ್ನು ಬಯಸಿದರೆ, ನೀವು 15 ವರ್ಷಗಳವರೆಗೆ ಪ್ರತಿ ತಿಂಗಳು 15000 ರೂ.ಗಳ ಉಳಿತಾಯ ಮಾಡಬೇಕು. ಇದರಿಂದ ನೀವು ಸುಲಭವಾಗಿ ಕೋಟ್ಯಾಧಿಪತಿಯಾಗಬಹುದು.
15-15-15 ಸೂತ್ರ
>> 15- ಬೆಳವಣಿಗೆ ದರ
>> 15- ಹೂಡಿಕೆಯ ಅವಧಿ
>> 15- ಮಾಸಿಕ ಉಳಿತಾಯದ ಮೊತ್ತ

ಈ ನಿಯಮದ ಪ್ರಕಾರ ನೀವು ಲೆಕ್ಕ ಹಾಕಿದರೆ, ಪ್ರತಿ ತಿಂಗಳು 15000 ರೂಪಾಯಿಗಳೊಂದಿಗೆ, ನೀವು 15 ವರ್ಷಗಳಲ್ಲಿ 27 ಲಕ್ಷ ರೂ.ಠೇವಣಿ ಮಾಡಲು ಸಾಧ್ಯವಾಗಲಿದೆ. ಈ ನಿಯಮಿತ ಠೇವಣಿ ಮೂಲಕ ನೀವು ರೂ 73 ಲಕ್ಷ ರೂ.ಗಳ ಲಾಭವನ್ನು ಪಡೆಯಬಹುದು. ಈ ರೀತಿಯಾಗಿ ಕೇವಲ 15 ವರ್ಷಗಳ ಹೂಡಿಕೆಯಿಂದ ಸಂಪೂರ್ಣ 1 ಕೋಟಿ ರೂ.ಮೊತ್ತ ನಿಮ್ಮ ಕೈಸೇರಲಿದೆ.

ಇದನ್ನೂ ಓದಿ-Honda CD110 Dream Deluxe 2023 ಮಾರುಕಟ್ಟೆಗೆ ಬಿಡುಗಡೆ, ಬೆಲೆ ಜೊತೆಗೆ ಹೆಚ್ಚುವರಿ ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ!

ಈ ರೀತಿ 1 ಕೋಟಿ ರೂ. ನಿಮ್ಮ ಕೈಸೇರುತ್ತದೆ
>> ಶೇ.15ರ ವಾರ್ಷಿಕ ಆದಾಯ ನಿಮಗೆ ಪ್ರಸ್ತುತ ಸ್ವಲ್ಪ ಕಠಿಣ ಎಂಬಂತೆ ತೋರುತ್ತಿದ್ದರೂ ಕೂಡ ನಿಮ್ಮ ದೀರ್ಘಾವಧಿ ಹೂಡಿಕೆ ಲಾಂಗ್ ಟರ್ಮ್ ನಲ್ಲಿ ನಿಮಗೆ ಸುಲಭವಾಗಿ ಶೇ.12ರಷ್ಟು ವೃದ್ಧಿಯನ್ನು ನೀಡುತ್ತದೆ.
>> ಶೇ.15 ರಷ್ಟು ಆದಾಯ ಪಡೆಯಲು SIP ಗಳಲ್ಲಿ ಹೂಡಿಕೆ ಮಾಡಿ.
>> ಹಂತ ಹಂತವಾಗಿ SIP ಮೂಲಕ ನಿಮ್ಮ ಹೂಡಿಕೆಯನ್ನು ಹೆಚ್ಚಿಸಿ
>> ಯಾವುದೇ ರೀತಿಯ ಹೆಚ್ಚುವರಿ ಹೊರೆಯಿಲ್ಲದೆ ನಿಮಗೆ 1 ಕೋಟಿ ಸಿಗಲಿದೆ.
>> SIP ಗಾಗಿ, ನಾವು ಹಣದುಬ್ಬರ ದರವನ್ನು ನೋಡುವುದು ಎಂದಿಗೂ ಕೂಡ ಉತ್ತಮ. ಏಕೆಂದರೆ, ಹಣದುಬ್ಬರವನ್ನು ಹೊಡೆದುಹಾಕಲು ನೀವು ನಿಮ್ಮ ಗುರಿಯನ್ನು ನಿರ್ಧರಿಸಿ. 
>> ನಂತರ ಅದಕ್ಕೆ ತಕ್ಕಂತೆ SIP ಯಲ್ಲಿನ ನಿಮ್ಮ ಹೂಡಿಕೆಯನ್ನು ಹೆಚ್ಚಿಸುತ್ತಾ ಹೋಗಿ..

ಇದನ್ನೂ ಓದಿ-ಈ ಕೆಲಸಗಳನ್ನು ಮನೆಯಿಂದಲೇ ಮಾಡಿ ಹಣ ಸಂಪಾದಿಸಲು ಕೇಂದ್ರ ಸರ್ಕಾರ ಸಹಾಯ ಮಾಡುತ್ತೆ ಗೊತ್ತಾ?

SIP ಮೂಲಕ ದೊಡ್ಡ ಮೊತ್ತ ಪಡೆಯಬಹುದು
ಎಸ್ಐಪಿಯಲ್ಲಿನ ನಿಮ್ಮ ಹೂಡಿಕೆಯನ್ನು ಹೆಚ್ಚಿಸುವುದರ ಜೊತೆಗೆ ನೀವು ಅಧಿಕ ಚಕ್ರಬಡ್ಡಿಯನ್ನು ನೀಡುವ ಸಾಧನಗಳಲ್ಲಿನ ಹೂಡಿಕೆಗೆ ಹೆಚ್ಚಿನ ಒತ್ತು ನೀಡಿ. ಈ ಸಾಧಾರಣ ಸೂತ್ರವನ್ನು ಗಮನದಲ್ಲಿಟ್ಟುಕೊಂಡು ನೀವು ನಿಮ್ಮ ಹೂಡಿಕೆಯನ್ನು ಮಾಡಿದರೆ, ಹೆಚ್ಚಿನ ಮೊತ್ತ ನಿಮ್ಮ ಬಳಿ ಸಂಗ್ರಹವಾಗಲಿದೆ. ಇಲ್ಲಿ ಎಸ್ಐಪಿಯ ಅರ್ಥ ದೀರ್ಘಾವಧಿ ಹೂಡಿಕೆ ಯೋಜನೆಯಾಗಿದೆ. ಸಾಮಾನ್ಯವಾಗಿ 10, 20 ಹಾಗೂ 30 ವರ್ಷಗಳವರೆಗೆ ಇದರಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News