Pan Card Aadhaar Card Linking: ಪ್ಯಾನ್ ಕಾರ್ಡ್ ಭಾರತದಲ್ಲಿ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಒಂದು ವಿಶಿಷ್ಟವಾದ ಹತ್ತು ಅಂಕೆಗಳ ಆಲ್ಫಾನ್ಯೂಮರಿಕ್ ಸಂಖ್ಯೆಯಾಗಿದೆ. ಇದನ್ನು ಲ್ಯಾಮಿನೇಟೆಡ್ ಪ್ಲಾಸ್ಟಿಕ್ ಕಾರ್ಡ್ ರೂಪದಲ್ಲಿ ನೀಡಲಾಗುತ್ತದೆ. ಇದು ತೆರಿಗೆ ಉದ್ದೇಶಗಳಿಗಾಗಿ ಭಾರತದಲ್ಲಿನ ಪ್ರಜೆಗಳು ಮತ್ತು ಘಟಕಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆಯಾಗಿ ಕಾರ್ಯನಿರ್ವಹಿಸುತ್ತದೆ. ಪ್ಯಾನ್ ಕಾರ್ಡ್ ಅನ್ನು ಹಣಕಾಸಿನ ವ್ಯವಹಾರಗಳಿಗೆ ಬಳಸಲಾಗುತ್ತದೆ. ಜೊತೆಗೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಬಹಳ ಮುಖ್ಯವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Pramotion-Increment Tips: ಒಳ್ಳೆಯ ಬಡ್ತಿ - ಇಂಕ್ರಿಮೆಂಟ್ ಪಡೆಯಬೇಕೆ? ತಕ್ಷಣ ಈ ಕೆಲಸ ಮಾಡಿ, ಕೇಳದೆಯೇ ಪ್ರಮೋಷನ್ ಕೊಡ್ತಾರೆ ಬಾಸ್!


ಹಣಕಾಸು ಕಾಯಿದೆ 2017, ಆದಾಯ ತೆರಿಗೆ ಕಾಯಿದೆ 1961ಕ್ಕೆ ಹೊಸ ವಿಭಾಗ 139AA ಅನ್ನು ಸೇರಿಸಿದೆ. ಇದರ ಅಡಿಯಲ್ಲಿ 1 ಜುಲೈ 2017 ರಿಂದ ಜಾರಿಗೆ ಬರುವಂತೆ PAN ಗೆ ಅರ್ಜಿ ಸಲ್ಲಿಸುವಾಗ ಅಥವಾ ಆದಾಯದ ದಾಖಲೆಯನ್ನು ಒದಗಿಸುವಾಗ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ. ನೀವು ಇನ್ನೂ ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಮಾರ್ಚ್ 31, 2023 ರ ಮೊದಲು ಲಿಂಕ್ ಮಾಡಬೇಕಾಗುತ್ತದೆ.


ಆಧಾರ್’ಗೆ ಲಿಂಕ್ ಮಾಡದಿದ್ದರೆ ಏಪ್ರಿಲ್ 1, 2023 ರಿಂದ ನೀವು PAN ಕಾರ್ಡ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಒಮ್ಮೆ PAN ಕಾರ್ಡ್ ಹೊಂದಿರುವವರು ಈ ಗಡುವನ್ನು ತಪ್ಪಿಸಿಕೊಂಡರೆ, 10 ಅಂಕಿಗಳ ವಿಶಿಷ್ಟ ಆಲ್ಫಾನ್ಯೂಮರಿಕ್ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಅಷ್ಟೇ ಅಲ್ಲದೆ, PAN ಕಾರ್ಡ್ ಕ್ಲೋಸ್ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ.


ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿದೆಯೇ ಎಂದು ಹೀಗೆ ಪರಿಶೀಲಿಸಿ


  • ಇ-ಫೈಲಿಂಗ್ ಪೋರ್ಟಲ್ ಮುಖಪುಟದಲ್ಲಿ 'ಕ್ವಿಕ್ ಲಿಂಕ್ಸ್' ಗೆ ಹೋಗಿ ಮತ್ತು ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಿ.

  • ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಆಧಾರ್ ಸ್ಟೇಟಸ್ ವೀಕ್ಷಿಸಿ ಲಿಂಕ್ ಅನ್ನು ಕ್ಲಿಕ್ ಮಾಡಿ.

  • ಯಶಸ್ವಿ ಪರಿಶೀಲನೆಯಲ್ಲಿ, ನಿಮ್ಮ ಲಿಂಕ್ ಆಧಾರ್ ಸ್ಟೇಟಸ್ ಕುರಿತು ಸಂದೇಶವನ್ನು ಪ್ರದರ್ಶಿಸಲಾಗುತ್ತದೆ.


ಇದನ್ನೂ ಓದಿ: ಹನಿ ಗ್ಯಾಂಗ್‌ನಿಂದ ʼಮಂಚಕ್ಕೆ ಕರೆದು ಮುಂಜಿʼ ಮಾಡಿಸುವುದಾಗಿ ಧಮ್ಕಿ : ಉದ್ಯಮಿ ಜಸ್ಟ್‌ ಮಿಸ್‌


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.