Astro Tips For Career Growth: ಮಾರ್ಚ್-ಏಪ್ರಿಲ್ ತಿಂಗಳು ಅಂದರೆ ನೌಕರರ ಮೌಲ್ಯಮಾಪನದ ತಿಂಗಳು. ಇಡೀ ವರ್ಷ ಕೆಲಸ ಮಾಡಿದ ನಂತರ, ಈ ತಿಂಗಳು ಜನರಿಗೆ ಬಡ್ತಿ, ವೇತನ ಹೆಚ್ಚಳ ಭಾಗ್ಯ ಲಭಿಸುತಡೆ. ಆದರೆ ಕೆಲವೊಮ್ಮೆ ಅರ್ಹತೆಯ ಇದ್ದಲೂ ಕೂಡ ಕಠಿಣ ಪರಿಶ್ರಮವು ಫಲಿತಾಂಶವನ್ನು ನೀಡುವುದಿಲ್ಲ. ಇದಕ್ಕಾಗಿ ಜೋತಿಷ್ಯ ಶಾಸ್ತ್ರದಲ್ಲಿ ಕೆಲವು ಕ್ರಮಗಳನ್ನು ಉಲ್ಲೇಖಿಸಲಾಗಿದೆ, ಈ ಕ್ರಮಗಳು ನಿಮ್ಮನ್ನು ನಿಮ್ಮ ಬಾಸ್ ನ ಗುಡ್ ಬುಕ್ ಗೆ ತರುತ್ತವೆ ಮತ್ತು ನಿಮಗೆ ಪ್ರಮೋಷನ್ ಮತ್ತು ಬಡ್ತಿ ಭಾಗ್ಯ ನೀಡುತ್ತವೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಶನಿ ದೋಷದ ಕಾರಣ ಕೂಡ ಬಡ್ತಿಯಲ್ಲಿ ಅಡೆತಡೆಗಳು ಎದುರಾಗುತ್ತವೆ. ಈ ದೋಷವನ್ನು ಪರಿಹರಿಸಲು ಪ್ರತಿನಿತ್ಯ ಕಾಗೆಗೆ ಬೇಯಿಸಿದ ಅನ್ನವನ್ನು ತಿನ್ನಿಸಿ. ಅಲ್ಲದೆ ನಿರಂತರ 43 ದಿನಗಳ ಕಾಲ ಹರಿಯುವ ನೀರಿನಲ್ಲಿ ಕಟ್ಟಿಗೆಯ ಇದ್ದಿಲು ಹರಿಬಿಡಿ. ಇದರಿಂದ ವರ್ಕ್ ಪ್ಲೇಸ್ ನಲ್ಲಿ ನಿಮ್ಮ ಸ್ಥಾನ ಬಲಗೊಳ್ಳುತ್ತದೆ ಹಾಗೂ ಬಡ್ತಿ ಪ್ರಾಪ್ತಿಯಾಗುವ ಸಾಧ್ಯತೆ ಹೆಚ್ಚಾಗುತ್ತದೆ.
2. ನಿತ್ಯ ಬಾಳೆಹಣ್ಣು ಸೇವಿಸುವುದರಿಂದಲೂ ಕೂಡ ಗುಡ್ ಲುಕ್ ಹೆಚ್ಚಾಗುತ್ತದೆ. ಇದರಿಂದ ದೇವಗುರು ಬುರ್ಹಸ್ಪತಿಯ ಶುಭಫಲಗಳು ಪ್ರಾಪ್ತಿಯಾಗುತ್ತವೆ ಮತ್ತು ನಿಮ್ಮ ಮೇಲಾಧಿಕಾರಿಯ ಜೊತೆಗೆ ನಿಮ್ಮ ಸಂಬಂಧ ಗಟ್ಟಿಗೊಳ್ಳುತ್ತದೆ. ಇದರ ಜೊತೆಗೆ ನಿಮಗೆ ಪದೋನ್ನತಿ-ವೇತನ ಹೆಚ್ಚಳ ಯೋಗ ಪ್ರಾಪ್ತಿಯಾಗುತ್ತದೆ.
4. ಒಂದು ವೇಳೆ ಬಾಸ್ ನಿಮ್ಮನ್ನು ಇಷ್ಟಪಡುವುದಿಲ್ಲ ಮತ್ತು ತೊಂದರೆಗಳನ್ನು ಕೊಡುತ್ತಾರೆ ಎಂದರೆ ನೀವು ಈ ಉಪಾಯ ಮಾಡಬಹುದು. ಲಾಲ್ ಕಿತಾಬ್ ನಲ್ಲಿ ಸೂಚಿಸಲಾಗಿರುವ ಉಪಾಯದ ಪ್ರಕಾರ, 40 ದಿನಗಳವರೆಗೆ ನಿರಂತರವಾಗಿ ಒಂದು ಲವಂಗವನ್ನು ಉರಿಸಿ. ಈ ರೀತಿ ಮಾಡುವುದರಿಂದ ನಿಮ್ಮ ಪ್ರತಿ ನಿಮ್ಮ ಬಾಸ್ ಸ್ವಭಾವದಲ್ಲಿ ಪರಿವರ್ತನೆಯಾಗುತ್ತದೆ ಹಾಗೂ ನಿಮಗೆ ಪ್ರಮೋಷನ್-ಇಂಕ್ರಿಮೆಂಟ್ ಪ್ರಾಪ್ತಿಯಾಗುತ್ತದೆ.
5. ಪ್ರಮೋಷನ್ ಬೇಕೆಂದರೆ ನಿಯಮಿತವಾಗಿ ಸೂರ್ಯದೇವನನ್ನು ಪೂಜಿಸಿ ಮತ್ತು ಪಾಯಸದ ನೈವೇದ್ಯ ಅರ್ಪಿಸಿ. ಬಳಿಕ ಆ ಪಾಯಸವನ್ನು ನಿಮ್ಮ ಬಾಸ್ ಗೆ ಉಣಬಡಿಸಿ. ಬೇಗನೆ ಆಪ್ರೇಸಲ್ ಭಾಗ್ಯ ಪ್ರಾಪ್ತಿಯಾಗಿ, ಪ್ರಮೋಷನ್-ಇಂಕ್ರೀಮೆಂಟ್ ನಿಮ್ಮದಾಗುತ್ತದೆ.
6. ಜೋತಿಷ್ಯ ಶಾಸ್ತ್ರದ ಪ್ರಕಾರ ವೃತ್ತಿ ಜೀವನದಲ್ಲಿ ಪ್ರಮೋಷನ್ ಪಡೆಯಲು ನಿಮ್ಮ ಮೇಲೆ ಸೂರ್ಯದೇವನ ಕೃಪೆ ಇರುವುದು ತುಂಬಾ ಮಹತ್ವದ್ದಾಗಿದೆ. ಇದಕ್ಕಾಗಿ ನಿತ್ಯ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ನಿಮಗೆ ನಿಮ್ಮ ಪರಿಶ್ರಮದ ಸಂಪೂರ್ಣ ಫಲ ಪ್ರಾಪ್ತಿಯಾಗುತ್ತದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)