ನವದೆಹಲಿ : ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐನ (SBI) ಕೆಲವು ಸೇವೆಗಳು ನಾಳೆ 2 ಗಂಟೆಗಳ ಕಾಲ ಸ್ಥಗಿತಗೊಳ್ಳಲಿವೆ. ಈ ಸಮಯದಲ್ಲಿ ಎಸ್‌ಬಿಐ ಗ್ರಾಹಕರಿಗೆ (SBI Customers) ಯಾವುದೇ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಟ್ವಿಟರ್ ನಲ್ಲಿ ಈ ಕುರಿತು ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ಟ್ವೀಟ್ ಮಾಡಿರುವ ಬ್ಯಾಂಕ್  : 
ಎಸ್‌ಬಿಐ (SBI) ಟ್ವಿಟರ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಸಿಸ್ಟಮ್ ನಿರ್ವಹಣೆಯಿಂದಾಗಿ ಬ್ಯಾಂಕಿನ ಕೆಲವು ಸೇವೆಗಳು ಸೆಪ್ಟೆಂಬರ್ 15 ರಂದು ಸ್ಥಗಿತಗೊಳ್ಳಲಿದೆ ಎಂದು ಬ್ಯಾಂಕ್ ತಿಳಿಸಿದೆ. ಇಂಟರ್ನೆಟ್ ಬ್ಯಾಂಕಿಂಗ್ (Internet Banking), ಯೋನೊ, ಯೋನೊ ಲೈಟ್ (YONO Lite) ಮತ್ತು ಯುಪಿಐ ಸೇವೆಯು ನಾಳೆ ಕೆಲ ಹೊತ್ತು ಕಾರ್ಯ ನಿರ್ವಹಿಸುವುದಿಲ್ಲ. ಸೆಪ್ಟೆಂಬರ್ 15 ರ ರಾತ್ರಿ 12 ರಿಂದ 2 ಗಂಟೆಯವರೆಗೆ (120 ನಿಮಿಷಗಳು) ಈ ಸೇವೆಗಳು ಲಭ್ಯವಿರುವುದಿಲ್ಲ ಎಂದು ಎಸ್‌ಬಿಐ ಟ್ವೀಟ್ ಮೂಲಕ ತಿಳಿಸಿದೆ. ಈ ಸಮಯದಲ್ಲಿ, ಗ್ರಾಹಕರು ಯಾವುದೇ ಪ್ಲಾಟ್ ಫಾರಂನಲ್ಲಿ ವಹಿವಾಟು ಸೇರಿದಂತೆ ಇತರ ಚಟುವಟಿಕೆಗಳನ್ನು ಮಾಡದಂತೆ ಬ್ಯಾಂಕ್ ಹೇಳಿದೆ. 


ಇದನ್ನೂ ಓದಿ : ಪ್ಯಾನ್ ಕಾರ್ಡ್ ಬಳಕೆದಾರರ ಗಮನಕ್ಕೆ! ಮರೆತು ಕೂಡ ಈ ತಪ್ಪನ್ನು ಮಾಡಬೇಡಿ, ಬೀಳಲಿದೆ 10 ಸಾವಿರ ದಂಡ


ಈ ಮೊದಲು ಕೂಡಾ ಬ್ಯಾಂಕಿಂಗ್ ಸೇವೆಗಳು ಸ್ಥಗಿತಗೊಂಡಿತ್ತು : 
ಈ ಹಿಂದೆ ಸೆಪ್ಟೆಂಬರ್ 04 ರಂದು, ಎಸ್‌ಬಿಐನ ಯೋನೊ (SBI YONO) ಸೇವೆಯನ್ನು ನಿರ್ವಹಣೆ ಕೆಲಸದ ಕಾರಣದಿಂದ ಸುಮಾರು 3 ಗಂಟೆಗಳ ಕಾಲ ನಿಲ್ಲಿಸಲಾಗಿತ್ತು. ಇದರ ಹೊರತಾಗಿ, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ನಿರ್ವಹಣೆಯ ಕಾರಣದಿಂದಾಗಿ, SBI ಬ್ಯಾಂಕಿಂಗ್ ಸೇವೆಗಳನ್ನುಸ್ಥಗಿತಗೊಳಿಸಲಾಗಿತ್ತು. ಸಾಮಾನ್ಯವಾಗಿ ನಿರ್ವಹಣೆ ಕೆಲಸವನ್ನು ರಾತ್ರಿಯ ವೇಳೆಯಲ್ಲಿ ಮಾಡಲಾಗುತ್ತದೆ. ಇದರಿಂದ ಹೆಚ್ಚಿನ ಗ್ರಾಹಕರ ಮೇಲೆ ಇದು ಪರಿಣಾಮ ಬೀರುವುದಿಲ್ಲ.


ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ :
ಎಸ್‌ಬಿಐನ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು 8 ಕೋಟಿಗೂ ಹೆಚ್ಚು ಜನರು ಬಳಸುತ್ತಾರೆ ಮತ್ತು ಮೊಬೈಲ್ ಬ್ಯಾಂಕಿಂಗ್ (Mobile banking) ಅನ್ನು ಸುಮಾರು ಎರಡು ಕೋಟಿಗೂ ಅಧಿಕ ಜನರು ಬಳಸುತ್ತಾರೆ. ಇನ್ನು  ಯೋನೊದಲ್ಲಿ ನೋಂದಾಯಿತ ಗ್ರಾಹಕರ ಸಂಖ್ಯೆ 3.45 ಕೋಟಿಗಳಾಗಿದ್ದು, ಇದರಲ್ಲಿ ಸುಮಾರು 90 ಲಕ್ಷ ಗ್ರಾಹಕರು ಪ್ರತಿನಿತ್ಯ ಲಾಗಿನ್ ಆಗುತ್ತಾರೆ.


ಇದನ್ನೂ ಓದಿ :  ನಿಮ್ಮ ಮೊಬೈಲ್ ಸಂಖ್ಯೆ ಬದಲಾಗಿದೆಯೇ? ಆಧಾರ್ ಕಾರ್ಡ್‌ಗೆ ತ್ವರಿತವಾಗಿ ಲಿಂಕ್ ಮಾಡಿ, ಹಂತ ಹಂತದ ಪ್ರಕ್ರಿಯೆ ಇಲ್ಲಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.