ನವದೆಹಲಿ: ಬ್ಯಾಂಕ್ ಗ್ರಾಹಕರಿಗೆ ಆರ್‌ಬಿಐ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಇಂದು ರಾತ್ರಿಯಿಂದ NEFT ಸೇವೆ ನಾಳೆ (ಭಾನುವಾರ) ಮಧ್ಯಾಹ್ನದವರೆಗೆ ಲಭ್ಯವಿರುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ತಿಳಿಸಿದೆ.


COMMERCIAL BREAK
SCROLL TO CONTINUE READING

ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ಗಳ ವರ್ಗಾವಣೆ (NEFT) ಇದು ಒಂದು ಇಂಟರ್ನೆಟ್ ಬ್ಯಾಂಕಿಂಗ್  ಪಾವತಿ ಸೌಲಭ್ಯದ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಬ್ಯಾಂಕ್ ಗ್ರಾಹಕರು ಯಾವುದೇ ತುರ್ತು ಪಾವತಿಮಾಡಲು ರಿಯಲ್ ಟೈಮ್ ಗ್ರಾಸ್ ಸೆಟಲ್ ಮೆಂಟ್ (RTGS ) ಅನ್ನೂ ಬಳಸಬಹುದು. 


ಇದನ್ನೂ ಓದಿ : Big Alert! ಇಂದು ರಾತ್ರಿ 10.45 ರಿಂದ ಮೂರು ದಿನಗಳ ಕಾಲ SBI ಈ ಸೇವೆಗಳು ಬಂದ್ ಇರಲಿವೆ


ಆರ್‌ಬಿಐ(Reserve Bank of India) ಸ್ವತಃ ನಿಯಂತ್ರಿಸುವ NEFT ವ್ಯವಸ್ಥೆ ಇಂದಿನಿಂದ ನಾಳೆ (ಭಾನುವಾರ) ಮಧ್ಯಾಹ್ನ 2 ಗಂಟೆಯವರೆಗೆ ಲಭ್ಯವಿರುವುದಿಲ್ಲ ಎಂದು ಭಾರತದ ಕೇಂದ್ರ ಬ್ಯಾಂಕ್ ತಿಳಿಸಿದೆ. ತಾಂತ್ರಿಕ ನವೀಕರಣ, ಇದು NEFT ಸ್ಪೀಡ್ ಮತ್ತು ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವ ಕಾರಣ ಸೇವೆ ಲಭ್ಯವಿರುವುದಿಲ್ಲ ಎಂದು ಆರ್‌ಬಿಐ ತಿಳಿಸಿದೆ.


ಇದನ್ನೂ ಓದಿ : EPFO: ನಿಮ್ಮ ಖಾತೆಗೆ PF ಹಣ ಬಂತಾ? ಚಿಟಿಕೆ ಹೊಡೆಯೋದ್ರಲ್ಲಿ ಈ ರೀತಿ ಪತ್ತೆ ಮಾಡಿ


ಸ್ಪೀಡ್ ಮತ್ತು ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ NEFT(National Electronic Funds Transfer)ಯ ತಾಂತ್ರಿಕ ನವೀಕರಣವನ್ನು ಮೇ 22, 2021 ರ ವ್ಯವಹಾರಮುಕ್ತಾಯದ ನಂತರ ನಿಗದಿಪಡಿಸಲಾಗಿದೆ. ಅದರಂತೆ, ಮೇ 23, 2021 ರ ಭಾನುವಾರ 12.01 ಗಂಟೆಯಿಂದ 14:00 ಗಂಟೆಯವರೆಗೆ NEFT ಸೇವೆ ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ RTGS ವ್ಯವಸ್ಥೆ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಆರ್‌ಬಿಐ ತಿಳಿಸಿದೆ.


ಇದನ್ನೂ ಓದಿ : Jio ಗ್ರಾಹಕರಿಗೆ ಸಿಹಿ ಸುದ್ದಿ: 39 ರೂ.ಗೆ ಅನಿಯಮಿತ ಇಂಟರ್ನೆಟ್ ಪ್ಲಾನ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.