Big Alert! ಇಂದು ರಾತ್ರಿ 10.45 ರಿಂದ ಮೂರು ದಿನಗಳ ಕಾಲ SBI ಈ ಸೇವೆಗಳು ಬಂದ್ ಇರಲಿವೆ

Big Alert! - ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ 44 ಕೋಟಿ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದನ್ನು ಈಗಾಗಲೇ ಪ್ರಕಟಿಸಿದೆ. ಬ್ಯಾಂಕ್ ನ ಕೆಲ ಅತ್ಯಾವಶ್ಯಕ ಸೇವೆಗಳು ಮೇ 21, 22 ಹಾಗೂ 23 ರಂದು ಬಂದ್ ಇರಲಿವೆ. 

Written by - Nitin Tabib | Last Updated : May 21, 2021, 10:10 PM IST
  • ಇಂದು ರಾತ್ರಿಯಿಂದ SBIನ ಈ ಸೇವೆಗಳು ಸ್ಥಗಿತಗೊಳ್ಳಲಿವೆ
  • ಮುಂದಿನ ಮೂರು ದಿನಗಳ ಕಾಲ ಈ ಸೇವೆಗಳು ಗ್ರಾಹಕರಿಗೆ ಲಭ್ಯವಿರುವುದಿಲ್ಲ.
  • ಯಾವ ಯಾವ ಸೇವೆಗಳು ಇರಲ್ಲ ತಿಳಿದುಕೊಳ್ಳೋಣ ಬನ್ನಿ.
Big Alert! ಇಂದು ರಾತ್ರಿ 10.45 ರಿಂದ ಮೂರು ದಿನಗಳ ಕಾಲ SBI ಈ ಸೇವೆಗಳು ಬಂದ್ ಇರಲಿವೆ title=
SBI Alert (File Photo)

Big Alert! - ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ 44 ಕೋಟಿ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದನ್ನು ಈಗಾಗಲೇ ಪ್ರಕಟಿಸಿದೆ. ಬ್ಯಾಂಕ್ ನ ಕೆಲ ಅತ್ಯಾವಶ್ಯಕ ಸೇವೆಗಳು ಮೇ 21, 22 ಹಾಗೂ 23 ರಂದು ಬಂದ್ ಇರಲಿವೆ. ಈ ಕುರಿತು ಟ್ವೀಟ್ ಜಾರಿ ಮಾಡಿರುವ ಬ್ಯಾಂಕ್ ತನ್ನ ಗ್ರಾಹಕರಿಗೆ ಅಲರ್ಟ್ ಜಾರಿಗೊಳಿಸಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ತಮ್ಮ ಕೆಲಸಗಳನ್ನು ಪೂರ್ಣಗೊಳಿಸಲು ಸೂಚಿಸಿದೆ.

ಇದನ್ನೂ ಓದಿ-EPFO: ನಿಮ್ಮ ಖಾತೆಗೆ PF ಹಣ ಬಂತಾ? ಚಿಟಿಕೆ ಹೊಡೆಯೋದ್ರಲ್ಲಿ ಈ ರೀತಿ ಪತ್ತೆ ಮಾಡಿ

ಈ ಅಧಿಸೂಚನೆಯನ್ನು ಜಾರಿಗೊಳಿಸಿರುವ SBI ಗ್ರಾಹಕರಿಗೆ ಯಾವುದೇ ಅಡೆತಡೆಗಳಿಲ್ಲದ ಬ್ಯಾಂಕಿಂಗ್ ಎಕ್ಸಪೀರಿಯನ್ಸ್ ಒದಗಿಸಲು ತನ್ನ ಸೇವೆಗಳನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಮೆಂಟೆನೆನ್ಸ್ ಕೆಲಸ ನಡೆಸಲಾಗುತ್ತಿದೆ ಎಂದು ಹೇಳಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ನ ಈ ಟ್ವೀಟ್ ನಲ್ಲಿ ಹೇಳಿರುವ ಪ್ರಕಾರ ಮೇ 21ರ ರಾತ್ರಿ 10.45ಗಂಟೆಯಿಂದ ಮೇ 22ರ  ರಾತ್ರಿ 1 ಗಂಟೆ 15 ನಿಮಿಷದವರೆಗೆ ಹಾಗೂ ಮೇ 23ರ 2.40 ರಿಂದ ಬೆಳಗ್ಗೆ 10ರ ನಡುವೆ ಮೆಂಟೆನೆನ್ಸ್  ಕೆಲಸ ನಡೆಸುವುದಾಗಿ ಹೇಳಲಾಗಿದೆ. 

ಇದನ್ನೂ ಓದಿ- Jio ಗ್ರಾಹಕರಿಗೆ ಸಿಹಿ ಸುದ್ದಿ: 39 ರೂ.ಗೆ ಅನಿಯಮಿತ ಇಂಟರ್ನೆಟ್ ಪ್ಲಾನ್!

ಈ ಅವಧಿಯಲ್ಲಿ ಎಸ್‌ಬಿಐ ಗ್ರಾಹಕರು INB/YONO/YONO Lite/UPI  ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಬ್ಯಾಂಕ್ ಹೇಳಿದೆ. ಎಸ್‌ಬಿಐ ನೀಡಿದ ಮಾಹಿತಿಯ ಪ್ರಕಾರ, ಬ್ಯಾಂಕ್ ಇಂದು ತನ್ನ ಯುಪಿಐ ಪ್ಲಾಟ್‌ಫಾರ್ಮ್ ಅನ್ನು ಅಪ್‌ಗ್ರೇಡ್ ಮಾಡುತ್ತದೆ, ಇದರಿಂದ ಗ್ರಾಹಕರ ಅನುಭವವನ್ನು ಸುಧಾರಿಸಬಹುದು. ಈ ಸಮಯದಲ್ಲಿ, ಯುಪಿಐ ವಹಿವಾಟುಗಳನ್ನು ಗ್ರಾಹಕರಿಗೆ ಸ್ಥಗಿತಗೊಳಿಸಲಾಗುತ್ತಿದೆ.

ಇದನ್ನೂ ಓದಿ- Bank Alert: ಕೆಲವೇ ಗಂಟೆಗಳಲ್ಲಿ ನಿಂತುಹೋಗಲಿದೆ ಬ್ಯಾಂಕುಗಳ ಈ ಸೇವೆ, ಬೇಗ ನಿಮ್ಮ ಕೆಲ್ಸಾ ಮುಗಿಸಿಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News