Bank Holidays in September 2024: ಗೌರಿ-ಗಣೇಶ ಹಬ್ಬ ಸೇರಿ ಸೆಪ್ಟೆಂಬರ್ನಲ್ಲಿ 15 ದಿನ ಬ್ಯಾಂಕ್‌ಗಳಿಗೆ ರಜೆ
Bank Holidays in September 2024: ಸೆಪ್ಟೆಂಬರ್ ತಿಂಗಳಿನಲ್ಲಿ ಗಣೇಶ ಚತುರ್ಥಿ, ಓಣಂ, ಈದ್-ಇ ಮಿಲಾದ್ ಸೇರಿದಂತೆ ಹಲವು ಹಬ್ಬಗಳಿದ್ದು ವಾರಾಂತ್ಯದ ರಜೆಗಳು ಸೇರಿದಂತೆ ಒಟ್ಟು 15 ದಿನಗಳು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
Bank Holidays in September 2024: ಸೆಪ್ಟೆಂಬರ್ ತಿಂಗಳಿನಲ್ಲಿ ಸಾಲು ಸಾಲು ಹಬ್ಬಗಳು ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ, ಭಾನುವಾರದ ರಜೆಗಳು ಸೇರಿದಂತೆ ಒಟ್ಟು 15 ದಿನಗಳು ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಆದಾಗ್ಯೂ, ಸ್ಥಳೀಯ ರಜೆಗಳ ಕಾರಣದಿಂದಾಗಿ ಬೇರೆ ಬೇರೆ ರಾಜ್ಯಗಳಲ್ಲಿ ರಜಾ ದಿನಗಳಲ್ಲಿ ವ್ಯತ್ಯಾಸವಿರುತ್ತದೆ.
ಸಾಮಾನ್ಯವಾಗಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಗ್ರಾಹಕರು ತಮ್ಮ ಬ್ಯಾಂಕಿಂಗ್ ಚಟುವಟಿಕೆಗಳನ್ನು ಯೋಜಿಸಲು ಮತ್ತು ಅನಾನುಕೂಲತೆಯನ್ನು ತಪ್ಪಿಸಲು ಸಹಾಯ ಮಾಡಲು ಬ್ಯಾಂಕ್ ರಜಾದಿನಗಳ ಮಾಸಿಕ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಸೆಪ್ಟೆಂಬರ್ 2024ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು (List of bank holidays in September 2024) ಪರಿಶೀಲಿಸಿ.
ಇದನ್ನೂ ಓದಿ- ಸೆಪ್ಟೆಂಬರ್ 01ರಿಂದ ಬದಲಾಗಲಿವೆ ಈ 09 ನಿಯಮಗಳು, ನಿಮ್ಮ ಪಾಕೆಟ್ ಮೇಲೆ ಡೈರೆಕ್ಟ್ ಎಫೆಕ್ಟ್
ಸೆಪ್ಟೆಂಬರ್ 2024 ರಲ್ಲಿ ಒಟ್ಟು 15 ದಿನ ಬ್ಯಾಂಕ್‌ಗಳಿಗೆ ರಜೆ (Total 15 days bank holiday in September 2024):
ಮೊದಲೇ ತಿಳಿಸಿದಂತೆ ಸೆಪ್ಟೆಂಬರ್ ತಿಂಗಳಿನಲ್ಲಿ ಗಣೇಶ ಚತುರ್ಥಿ, ಓಣಂ, ಮಿಲಾದ್-ಉನ್-ನಬಿ ಅಥವಾ ಈದ್-ಇ ಮಿಲಾದ್, ಇಂದ್ರಜಾತ್ರಾ/ಈದ್-ಎ-ಮಿಲಾದ್, ಪಾಂಗ್-ಲಬ್ಸೋಲ್, ಐ-ಮಿಲಾದ್-ಉಲ್-ನಬಿ, ಶ್ರೀ ನಾರಾಯಣ ಗುರು ಸಮಾಧಿ ದಿನ, ಮಹಾರಾಜ ಹರಿ ಸಿಂಗ್ ಜಿ ಅವರ ಜನ್ಮದಿನ ಪ್ರಯುಕ್ತ 15 ದಿನಗಳು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ನಿಮ್ಮ ರಾಜ್ಯದಲ್ಲಿ ವಾರಾಂತ್ಯದ ರಜೆಗಳನ್ನು ಹೊರತುಪಡಿಸಿ ಯಾವ ದಿನಗಳಲ್ಲಿ ಬ್ಯಾಂಕ್ ಕಾರ್ಯನಿರ್ವಹಿಸಲ್ಲ ತಿಳಿಯಿರಿ.
ಇದನ್ನೂ ಓದಿ- ಭಾರತೀಯ ರೈಲ್ವೆಯ ವಿಶೇಷ ಟಿಕೆಟ್: ಒಂದೇ ಟಿಕೆಟ್‌ನಲ್ಲಿ ವಿವಿಧ ಮಾರ್ಗಗಳಲ್ಲಿ ಸತತ 56 ದಿನ ಪ್ರಯಾಣಿಸಬಹುದು
ಸೆಪ್ಟೆಂಬರ್ 2024 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ ಕೆಳಕಂಡಂತಿದೆ:
ಸೆಪ್ಟೆಂಬರ್ 1 (ಭಾನುವಾರ), 2024: ವಾರಾಂತ್ಯದ ಕಾರಣ ಬ್ಯಾಂಕ್‌ಗಳು ರಾಷ್ಟ್ರವ್ಯಾಪಿ ಮುಚ್ಚಲ್ಪಡುತ್ತವೆ.
ಸೆಪ್ಟೆಂಬರ್ 4, 2024: ಶ್ರೀಮಂತ ಶಂಕರದೇವ ಉತ್ಸವದ ತಿರುಭಾವ ತಿಥಿ ಹಿನ್ನಲೆಯಲ್ಲಿ ಗುವಾಹಟಿಯಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಸೆಪ್ಟೆಂಬರ್ 7 (ಶನಿವಾರ), 2024: ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಒರಿಸ್ಸಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಗೋವಾದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
ಸೆಪ್ಟೆಂಬರ್ 14 (ಶನಿವಾರ), 2024: ಕರ್ಮ ಪೂಜೆ/ ಓಣಂ ಹಬ್ಬದ ಪ್ರಯುಕ್ತ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಸೆಪ್ಟೆಂಬರ್ 15 (ಭಾನುವಾರ), 2024 : ವಾರಾಂತ್ಯದ ರಜೆ.
ಸೆಪ್ಟೆಂಬರ್ 16 (ಸೋಮವಾರ), 2024: ಇದ್-ಎ-ಮಿಲಾದ್ - ಗುಜರಾತ್, ಮಿಜೋರಾಂ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಉತ್ತರಾಖಂಡ, ಆಂಧ್ರಪ್ರದೇಶ, ತೆಲಂಗಾಣ, ಮಣಿಪುರ, ಜಮ್ಮು, ಕೇರಳ, ಉತ್ತರ ಪ್ರದೇಶ, ನವದೆಹಲಿ, ಛತ್ತೀಸ್‌ಗಢ, ಜಾರ್ಖಂಡ್ ರಾಜ್ಯಗಳಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಸೆಪ್ಟೆಂಬರ್ 17 (ಮಂಗಳವಾರ), 2024: ಇಂದ್ರಜಾತ್ರಾ/ಈದ್-ಎ-ಮಿಲಾದ್ (ಮಿಲಾದ್-ಉನ್-ನಬಿ) - ಸಿಕ್ಕಿಂ ಮತ್ತು ಛತ್ತೀಸ್‌ಗಢದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
ಸೆಪ್ಟೆಂಬರ್ 18 (ಬುಧವಾರ), 2024: ಪಾಂಗ್-ಲಬ್ಸೋಲ್ - ಸಿಕ್ಕಿಂನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಸೆಪ್ಟೆಂಬರ್ 20 (ಶುಕ್ರವಾರ), 2024: ಈದ್-ಇ-ಮಿಲಾದ್-ಉಲ್-ನಬಿ ನಂತರ ಶುಕ್ರವಾರ - ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಸೆಪ್ಟೆಂಬರ್ 21 (ಶನಿವಾರ), 2024: ಶ್ರೀ ನಾರಾಯಣ ಗುರು ಸಮಾಧಿ ದಿನ - ಕೇರಳದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಸೆಪ್ಟೆಂಬರ್ 22 (ಭಾನುವಾರ), 2024 : ವಾರಾಂತ್ಯದ ರಜೆ.
ಸೆಪ್ಟೆಂಬರ್ 23 (ಸೋಮವಾರ), 2024: ಮಹಾರಾಜ ಹರಿ ಸಿಂಗ್ ಜಿ ಅವರ ಜನ್ಮದಿನ - ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ.
ಆದಾಗ್ಯೂ, ಎಲ್ಲಾ ರಜಾ ದಿನಗಳಲ್ಲೂ ಆನ್ಲೈನ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಮೂಲಕ ನಿಮ್ಮ ಪ್ರಮುಖ ಹಣಕಾಸು ಸಂಬಂಧಿತ ಬ್ಯಾಂಕಿಂಗ್ ಕೆಲಸಗಳನ್ನು ನಿರ್ವಹಿಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.