ಮದ್ಯ ಪ್ರಿಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಸರ್ಕಾರ: ದುಬಾರಿ ಬೆಲೆಯ ಪ್ರೀಮಿಯಂ ಬ್ರ್ಯಾಂಡ್ ಮದ್ಯದ ದರ ಇಳಿಕೆ

Liquor Price Down: ಮದ್ಯ ಪ್ರಿಯರಿಗೆ ಅಬಕಾರಿ ಇಲಾಖೆ ಗುಡ್ ನ್ಯೂಸ್ ನೀಡಿದ್ದು ಇಂದಿನಿಂದ ದುಬಾರಿ ಬೆಲೆಯ ಪ್ರೀಮಿಯಂ ಬ್ರ್ಯಾಂಡ್ ಮದ್ಯದ ದರ ಇಳಿಕೆಯಾಗಲಿದೆ.   

Written by - Yashaswini V | Last Updated : Aug 27, 2024, 11:29 AM IST
  • ಇಂದಿನಿಂದ ದುಬಾರಿ ಮದ್ಯ ಅಗ್ಗದ ದರದಲ್ಲಿ ಲಭ್ಯ
  • ಬ್ರಾಂದಿ, ವಿಸ್ಕಿ, ಜಿನ್, ರಮ್ ಬ್ರ್ಯಾಂಡ್‌ಗಳ ದರ ಇಳಿಕೆ
  • ದುಬಾರಿ ಬೆಲೆಯ ಪ್ರೀಮಿಯಂ ಬ್ರ್ಯಾಂಡ್ ಮದ್ಯದ ದರ ಇಳಿಕೆ
ಮದ್ಯ ಪ್ರಿಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಸರ್ಕಾರ: ದುಬಾರಿ ಬೆಲೆಯ ಪ್ರೀಮಿಯಂ ಬ್ರ್ಯಾಂಡ್ ಮದ್ಯದ ದರ ಇಳಿಕೆ title=

Liquor Price Cut Down: ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೆ ಸಂತಸದ ಸುದ್ದಿಯನ್ನು ನೀಡಿದ್ದು, ಅಬಕಾರಿ ಇಲಾಖೆ ಇಂದಿನಿಂದ ಶ್ರೀಮಂತರು ಕುಡಿಯುವ ಬ್ರಾಂದಿ, ವಿಸ್ಕಿ, ಜಿನ್, ರಮ್ ಬ್ರ್ಯಾಂಡ್ ಗಳ ದರ ಇಳಿಕೆ ಮಾಡಲಿದೆ. ಇದರಿಂದಾಗಿ, ದುಬಾರಿ ಬೆಲೆಯ ಪ್ರೀಮಿಯಂ ಬ್ರ್ಯಾಂಡ್ ಮದ್ಯದ ದರ ಇಳಿಕೆಯಾಗಲಿದ್ದು ಕಡಿಮೆ ಬೆಲೆಯಲ್ಲಿ ಇವುಗಳನ್ನು ಖರೀದಿಸಬಹುದಾಗಿದೆ. 

ಹೌದು, ರಾಜ್ಯದಲ್ಲಿ ಶ್ರೀಮಂತರು ಕುಡಿಯುವ ಬ್ರಾಂದಿ, ವಿಸ್ಕಿ, ಜಿನ್, ರಮ್ ಬ್ರ್ಯಾಂಡ್ ಗಳ ಪ್ರೀಮಿಯಂ ದರ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚಾಗಿತ್ತು. ಹೀಗಾಗಿ, ಗಡಿ ಭಾಗದ ಮದ್ಯಪ್ರಿಯರು (Liquor Lovers) ಅನ್ಯ ರಾಜ್ಯಕ್ಕೆ ತೆರಳಿ ಮದ್ಯ ಖರೀದಿಸುತ್ತಿದ್ದರು. ಇದರಿಂದಾಗಿ, ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟ ಆಗುತ್ತಿತ್ತು. ಇದನ್ನು ತಪ್ಪಿಸಲು ಇದೀಗ ರಾಜ್ಯ ಸರ್ಕಾರ ಮದ್ಯ ದರದಲ್ಲಿ ಇಳಿಕೆ  ಘೋಷಿಸಿದೆ. 

ಇದನ್ನೂ ಓದಿ- ಗೃಹಲಕ್ಷ್ಮಿ ಯೋಜನೆ ನಿಲ್ಲಬಾರದು: ಅಕ್ಕಾತಾಯಿ ಲಂಗೂಟಿ ಮನವಿಗೆ ಸಿಎಂ ಹೇಳಿದ್ದೇನು?

ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆಗ್ತಿದ್ದ ನಷ್ಟ ತಗ್ಗಿಸಲು ಮದ್ಯ ದರ ಇಳಿಕೆ (Liquor Price Decrease)ಮಾಡಲು ಚಿಂತಿಸಿದ್ದ ಸರ್ಕಾರ ಜುಲೈ 01ರಿಂದಲೇ ಮದ್ಯ ದರ ಇಳಿಕೆಗೆ ಮುಂದಾಗಿತ್ತು. ಆದರೆ,  ನಾನಾ ಕಾರಣಗಳಿಂದ ಮದ್ಯದ ದರ ಇಳಿಕೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಸರ್ಕಾರದ ಅನುಮತಿ ಮೇರೆಗೆ ಇಂದಿನಿಂದ ಅಬಕಾರಿ ಇಲಾಖೆ ಮದ್ಯ ದರ ಇಳಿಕೆ ಮಾಡಿರುವುದು ಮದ್ಯ ಪ್ರಿಯರ ಸಂತಸವನ್ನು ಇಮ್ಮಡಿಗೊಳಿಸಿದೆ. 

ಇದನ್ನೂ ಓದಿ- ತತ್ಕಾಲ್ ಟ್ರೈನ್ ಟಿಕೆಟ್ ಬುಕಿಂಗ್‌ನಲ್ಲಿ ಈ ಟಿಪ್ಸ್ ಅನುಸರಿಸಿದರೆ ಕನ್ಫರ್ಮ್ ಟಿಕೆಟ್ ಸಿಗೋದು ಪಕ್ಕಾ! 

ಇಂದಿನಿಂದ ಅನ್ವಯವಾಗುವಂತೆ ಪ್ರೀಮಿಯಂ ಬ್ರ್ಯಾಂಡ್ ಗಳ ನೂತನ ಪರಿಷ್ಕತ ದರ ಪಟ್ಟಿ: 

  • 451-500 ದರ ಸ್ಲ್ಯಾಬ್​ಗೆ ಸುಂಕ 294 ರೂ. ಪರಿಷ್ಕರಣೆ ಆಗಲಿದೆ
  • 501-550 ದರ ಸ್ಲ್ಯಾಬ್​ಗೆ ಹೆಚ್ಚುವರಿ ಸುಂಕ 386ರೂ. ಪರಿಷ್ಕರಣೆ
  • 551-650 ಘೋಷಿತ ಉತ್ಪಾದನಾ ದರ ಸ್ಲ್ಯಾಬ್​ಗೆ ಸುಂಕ 523 ರೂ ಪರಿಷ್ಕರಣೆ
  • 651-750 ವರೆಗಿನ ಘೋಷಿತ ಉತ್ಪಾದನಾ ದರ ಸ್ಲ್ಯಾಬ್​ಗೆ ಹೆಚ್ಚುವರಿ ಸುಂಕ 620ರೂ ಇಳಿಕೆ
  • 751-900 ದರ ಸ್ಲ್ಯಾಬ್​ಗೆ ಸುಂಕ 770 ರೂ. ಪರಿಷ್ಕರಣೆ
  • 901-1050 ದರ ಸ್ಲ್ಯಾಬ್​ಗೆ ಸುಂಕ 870 ರೂ. ಪರಿಷ್ಕರಣೆ
  • 1051-1300 ದರ ಸ್ಲ್ಯಾಬ್​ಗೆ ಸುಂಕ 970 ರೂ. ಪರಿಷ್ಕರಣೆ
  • 1301-1800 ದರ ಸ್ಲ್ಯಾಬ್​ಗೆ ಸುಂಕ 1200 ರೂ. ಪರಿಷ್ಕರಣೆ
  • 1801-2500 ದರ ಸ್ಲ್ಯಾಬ್​ಗೆ ಸುಂಕ 1400 ರೂ. ಪರಿಷ್ಕರಣೆ
  • 2501-5000 ದರ ಸ್ಲ್ಯಾಬ್​ಗೆ ಸುಂಕ 1600 ರೂ. ಇಳಿಕೆ
  • 5001-8000 ದರ ಸ್ಲ್ಯಾಬ್​ಗೆ ಸುಂಕ 2000 ರೂ. ಇಳಿಕೆ
  • 8001-12,500 ದರ ಸ್ಲ್ಯಾಬ್​ಗೆ ಸುಂಕ 2400 ರೂ. ಇಳಿಕೆ
  • 12501-15000 ದರ ಸ್ಲ್ಯಾಬ್​ಗೆ ಸುಂಕ 2600 ರೂ. ಇಳಿಕೆ
  • 15001-20000 ದರ ಸ್ಲ್ಯಾಬ್​ಗೆ ಸುಂಕ 2800ರೂ. ಸುಂಕ ಇಳಿಕೆ
  • ಮತ್ತು 20000 ಮೇಲ್ಪಟ್ಟ ದರ ಸ್ಲ್ಯಾಬ್​ಗೆ ಹೆಚ್ಚುವರಿ ಅಬಕಾರಿ ಸುಂಕ 3000 ರೂ. ವಿಧಿಸಲಾಗುತ್ತದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News