Budget 2023 :  ಈ ಬಾರಿಯ ಬಜೆಟ್‌ನಲ್ಲಿ ರೈತರಿಂದ ಉದ್ಯಮಿಗಳವರೆಗೆ ಪರಿಹಾರ ನೀಡಲು ಸರ್ಕಾರ ಪ್ರಯತ್ನಿಸಿದೆ. ಈ ಮಧ್ಯೆ, ಬಜೆಟ್‌ನಲ್ಲಿ ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಘೋಷಣೆಯ ಲಾಭವನ್ನು ಉದ್ಯಮಿಗಳು ಪಡೆಯಲಿದ್ದಾರೆ.


COMMERCIAL BREAK
SCROLL TO CONTINUE READING

ಸಾಮಾನ್ಯ ಗುರುತಿನ ಸ್ಥಾನಮಾನ:
ಪ್ಯಾನ್ ಕಾರ್ಡ್‌ಗೆ ಸಾಮಾನ್ಯ ಗುರುತಿನ ಸ್ಥಾನಮಾನವನ್ನು ನೀಡಲಾಗುವುದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಈ ಘೋಷಣೆಯಿಂದ ಉದ್ಯಮಿಗಳಿಗೆ ಸಾಕಷ್ಟು ಲಾಭವಾಗಲಿದೆ.


ಇದನ್ನೂ ಓದಿ : Budget 2023 For Education: 157 ಹೊಸ ಕಾಲೇಜುಗಳು, 8000 ಬೋಧನಾ ಸಿಬ್ಬಂದಿಗಳ ಭರ್ತಿ, ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್ ಕೊಡುಗೆ


KYC ಪ್ರಕ್ರಿಯೆ ಸರಳ :
Risk-Based Approach ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ KYC ಪ್ರಕ್ರಿಯೆಯನ್ನು ಸರಳಗೊಳಿಸಲಾಗುವುದು ಎಂದು  ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಡಿಜಿಲಾಕರ್ ಸೇವೆ ಮತ್ತು ಆಧಾರ್ ಅನ್ನು ಪ್ರಾಥಮಿಕ ಗುರುತಾಗಿ ಬಳಸಿಕೊಂಡು  ಐಡೆಂಟಿಟಿ ಅಪ್ಡೇಟ್ ಮಾಡಲು ಒನ್ ಸ್ಟಾಪ್ ಸೊಲ್ಯುಶನ್ ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ. ಸರ್ಕಾರಿ ಏಜೆನ್ಸಿಗಳ ಎಲ್ಲಾ ಡಿಜಿಟಲ್ ವ್ಯವಸ್ಥೆಗಳಿಗೆ PAN ಅನ್ನು ಕಾಮನ್ ಐಡೆಂಟಿಟಿಯಾಗಿ   ಬಳಸಲಾಗುವುದು. 


ಕಾಮನ್ ಐಡೆಂಟಿಟಿ :
ಪ್ಯಾನ್ ಕಾರ್ಡ್ ಅಗತ್ಯವಿರುವ ವ್ಯಾಪಾರ ಸಂಸ್ಥೆಗಳಿಗೆ ನಿರ್ದಿಷ್ಟ ಸರ್ಕಾರಿ ಏಜೆನ್ಸಿಗಳ ಎಲ್ಲಾ ಡಿಜಿಟಲ್ ವ್ಯವಸ್ಥೆಗಳಿಗೆ ಪ್ಯಾನ್ ಅನ್ನು ಕಾಮನ್ ಐಡೆಂಟಿಟಿಯಾಗಿ ಬಳಸಲಾಗುವುದು. ಪ್ಯಾನ್ ಕಾರ್ಡ್ ದೇಶದ ವಿವಿಧ ತೆರಿಗೆದಾರರನ್ನು ಗುರುತಿಸುವ ಸಾಧನವಾಗಿದೆ.  PAN ಕಾರ್ಡ್ 10-ಅಂಕಿಯ ವಿಶಿಷ್ಟ ಗುರುತಿನ ಆಲ್ಫಾನ್ಯೂಮರಿಕ್ ಸಂಖ್ಯೆ. ತೆರಿಗೆ ಪಾವತಿಗಾಗಿಯೂ ಪಾನ್ ಕಾರ್ಡ್ ಗಳನ್ನು ಬಳಸಲಾಗುತ್ತದೆ. 


ಇದನ್ನೂ ಓದಿ : Railway Budget 2023: ರೈಲ್ವೆ ಇಲಾಖೆಗೆ ಅತಿ ದೊಡ್ಡ ಕೊಡುಗೆ! 9 ಪಟ್ಟು ಹೆಚ್ಚು ಅನುದಾನ !


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.