Budget 2023 For Education: 157 ಹೊಸ ಕಾಲೇಜುಗಳು, 8000 ಬೋಧನಾ ಸಿಬ್ಬಂದಿಗಳ ಭರ್ತಿ, ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್ ಕೊಡುಗೆ

Education Budget 2023: ಔಷಧಿ ತಯಾರಿಕಾ ಕ್ಷೇತ್ರದಲ್ಲಿ ಸಂಶೋಧನೆಗೆ ಉತ್ತೇಜನ ನೀಡಲಾಗುವುದು. ಇದರಲ್ಲಿ ಕೈಗಾರಿಕೋದ್ಯಮಿಗಳಿಂದ ಹೂಡಿಕೆ ನಿರೀಕ್ಷಿಸಲಾಗಿದೆ. ಹೊಸ ಕೋರ್ಸ್‌ಗಳನ್ನು ಆರಂಭಿಸಲಾಗುವುದು. ಈ ಹೊಸ ಕೋರ್ಸ್ಗಳನ್ನು ಇತ್ತೀಚಿನ ಸಂಶೋಧನೆಗಳ ಮೇಲೆ ಕೇಂದ್ರೀಕರಿಸಲಾಗುವುದು. ಇದಲ್ಲದೇ ಶಿಕ್ಷಕರ ತರಬೇತಿಯನ್ನು ಸುಧಾರಿಸಲಾಗುವುದು.

Written by - Nitin Tabib | Last Updated : Feb 1, 2023, 12:49 PM IST
  • ದೇಶಾದ್ಯಂತ ಏಕಲವ್ಯ ಮಾದರಿ ಶಾಲೆಗಳಲ್ಲಿ 38800 ಶಿಕ್ಷಕರನ್ನು ಮರುನೇಮಕ ಮಾಡಲಾಗುವುದು.
  • ಮುಂದಿನ 3 ವರ್ಷಗಳಲ್ಲಿ ದೇಶಾದ್ಯಂತ ಏಕಲವ್ಯ ಶಾಲೆಗಳಲ್ಲಿ 8000
  • ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು.
Budget 2023 For Education: 157 ಹೊಸ ಕಾಲೇಜುಗಳು, 8000 ಬೋಧನಾ ಸಿಬ್ಬಂದಿಗಳ ಭರ್ತಿ, ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್ ಕೊಡುಗೆ title=
ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ಕೊಡುಗೆಗಳು

Education Budget 2023:  ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ತಮ್ಮ ಸಾಮಾನ್ಯ ಬಜೆಟ್ ನಲ್ಲಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಇದರಲ್ಲಿ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಕ್ಕೂ ಸಂಪೂರ್ಣ ಗಮನ ಹರಿಸಿದ್ದಾರೆ. ದೇಶದಾದ್ಯಂತ 157 ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದ್ದಾರೆ. ಈಗಾಗಲೇ  ಇರುವ 157 ವೈದ್ಯಕೀಯ ಕಾಲೇಜುಗಳಿಗೆ ಅವುಗಳನ್ನು ಜೋಡಿಸಲಾಗುವುದು ಮಾತು ಇದಕ್ಕಾಗಿ ಮಿಷನ್ ಆರಂಭಿಸಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ-Budget 2023: ಪಿಂಚಣಿದಾರರಿಗೆ ಸಿಗಲಿದೆ ಬಿಗ್ ಗಿಫ್ಟ್! ಹಿರಿಯ ನಾಗರಿಕರಿಗೆ ಈ ಬಾರಿಯ ಬಜೆಟ್ ನಿಂದ ಏನು ನಿರೀಕ್ಷೆ?

ದೇಶಾದ್ಯಂತ ಏಕಲವ್ಯ ಮಾದರಿ ಶಾಲೆಗಳಲ್ಲಿ 38800 ಶಿಕ್ಷಕರನ್ನು ಮರುನೇಮಕ ಮಾಡಲಾಗುವುದು. ಮುಂದಿನ 3 ವರ್ಷಗಳಲ್ಲಿ ದೇಶಾದ್ಯಂತ ಏಕಲವ್ಯ ಶಾಲೆಗಳಲ್ಲಿ 8000 ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಮಕ್ಕಳು ಮತ್ತು ಯುವಕರಿಗೆ ಡಿಜಿಟಲ್ ಲೈಬ್ರರಿಗಳನ್ನು ತೆರೆಯಲಾಗುವುದು. ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯವನ್ನು ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ತೆರೆಯಲಾಗುವುದು. ಇವುಗಳಲ್ಲಿ ಪುಸ್ತಕಗಳು ಸ್ಥಳೀಯ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿರಲಿವೆ. ಈ ಲೈಬ್ರರಿಗಳಲ್ಲಿ ವಯಸ್ಸಿಗೆ ಅನುಗುಣವಾಗಿ ಪುಸ್ತಕಗಳು ಲಭ್ಯವಿರುತ್ತವೆ. ಇದಕ್ಕಾಗಿ ರಾಜ್ಯಗಳಿಗೆ ಮತ್ತು ಅವರಿಗೆ ನೇರ ಗ್ರಂಥಾಲಯಗಳನ್ನು ಮಾಡಲು ಪ್ರೋತ್ಸಾಹಿಸಲಾಗುವುದು.

ಇದನ್ನೂ ಓದಿ-Budget 2023 Updates: ಉಚಿತ ಪಡಿತರ ವಿತರಣೆ ಯೋಜನೆ ವಿಸ್ತರಣೆ ಸೇರಿದಂತೆ 5 ಪ್ರಮುಖ ಘೋಷಣೆಗಳು

ಔಷಧಿ ಉತ್ಪಾದನಾ ಸಂಶೋಧನೆಗೆ ಉತ್ತೇಜನ ನೀಡಲಾಗುವುದು. ಇದಕ್ಕಾಗಿ ಕೈಗಾರಿಕೋದ್ಯಮಿಗಳಿಂದ ಹೂಡಿಕೆ ನಿರೀಕ್ಷಿಸಲಾಗುತ್ತಿದೆ. ಹೊಸ ಕೋರ್ಸ್‌ಗಳನ್ನು ಆರಂಭಿಸಲಾಗುವುದು ಮತ್ತು ಆ ಕೋರ್ಸ್ ಗಳು ಇತ್ತೀಚಿನ ಸಂಶೋಧನೆಗಳ ಮೇಲೆ ಕೇಂದ್ರೀಕೃತವಾಗಿರಲಿವೆ. ಇದಲ್ಲದೇ ಶಿಕ್ಷಕರ ತರಬೇತಿಯನ್ನು ಸುಧಾರಿಸಲಾಗುವುದು. ಇದಕ್ಕಾಗಿ ಶಿಕ್ಷಕರಿಗೆ ವೈಬ್ರೆಂಟ್ ಸಂಸ್ಥೆಯಲ್ಲಿ ತರಬೇತಿ ನೀಡಲಾಗುವುದು. ಕೋವಿಡ್‌ನಲ್ಲಿನ ಅಧ್ಯಯನದ ನಷ್ಟವನ್ನು ತುಂಬಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಎನ್‌ಜಿಒಗಳೊಂದಿಗೆ ನಿಕಟವಾಗಿ ಕೆಲಸ ಮಾಡಲಿವೆ. ಇದರಲ್ಲಿ ಹಣಕಾಸು ನಿಯಂತ್ರಕವನ್ನೂ ಒಳಗೊಂಡಿರುತ್ತದೆ ಮತ್ತು ಪ್ರತಿಯೊಂದು ಅಭಿವೃದ್ಧಿಯೂ ಕೊನೆಯ ಸಾಲಿನಲ್ಲಿ ನಿಂತಿರುವ ಜನರಿಗೆ ತಲುಪಬೇಕು ಎಂದು ವಿತ್ತ ಸಚಿವೆ ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News