Big News:ಬಂದೆ ಬಿಟ್ತು ನಿಮ್ಮ PF ಖಾತೆಗೆ ಬಡ್ಡಿ ಹಣ, ಈ ರೀತಿ ಪರಿಶೀಲಿಸಿ ಹಾಗೂ e-statement ಡೌನ್ಲೋಡ್ ಮಾಡಿ
EPF Interest Rate: EPFO 2020-21ರ ಆರ್ಥಿಕ ವರ್ಷಕ್ಕೆ ಬಡ್ಡಿಯನ್ನು ಆಯಾ ಖಾತೆಗಳಿಗೆ ವರ್ಗಾಯಿಸಿದೆ. ದೀಪಾವಳಿಯ ಮುಂಚೆಯೇ ಉದ್ಯೋಗಿಗಳು ಈ ಬೋನಸ್ ಹಣವನ್ನು ಪಡೆದಿರುವುದು ನೌಕರರ ಪಾಲಿಗೆ ಒಳ್ಳೆಯ ಸುದ್ದಿ ಎಂದರೆ ತಪ್ಪಾಗಲಾರದು.
How To Check PF Balance: ನೌಕರರ ಭವಿಷ್ಯ ನಿಧಿ ಸಂಘಟನೆಯ ಚಂದಾದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಇಪಿಎಫ್‌ಒ 2020-21ರ ಆರ್ಥಿಕ ವರ್ಷಕ್ಕೆ ಬಡ್ಡಿಯನ್ನು ಆಯಾ ಖಾತೆಗಳಿಗೆ ಪಾವತಿಸಿದೆ. ದೇಶದ ಸುಮಾರು 6.5 ಕೋಟಿ ಚಂದಾದಾರರ ಖಾತೆಯಲ್ಲಿ ಹಣ ಜಮಾ ಮಾಡಲಾಗಿದೆ. ದೀಪಾವಳಿಗೆ ಮುನ್ನವೇ EPFO ಈ ಉಡುಗೊರೆಯನ್ನು ನೀಡಿದೆ. ನಿಮ್ಮ ಠೇವಣಿಗಳಿಗೆ ಎಷ್ಟು ಬಡ್ಡಿಯನ್ನು ಸ್ವೀಕರಿಸಲಾಗಿದೆ ಎಂಬುದನ್ನು ತಿಳಿಯಲು ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು.
ಈ ರೀತಿ EPF ಆನ್ಲೈನ್ ನಲ್ಲಿ ಬ್ಯಾಲೆನ್ಸ್ ಹಾಗೂ ಪಾಸ್ಬುಕ್ ಪರಿಶೀಲಿಸಿ
>> EPFO ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ EPF ಬ್ಯಾಲೆನ್ಸ್ ಪರಿಶೀಲಿಸುವ ಸೌಲಭ್ಯವನ್ನು ನೀಡಿದೆ. ಇದಕ್ಕಾಗಿ ವೆಬ್‌ಸೈಟ್‌ನ ಮೇಲಿನ ಬಲಭಾಗದಲ್ಲಿ ಇ-ಪಾಸ್‌ಬುಕ್‌ನ ಲಿಂಕ್ ನೀಡಲಾಗಿದೆ.
>> ಭವಿಷ್ಯ ನಿಧಿ ಖಾತೆದಾರರು ತಮ್ಮ UAN ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಬೇಕಾಗುತ್ತದೆ.
>> ವೆಬ್‌ಸೈಟ್‌ನಲ್ಲಿ ಯುಎಎನ್ ಸಂಖ್ಯೆ ಮತ್ತು ಪಾಸ್‌ವರ್ಡ್ ನಮೂದಿಸಿದ ನಂತರ, ಪಾಸ್‌ಬುಕ್ ವೀಕ್ಷಿಸಿ ಬಟನ್ ಕ್ಲಿಕ್ ಮಾಡಿ ಮತ್ತು ನಿಮಗೆ ಬ್ಯಾಲೆನ್ಸ್ ತಿಳಿಯಲಿದೆ.
EPFO 'UMANG App' ಮೂಲಕ ಕೂಡ ನೀವು ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಟ್ರ್ಯಾಕ್ ಮಾಡಬಹುದು. ಇದಕ್ಕಾಗಿ, ಮೊದಲು Member ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಅದರ ನಂತರ UAN ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
EPFO Miss Call Service
ನಿಮ್ಮ PF ಖಾತೆಯ ಬ್ಯಾಲೆನ್ಸ್ ಅನ್ನು ನೀವು ಮಿಸ್ ಕಾಲ್ ನೀಡುವ ಮೂಲಕ ಕೂಡ ತಿಳಿಯಬಹುದು.ಇದಕ್ಕಾಗಿ ನೀವು ನಿಮ್ಮ ಇಪಿಎಫ್‌ಒ ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ನೀಡಬೇಕು. ಇದರ ನಂತರ, SMS ಮೂಲಕ, ನಿಮ್ಮ PF ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂದು ನಿಮಗೆ ತಿಳಿಯುತ್ತದೆ. AM-EPFOHO ನಿಂದ ಬ್ಯಾಲೆನ್ಸ್ ಸಂದೇಶ ನಿಮ್ಮ ಮೊಬೈಲ್ ಗೆ ಬರಲಿದೆ. ನಿಮ್ಮ ಕಂಪನಿ ಖಾಸಗಿ ಟ್ರಸ್ಟ್ ಆಗಿದ್ದರೆ ನೀವು ಬಾಕಿ ವಿವರಗಳನ್ನು ಪಡೆಯುವುದಿಲ್ಲ. ಇದಕ್ಕಾಗಿ ನೀವು ನಿಮ್ಮ ಕಂಪನಿಯನ್ನು ಸಂಪರ್ಕಿಸಬೇಕು.
ಇದನ್ನೂ ಓದಿ-PF Balance : ನಿಮ್ಮ ಖಾತೆಗೆ PF ಹಣ ಜಮಾ ಆಗುತ್ತಿದೆಯೋ ಇಲ್ಲವೋ ಎಂಬುವುದನ್ನ ತಿಳಿಯಲು ಇಲ್ಲಿದೆ ಸುಲಭ ಮಾರ್ಗ!
EPF statement ಡೌನ್ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ
>> ಮೊದಲು https://passbook.epfindia.gov.in/MemberPassBook/Login.jsp ವೆಬ್ ಸೈಟ್ ಗೆ ಭೇಟಿ ನೀಡಿ.
>> UAN, ಪಾಸ್ವರ್ಡ್ ಹಾಗೂ ಕ್ಯಾಪ್ಚಾ ಕೋಡ್ ನಮೂದಿಸಿ 'ಲಾಗ್ ಇನ್' ಆಗಿ
>>ಲಾಗಿನ್ ಬಳಿಕ ಪಾಸ್ಬುಕ್ ನೋಡಲು ಮೆಂಬರ್ ಐಡಿ ಆಯ್ಕೆ ಮಾಡಿ. ಈ ಪಾಸ್ಬುಕ್ PDF ಫಾರ್ಮ್ಯಾಟ್ ನಲ್ಲಿರುತ್ತದೆ. ಅದನ್ನು ನೀವು ಸುಲಭವಾಗಿ ಡೌನ್ಲೋಡ್ ಮಾಡಬಹುದು. ಆದರೆ Exempted PF Trust ಪಾಸ್ಬುಕ್ ಅನ್ನು ನೀವು ನೋಡಲು ಸಾಧ್ಯವಿಲ್ಲ. ಈ ರೀತಿಯ ಸಂಸ್ಥೆಗಳನ್ನು EPFO ಖುದ್ದಾಗಿ ನಿರ್ವಹಿಸುತ್ತದೆ.
ಇದನ್ನೂ ಓದಿ-PF ಖಾತೆದಾರರಿಗೆ ಸಿಹಿ ಸುದ್ದಿ : ಖಾತೆಗೆ ಶೀಘ್ರದಲ್ಲೇ ಜಮಾ ಆಗಲಿದೆ 8.5% ಬಡ್ಡಿ ಹಣ
ಒಂದು ವೇಳೆ ನೀವು ನಿಮ್ಮ ಖಾತೆಯ ಪಾಸ್ವರ್ಡ್ ಮರೆತುಹೋದರೆ, ನೀವು ನಿಮ್ಮ ಪಾಸ್ವರ್ಡ್ ಅನ್ನದು ರಿಸೆಟ್ ಮಾಡಬಹುದು. ಇದಕ್ಕಾಗಿ EPFO ಸದಸ್ಯರು ಇ-ಸೇವಾ ವೆಬ್ ಸೈಟ್ https://unifiedportal-mem.epfindia.gov.in/memberinterface/ ಗೆ ಭೇಟಿ ನೀಡಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ