LPG Cylinder Cashback: ಈ app ಮೂಲಕ ಬುಕ್ ಮಾಡಿದರೆ ಕಡಿಮೆ ಬೆಲೆಗೆ ಸಿಗಲಿದೆ ಗ್ಯಾಸ್ ಸಿಲಿಂಡರ್
LPG Cylinder Cashback : ಬೆಲೆ ಏರಿಕೆ ಸಾಮಾನ್ಯ ಜನರ ನಿದ್ದೆಗೆಡಿಸುತ್ತಿದೆ. ಎಲ್‌ಪಿಜಿ, ಪೆಟ್ರೋಲ್ ಡೀಸೆಲ್ ಬೆಲೆ ನಿರಂತರವಾಗಿ ಏರುತ್ತಿದೆ. ಈ ಮಧ್ಯೆ, ಈ ಮೂಲಕ 14.2 ಕೆಜಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ ಕ್ಯಾಶ್ ಬ್ಯಾಕ್ ಸಿಗಲಿದೆ.
ನವದೆಹಲಿ : LPG Cylinder Cashback : ಬೆಲೆ ಏರಿಕೆ ಸಾಮಾನ್ಯ ಜನರ ನಿದ್ದೆಗೆಡಿಸುತ್ತಿದೆ. ಎಲ್‌ಪಿಜಿ, ಪೆಟ್ರೋಲ್ ಡೀಸೆಲ್ ಬೆಲೆ ನಿರಂತರವಾಗಿ ಏರುತ್ತಿದೆ. ಈ ಮಧ್ಯೆ, ಈ ಮೂಲಕ 14.2 ಕೆಜಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ ಕ್ಯಾಶ್ ಬ್ಯಾಕ್ (Cashback) ಸಿಗಲಿದೆ. ಗ್ರಾಹಕರಿಗೆ ಡಿಜಿಟಲ್ ಪೇಮೆಂಟ್ ಸೌಲಭ್ಯವನ್ನು ಒದಗಿಸುವ ಪಾಕೆಟ್ಸ್ ಆ್ಯಪ್ ಮೂಲಕ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಿದರೆ, ಶೇಕಡಾ 10 ರಷ್ಟು ಕ್ಯಾಶ್‌ಬ್ಯಾಕ್ ಸಿಗಲಿದೆ. ಈ ಅಪ್ಲಿಕೇಶನ್ ಅನ್ನು ಐಸಿಐಸಿಐ ಬ್ಯಾಂಕ್ (ICICI Bank) ನಡೆಸುತ್ತಿದೆ.
ಒಂದು ತಿಂಗಳಲ್ಲಿ 3 ಬಿಲ್ ಗಳ ಮೇಲೆ ಕ್ಯಾಶ್ ಬ್ಯಾಕ್ :
ಪಾಕೆಟ್ಸ್ ಆ್ಯಪ್ (Pockets App) ಮೂಲಕ 200 ಅಥವಾ ಅದಕ್ಕಿಂತ ಹೆಚ್ಚಿನ ಬಿಲ್ ಪಾವತಿ ಮಾಡಿದರೆ, 10 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ (Cash back) ಸಿಗುತ್ತದೆ. ಈ ಆಫರ್ ಪಡೆಯಲು ಗ್ರಾಹಕರು, ಯಾವುದೇ ಪ್ರೋಮೋಕೋಡ್ ಅನ್ನು ನಮೂದಿಸುವ ಅಗತ್ಯವಿಲ್ಲ. ಆದರೆ, ಈ ಕೊಡುಗೆ ತಿಂಗಳ 3 ಬಿಲ್ ಪೇಮೆಂಟ್ ಮೇಲೆ ಮಾತ್ರ ಮಾನ್ಯವಾಗಿರುತ್ತದೆ. ಕಂಪನಿಯ ನಿಯಮಗಳ ಪ್ರಕಾರ, ಒಂದು ಗಂಟೆಯಲ್ಲಿ 50 ಬಳಕೆದಾರರು ಮಾತ್ರ ಈ ಕೊಡುಗೆಯ ಲಾಭವನ್ನು ಪಡೆಯಬಹುದು. ಇನ್ನೊಂದು ಉತ್ತಮ ವಿಚಾರವೆಂದರೆ, ಒಂದು ಗಂಟೆಯಲ್ಲಿ 1 ರಿವಾರ್ಡ್ , ಕ್ಯಾಶ್‌ಬ್ಯಾಕ್ ಮತ್ತು ತಿಂಗಳಲ್ಲಿ 3 ಬಿಲ್ ಪೇಮೆಂಟ್ ನಲ್ಲಿ ಮೂರೂ ರಿವಾರ್ಡ್ ಮತ್ತು ಕ್ಯಾಶ್‌ಬ್ಯಾಕ್ ಗೆಲ್ಲಬಹುದು.
ಇದನ್ನೂ ಓದಿ : Motor Insurance Claim: ಇನ್ಮುಂದೆ ನಿಮಗೆ ತಕ್ಷಣವೆ ಸಿಗಲಿದೆ ಮೋಟಾರ್ ಇನ್ಸುರೆನ್ಸ್ ಕ್ಲೇಮ್, ಹೇಗೆ ಗೊತ್ತಾ?
ಈ ರೀತಿಯಾಗಿ ಬುಕಿಂಗ್ ಮಾಡಿ :
1. ಈ ಪ್ರಯೋಜನವನ್ನು ಪಡೆಯಲು, ನಿಮ್ಮ ಪಾಕೆಟ್ಸ್ ವಾಲೆಟ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿ.
2. ಈಗ Recharge and Pay Bills ವಿಭಾಗದಲ್ಲಿ Pay Bills ಕ್ಲಿಕ್ ಮಾಡಿ.
3. ಇದರ ನಂತರ Choose Billersನಲ್ಲಿನ More ಆಯ್ಕೆಯನ್ನು ಕ್ಲಿಕ್ ಮಾಡಿ.
4. ಇದರ ನಂತರ ಎಲ್‌ಪಿಜಿಯ (LPG) ಆಯ್ಕೆ ನಿಮ್ಮ ಮುಂದೆ ಬರುತ್ತದೆ.
5. ಈಗ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
6. ಈಗ ನಿಮ್ಮ ಬುಕಿಂಗ್ ಅಮೌಂಟ್ ಅನ್ನು ಸಿಸ್ಟಂ ಮೂಲಕ ತಿಳಿಸಲಾಗುವುದು.
7. ಇದರ ನಂತರ ನೀವು ಬುಕಿಂಗ್ ಮೊತ್ತವನ್ನು ಪಾವತಿಸಬೇಕಾಗುತ್ತದೆ.
8. ವಹಿವಾಟಿನ ನಂತರ, 10% ದರದಲ್ಲಿ, ನೀವು ಗರಿಷ್ಠ 50 ರೂ ಕ್ಯಾಶ್‌ಬ್ಯಾಕ್‌ನೊಂದಿಗೆ ಬಹುಮಾನಗಳನ್ನು ಪಡೆಯುತ್ತೀರಿ. ಇದನ್ನು ಓಪನ್ ಮಾಡಿದ ತಕ್ಷಣ ನಿಮ್ಮ ಪಾಕೆಟ್ಸ್ ವ್ಯಾಲೆಟ್‌ಗೆ ಹಣ ಜಮಾ ಮಾಡಲಾಗುತ್ತದೆ.
ಇದನ್ನೂ ಓದಿ : Best Selling Maruti Car - Alto ಅಲ್ಲ Marutiಯ ಈ ಕಾರಿಗೆ ಜನರ ಹೆಚ್ಚಿನ ಮನ್ನಣೆ, ಮೈಲೇಜ್ 32 ಕಿ.ಮೀ !
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ