Defence Budget 2021: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಸಂಸತ್ತಿನಲ್ಲಿ ವರ್ಷ 2021-22 ರ ಆರ್ಥಿಕ ಆಯವ್ಯಯ ಪತ್ರ ಮಂಡಿಸಿದ್ದಾರೆ. ತಮ್ಮ ಬಜೆಟ್ ಭಾಷಣದಲ್ಲಿ ವಿತ್ತ ಸಚಿವರು ಮತ್ತೊಮ್ಮೆ ರಕ್ಷಣಾ ಬಜೆಟ್  (Defence Budget 2021) ನಲ್ಲಿ ಹೆಚ್ಚಳದ ಘೋಷಣೆ ಆಡಿದ್ದಾರೆ. ಸತತ 7 ನೇ ಬಾರಿಗೆ ಮೋದಿ ಸರ್ಕಾರ ರಕ್ಷಣಾ ಬಜೆಟ್ ನ ಗಾತ್ರ ಹೆಚ್ಚಿಸಿದ್ದು ಇಲ್ಲಿ ಗಮನಾರ್ಹ.


COMMERCIAL BREAK
SCROLL TO CONTINUE READING

ರಕ್ಷಣಾ ಬಜೆಟ್ ಗಾಗಿ 4.78 ಲಕ್ಷ ಕೋಟಿ.ರೂ.
ತಮ್ಮ ಬಜೆಟ್ ಭಾಷಣದ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ವರ್ಷ 2021-22 ರಲ್ಲಿ ರಕ್ಷಣಾ ವಲಯಕ್ಕೆ  4 ಲಕ್ಷ 78 ಸಾವಿರ 196 ಕೋಟಿ ನೀಡಲಾಗುವುದು ಎಂದು ಹೇಳಿದ್ದಾರೆ. ತಮ್ಮ ಬಜೆಟ್ (Union Budget 2021-22) ಭಾಷಣದಲ್ಲಿ ಹೇಳಿಕೆ ನೀಡಿರುವ ಅವರು, " ಬಜೆಟ್‌ನಲ್ಲಿ ರಕ್ಷಣಾ ಸಚಿವಾಲಯಕ್ಕೆ 4,78,195.62 ಕೋಟಿ ರೂ. ನೀಡಲಾಗುವುದು.  ಇದರಿಂದ ಪಿಂಚಣಿ ಮೊತ್ತವನ್ನು ತೆಗೆದುಹಾಕಿದರೆ, ಅದು ಸುಮಾರು 3.62 ಲಕ್ಷ ಕೋಟಿ ರೂ.ಗಳಷ್ಟಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 7.4 ರಷ್ಟು ಹೆಚ್ಚಾಗಿದೆ" ಎಂದಿದ್ದಾರೆ.


ಇದನ್ನು ಓದಿ-Budget 2021: ಮದ್ಯ ಪ್ರಿಯರಿಗೆ ಶೇ.100 ರ ಬಿಗ್ ಶಾಕ್


ಕಳೆದ ವರ್ಷಕ್ಕೆ ಹೋಲಿಸಿದರೆ ಎಷ್ಟು ಹೆಚ್ಚಳ
ಕಳೆದ ವರ್ಷ ಮೋದಿ ಸರ್ಕಾರ (Modi Government) ರಕ್ಷಣಾ ವಲಯಕ್ಕೆ 4.71 ಲಕ್ಷ ಕೋಟಿ ರೂ.ಗಳ ಅನುದಾನ ಪ್ರಕಟಿಸಿತ್ತು . ಅದನ್ನು ಈ ಬಾರಿ 4.78 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಒಂದು ವೇಳೆ ಈ ಅನುದಾನದಿಂದ ಪೆನ್ಶನ್ ರಾಶಿಯನ್ನು ಹೊರತುಪಡಿಸಿದರೆ ಈ ಬಾರಿ ಇದು 3.62  ಲಕ್ಷ ಕೋಟಿ ಆಗಿರಲಿದೆ. 


ಇದನ್ನು ಓದಿ- Budget 2021 : ಸೂಪರ್ ಸುದ್ದಿ ..! ಚಿನ್ನ ಇನ್ನು ಅಗ್ಗವಾಗಲಿದೆ, ಮಾರ್ಕೆಟ್ ರೇಟ್ ಕೂಡಾ ಇಳಿದಿದೆ


ಸತತ 7ನೇ ಬಾರಿಗೆ ರಕ್ಷಣಾ ಬಜೆಟ್ ನ ಗಾತ್ರದಲ್ಲಿ ಹೆಚ್ಚಳ
ವರ್ಷ     ರಕ್ಷಣಾ ಬಜೆಟ್ (ರೂಪಾಯಿ)

2014      2.29 ಲಕ್ಷ ಕೋಟಿ ರೂ.


2015      2.47 ಲಕ್ಷ ಕೋಟಿ ರೂ.


2016      3.41 ಲಕ್ಷ ಕೋಟಿ ರೂ.


2017      3.60 ಲಕ್ಷ ಕೋಟಿ ರೂ.


2018      4.04 ಲಕ್ಷ ಕೋಟಿ ರೂ.


2019      4.31 ಲಕ್ಷ ಕೋಟಿ ರೂ.


2020      4.71 ಲಕ್ಷ ಕೋಟಿ ರೂ.


2021      4.78 ಲಕ್ಷ ಕೋಟಿ ರೂ.


ಇದನ್ನು ಓದಿ-Budget 2021: Home Loan ಪಡೆಯಬೇಕೆನ್ನುವವರಿಗೆ ಇಲ್ಲಿದೆ ಸಂತಸದ ಸುದ್ದಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.