Budget 2021: ಈ ಬಜೆಟ್ನಲ್ಲಿ ಮನೆ ಖರೀದಿಸುವವರಿಗೆ ನಿರ್ಮಲಾ ಸಿತಾರಾಮನ್ (Nirmala Sitharaman) ಸಂತಸದ ಸುದ್ದಿ ನೀಡಿದ್ದಾರೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಇಇಎ ಅಡಿಯಲ್ಲಿ ನೀಡಲಾಗುತ್ತಿದ್ದ ಹೆಚ್ಚುವರಿ ತೆರಿಗೆ ವಿನಾಯಿತಿಯನ್ನು ಸರ್ಕಾರ ಒಂದು ವರ್ಷ ವಿಸ್ತರಿಸಿದೆ. ಗೃಹ ಸಾಲದ ಬಡ್ಡಿಗೆ ಸರ್ಕಾರವು 1.5 ಲಕ್ಷ ರೂಪಾಯಿಗಳ ಹೆಚ್ಚುವರಿ ರಿಯಾಯಿತಿ (Additional Tax Deduction) ನೀಡುತ್ತದೆ, ಅವರ ಅವಧಿ 31 ಮಾರ್ಚ್ 2021 ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಈಗ ಅದನ್ನು 31 ಮಾರ್ಚ್ 2022ರವರೆಗೆ ವಿಸ್ತರಿಸಲಾಗಿದೆ.
ಅಗ್ಗದ ಮನೆ ಖರೀದಿಯ ಮೇಲೆ ಸಿಗುತ್ತಿದ್ದ ತೆರಿಗೆ ವಿನಾಯ್ತಿ ಮುಂದುವರೆಯಲಿದೆ
ಗೃಹಸಲದ ಮೇಲಿನ ಬಡ್ಡಿಯಲ್ಲಿ( Home Loan Interest) ನೀಡಲಾಗುತ್ತಿರುವ ಈ ವಿನಾಯಿತಿ 2019 ರಲ್ಲಿ ಜಾರಿಗೆ ಬಂದಿತ್ತು. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24 (b) ಅಡಿ ಸಿಗುತ್ತಿರುವ 2 ಲಕ್ಷ ರೂ ಗಳ ಮೇಲೆ ಸಿಗುತ್ತಿದ್ದ ತೆರಿಗೆ ವಿನಾಯಿತಿ ಮೇಲಿದೆ. ಅಂದರೆ, ಕೈಗೆಟುಕುವ ವಸತಿ ಗೃಹ ಸಾಲದ ಬಡ್ಡಿಯ (Housing Loan Interest) ಮೇಲೆ ತೆರಿಗೆ ಪಾವತಿದಾರನು ಒಂದು ವರ್ಷದಲ್ಲಿ ಒಟ್ಟು 3.5 ಲಕ್ಷ ರೂಪಾಯಿಗಳ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು. ಆದರೆ ತೆರಿಗೆ ವಿನಾಯಿತಿ ಪಡೆಯಲು ಕೆಲ ಷರತ್ತುಗಳು ಇರಲಿವೆ.
ಇದನ್ನು ಓದಿ- Budget 2021: ಮದ್ಯ ಪ್ರಿಯರಿಗೆ ಶೇ.100 ರ ಬಿಗ್ ಶಾಕ್
ಹೋಮ್ ಲೋನ್ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿ ಪಡೆಯಲು ಇಲ್ಲಿವೆ ಷರತ್ತುಗಳು
1. ವಸತಿ ಮನೆ ಆಸ್ತಿಯನ್ನು ಖರೀದಿಸಲು ಹಣಕಾಸು ಸಂಸ್ಥೆ ಅಥವಾ ಬ್ಯಾಂಕ್ ಅಥವಾ ಹೌಸಿಂಗ್ ಫೈನಾನ್ಸ್ ಕಂಪನಿಯಿಂದ ಪಡೆದ ಗೃಹ ಸಾಲವಾಗಿರಬೇಕು
2. ಏಪ್ರಿಲ್ 1, 2021 ಮತ್ತು ಮಾರ್ಚ್ 31, 2022 ರ ನಡುವೆ ತೆಗೆದುಕೊಂಡ ಗೃಹ ಸಾಲಕ್ಕೆ ಇದು ಅನ್ವಯ
3. ಮನೆಯ ಆಸ್ತಿಯ ಸ್ಟಾಂಪ್ ಡ್ಯೂಟಿ 45 ಲಕ್ಷ ಮೀರಬಾರದು.
4. ತೆರಿಗೆದಾರನು ಈಗಾಗಲೇ ಯಾವುದೇ ವಸತಿ ಆಸ್ತಿಯನ್ನು ಹೊಂದಿರಬಾರದು.
ಇದನ್ನು ಓದಿ- ನಿಮ್ಮ ಕಾರಿಗೆ ಎಷ್ಟು ವರ್ಷ ಆಯ್ತು? ಹಳೆಯ ಕಾರು ಇನ್ನು ರಸ್ತೆ ಮೇಲೆ ಓಡಲ್ಲ ಯಾಕೆ ಗೊತ್ತಾ?
ಮೊದಲ ಬಾರಿಗೆ ಮನೆ ಖರೀದಿಸುತ್ತಿರುವವರಿಗೆ ಇದರ ಲಾಭ
ಸರ್ಕಾರದ ಈ ಹೆಜ್ಜೆ ಮೊದಲ ಬಾರಿಗೆ ಮನೆ ಖರೀದಿಸುವ ಜನರಿಗೆ ಅನುಕೂಲವಾಗಲಿದೆ. 45 ಲಕ್ಷ ರೂ.ವರೆಗೆ ಮನೆ ಖರೀದಿಸಲು 2021 ಮಾರ್ಚ್ 31 ರ ಮೊದಲು ಸಾಲವನ್ನು ತೆಗೆದುಕೊಂಡರೆ, ಈ ಕಡಿತವನ್ನು ಪಡೆಯಬಹುದು. ಪ್ರಸ್ತುತ, ಗೃಹ ಸಾಲಗಳ ಮೇಲೆ ಅನೇಕ ರೀತಿಯ ತೆರಿಗೆ ಪ್ರಯೋಜನಗಳಿವೆ. ಯಾರಾದರೂ ಸ್ವಯಂ-ಆಕ್ರಮಿತ ಆಸ್ತಿಯನ್ನು ಹೊಂದಿದ್ದರೆ. ಆದ್ದರಿಂದ ಗೃಹ ಸಾಲದ ಪ್ರಿನ್ಸಿಪಾಲ್ ಸೆಕ್ಷನ್ 80 ಸಿ ಅಡಿಯಲ್ಲಿ 1.5 ಲಕ್ಷ ರೂ.ಗಳವರೆಗೆ ರಿಯಾಯಿತಿ ಪಡೆಯುತ್ತಾರೆ. ಆದರೆ 2 ಲಕ್ಷ ರೂಪಾಯಿಗಳ ಬಡ್ಡಿಗೆ ಸೆಕ್ಷನ್ 24 (ಬಿ) ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ.
ಇದನ್ನು ಓದಿ- Budget 2021: ಯಾವುದು ಅಗ್ಗ, ಯಾವುದು ದುಬಾರಿ? ಇಲ್ಲಿದೆ ವಿವರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.