ನವದೆಹಲಿ : ಫೆ. 1 ರಂದು ಕೇಂದ್ರ ಮುಂಗಡ (Central Budget) ಪತ್ರ ಮಂಡನೆಯಾಗಲಿದೆ.  ಈ ಬಜೆಟ್ (Budget 21-22) ನಲ್ಲಿ ರೈತರಿಗಾಗಿ ಭರ್ಜರಿ  ಗಿಫ್ಟ್ ಘೋಷಣೆಯಾಗಲಿದೆ. ದೇಶಾದ್ಯಂತ ಕೃಷಿ ಕಾನೂನು (Agri Law) ವಿಷಯದಲ್ಲಿ ರೈತರು ಮುನಿದು ಕುಳಿತಿದ್ದಾರೆ. ಇವರನ್ನೆಲ್ಲಾ ಖುಷಿ ಪಡಿಸುವ ಕಾರ್ಯ ಬಜೆಟಿನಲ್ಲಿ ಸಾಗುತ್ತಿದೆ.  ಮೂಲಗಳ ಪ್ರಕಾರ, ಕೇಂದ್ರ ಸರ್ಕಾರ ಕೃಷಿ ಸಾಲ ಮಿತಿ (Agriculture Loan) ಹೆಚ್ಚಿಸಲಿದೆ. ಲಭ್ಯ ಮಾಹಿತಿಗಳ ಪ್ರಕಾರ 2021-22 ಸಾಲಿನಲ್ಲಿ ಕೃಷಿ ಸಾಲಕ್ಕಾಗಿಯೇ ಬರೊಬ್ಬರಿ 19 ಲಕ್ಷ ಕೋಟಿ ರೂಪಾಯಿ ಮೀಸಲಿಡುವ ಸಾಧ್ಯತೆಗಳಿವೆ. ಅಂದರೆ, ಈ ಹಿಂದಿನ ಮೌಲ್ಯಕ್ಕೆ ಹೋಲಿಸಿದರೆ, ಕೃಷಿ ಸಾಲ (farm loan) ಮಿತಿಯಲ್ಲಿ ಶೇ. 25 ರಷ್ಟು ಏರಿಕೆಯಾಗಲಿದೆ.


COMMERCIAL BREAK
SCROLL TO CONTINUE READING

ಕಳೆದ ಬಜೆಟ್‌ನಲ್ಲಿ ಸಾಲದ ಗುರಿ ಎಷ್ಟಿತ್ತು..?
ಕೃಷಿ ಸಾಲ ಕ್ಷೇತ್ರದಲ್ಲಿ ಎನ್‌ಬಿಎಫ್‌ಸಿ(NBFC)  ಮತ್ತು ಸಹಕಾರ ಸಂಘಗಳು (Co-operative)) ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ (Nirmala Sitaraman) 2020-21ರ ಬಜೆಟ್ ನಲ್ಲಿ ಹೇಳಿದ್ದರು. , ಆದ್ದರಿಂದ ನಬಾರ್ಡ್ (NABARD) ಮರುಹಣಕಾಸು ಯೋಜನೆಯನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆ ಇದೆ. . 2020-21ರ ಆರ್ಥಿಕ ವರ್ಷದ ಕೃಷಿ ಸಾಲ ಗುರಿಯನ್ನು 19 ಲಕ್ಷ ಕೋಟಿ ರೂಪಾಯಿಗೆ ಇಟ್ಟು ಕೊಳ್ಳುವ ಸಾಧ್ಯತೆ ಗಳಿವೆ.


ಇದನ್ನೂ ಓದಿ : Budget 2021: ಕೇಂದ್ರ ‌ಬಜೆಟ್‌ನಲ್ಲಿ 'ಪ್ರತ್ಯೇಕ ಬ್ಯಾಂಕ್' ಘೋಷಣೆ ಸಾಧ್ಯತೆ


ಕೃಷಿ ಸಾಲದ ಮೇಲಿನ ಬಡ್ಡಿದರ ಎಷ್ಟು?
ಸಾಮಾನ್ಯವಾಗಿ, ರೈತರಿಗೆ ಶೇಕಡಾ 9 ರಷ್ಟು ಬಡ್ಡಿದರದಲ್ಲಿ (Interest Rate)  ಕೃಷಿ ಸಾಲವನ್ನು ನೀಡಲಾಗುತ್ತದೆ. ಇದರ ಜೊತೆ  ಸರ್ಕಾರವು ಅಲ್ಪಾವಧಿಯ ಸಾಲಗಳಿಗೆ ಸಾಕಷ್ಟು ಸೌಲಭ್ಯ ರಿಯಾಯಿತಿಗಳನ್ನು ನೀಡುತ್ತದೆ. 3 ಲಕ್ಷ ರೂ.ವರೆಗಿನ ಅಲ್ಪಾವಧಿಯ ಕೃಷಿ ಸಾಲಗಳಿಗೆ ಸರ್ಕಾರ ಶೇ 2 ರಷ್ಟು ಸಹಾಯಧನ ನೀಡುತ್ತದೆ. ಹಾಗಾಗಿ  ರೈತರಿಗೆ (Farmers) ವಾರ್ಷಿಕ ಬಡ್ಡಿ ದರ ಶೇ 7 ಇಳಿಯುತ್ತದೆ.  ಇದರ ಜೊತೆಗೆ ರೈತರು ಸಮಯಕ್ಕೆ ಸರಿಯಾಗಿ ಸಾಲವನ್ನು  (Repayment) ಕಟ್ಟಿದರೆ, ಅವರಿಗೆ ಒಂದಿಷ್ಟು ಪ್ರೋತ್ಸಾಹ ಧನ ನೀಡುತ್ತದೆ.  ಆ ಪ್ರೋತ್ಸಾಹ ಧನ ಶೇ. 3 ರಷ್ಟಿರುತ್ತದೆ.  ಒಟ್ಟಾರೆ ಶೆ. 2 ರಷ್ಟು ಸಬ್ಸಿಡಿ, ಶೇ. 3 ರಷ್ಟು ಪ್ರೋತ್ಸಾಹ ಧನ ಸೇರಿಸಿದರೆ, ರೈತರಿಗೆ ಕೇವಲ ಶೇ. 4ರ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ.


ರೈತರನ್ನು ಒಲಿಸುವ ಕಾರ್ಯಕ್ಕೆ ಮೋದಿ (Modi) ಸರ್ಕಾರ ಭರ್ಜರಿಯಾಗಿಯೇ ಕೈಹಾಕಿದೆ.  ಮುನಿದ ಅನ್ನದಾತರನ್ನು ಒಲಿಸುವ ಮೋದಿ ಕಾರ್ಯ ಯಶಸ್ವಿಯಾಗುತ್ತಾ? ನೋಡಬೇಕು. ಆದರೆ ಈ ಸೌಲಭ್ಯ ಪಡೆಯಬೇಕಾದರೆ ನೀವು ರೈತರಾಗಿರಬೇಕು ಅಥವಾ ರೈತ ಕಾರ್ಮಿಕರಾಗಿರಬೇಕು.ಅದನ್ನು ಋಜುವಾತು ಪಡಿಸಬೇಕು.   ಇದು ಸಾಲ ಪಡೆಯಲು ಇರುವ ಬೇಸಿಕ್ ಅರ್ಹತೆ. 


ಇದನ್ನೂ ಓದಿ : Budget 2021: ಏನಿದು ಹಲ್ವಾ ಸೆರೆಮನಿ? ಬಜೆಟ್ ಪೇಪರ್ ಹೇಗೆ ಮುದ್ರಿಸಲಾಗುತ್ತದೆ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.