ನವದೆಹಲಿ: ಕೊರೋನಾ (Corona) ನಂತರ ಮಂಡನೆಯಾಗುತ್ತಿರುವ ಕೇಂದ್ರ ಸರ್ಕಾರದ ಬಜೆಟ್ (Union Budget) ವಿಶೇಷ ಕುತೂಹಲ ಮೂಡಿಸಿದೆ. ಅದರಲ್ಲೂ ಜಿಡಿಪಿ (GDP) ಕುಸಿತ, ಆರ್ಥಿಕ ಹಿಂಜರಿತ (Economic Recession), ನಿರುದ್ಯೋಗ (Unemployment) ಹಾಗೂ ಬೆಲೆ ಏರಿಕೆ (Price Hike) ಸಮಸ್ಯೆಗಳು ತೀವ್ರವಾಗಿ ಕಾಡುತ್ತಿರುವ ಈ ಸಂದರ್ಭದಲ್ಲಿ ದೇಶದ ಆರ್ಥಿಕ ಚಟುವಟಿಕೆಗಳಿಗೆ ಚೇತರಿಕೆ ನೀಡಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಭಾರೀ ಕುತೂಹಲವನ್ನೂ ಮೂಡಿಸಿದೆ.
ಆರ್ಥಿಕ ಚಟುವಟಿಕೆಗಳಿಗೆ (Economic Activities) ಗಳಿಗೆ ಚೇತರಿಕೆ ನೀಡುವುದು ಎಂದರೆ ಬ್ಯಾಂಕಿಂಗ್ ಕ್ಷೇತ್ರದಲ್ಲೂ (Banking Sector) ಕೆಲವು ಸುಧಾರಣಾ ಕ್ರಮಗಳನ್ನು (Reforms) ತರುವುದು ಎಂದೇ ಅರ್ಥ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೊಡ್ಡ ದೊಡ್ಡ ಮೂಲಸೌಕರ್ಯ ಯೋಜನೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸುಲಭವಾಗಿ ಸಾಲ ನೀಡುವ ಉದ್ದೇಶದಿಂದ 'ಪ್ರತ್ಯೇಕ ಬ್ಯಾಂಕ್' ಒಂದನ್ನು ತೆರೆಯಲಾಗುತ್ತದೆ ಎಂದು ಸಿಎನ್ಬಿಸಿ ಸುದ್ದಿವಾಹಿನಿ ವರದಿ ಮಾಡಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಇದೇ ಫೆಬ್ರವರಿ 1ರಂದು ಕೇಂದ್ರದ ಬಜೆಟ್ ಮಂಡನೆ ಮಾಡುತ್ತಿದ್ದು, ದೊಡ್ಡ ಮೂಲಸೌಕರ್ಯ ಯೋಜನೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸುಲಭವಾಗಿ ಸಾಲ ನೀಡಲೆಂದೇ 'ಪ್ರತ್ಯೇಕ ಬ್ಯಾಂಕ್' ಘೋಷಣೆ ಮಾಡಲಿದ್ದಾರೆ ಎಂದು ಸಿಎನ್ಬಿಸಿ ವರದಿ ಮಾಡಿದೆ.
ಇದನ್ನೂ ಓದಿ - Budget 2021: ಏನಿದು ಹಲ್ವಾ ಸೆರೆಮನಿ? ಬಜೆಟ್ ಪೇಪರ್ ಹೇಗೆ ಮುದ್ರಿಸಲಾಗುತ್ತದೆ?
ಈಗಾಗಲೇ ಮೂಲಸೌಕರ್ಯ ಮತ್ತು ಅಭಿವೃದ್ಧಿಗೆ ಹಣಕಾಸು ಒದಗಿಸುವ ನ್ಯಾಷನಲ್ ಬ್ಯಾಂಕ್ ಮಸೂದೆಯ (NBFID Bill 2020) ಕರಡನ್ನು ಕೂಡ ರೂಪಿಸಲಾಗಿದೆ. ನೂತನ ಕರಡಿನ ಪ್ರಕಾರ ಉದ್ದೇಶಿತ ಬ್ಯಾಂಕ್ಗೆ ಹೆಚ್ಚಿನ ಅಧಿಕಾರ ಮತ್ತು ಸ್ವಾಯತ್ತತೆ ಇರಲಿದೆ. ಸೂಕ್ತ ಸಂದರ್ಭದಲ್ಲಿ ಹಣಕಾಸಿನ ಸಹಕಾರ ಸಿಗದೆ ಹಲವು ಮೂಲಸೌಕರ್ಯ ಯೋಜನೆಗಳು ನೆನೆಗುದಿಗೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಹೊಸ ಬ್ಯಾಂಕ್ ಅನ್ನು ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ (Central Government) ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಮೂಲಸೌಕರ್ಯ ಯೋಜನೆಗಳಿಗೆ ಹಣದ ಕೊರತೆ ಎದುರಾಗದಂತೆ ನೋಡಿಕೊಳ್ಳುವುದು ಈ ಬ್ಯಾಂಕ್ನ ಉದ್ದೇಶ ಆಗಿರಲಿದೆ. ಅದೇ ಕಾರಣಕ್ಕೆ ಮುಂಬರುವ ಬಜೆಟ್ ನಲ್ಲಿ ಘೋಷಣೆಯಾಗುವ ಈ ಪ್ರತ್ಯೇಕ ನ್ಯಾಷನಲ್ ಬ್ಯಾಂಕ್ನಲ್ಲಿ (National Bank) 1 ಲಕ್ಷ ಕೋಟಿ ಹಣ ಸಂಗ್ರಹ ಇರಲಿದೆ. ಆರಂಭಿಕ ಹಂತದಲ್ಲಿ ಕೇಂದ್ರದ ಬಜೆಟ್ 20 ಸಾವಿರ ಕೋಟಿ ರೂಪಾಯಿಗಳನ್ನು ಮಿಸಲಿಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಪ್ರತ್ಯೇಕ್ ಬ್ಯಾಂಕ್ ಸ್ಥಾಪನೆಯೇ ವಿಶೇಷವಾಗಿರಲಿದೆ. ವಿಶೇಷ ಕಾನೂನಿನ ಮೂಲಕ ಸರ್ಕಾರ ಬ್ಯಾಂಕ್ ಅನ್ನು ಸ್ಥಾಪನೆ ಮಾಡಲಾಗುತ್ತದೆ. ಪ್ರಾವಿಡೆಂಟ್ ಫಂಡ್ (Provident Fund), ಪೆನ್ಷನ್ ಫಂಡ್ (Pension Fund) ಹಾಗೂ ಇನ್ಷೂರೆನ್ಸ್ ಫಂಡ್ (Insurance Fund)ಗಳಲ್ಲಿ ಒಂದು ನಿರ್ದಿಷ್ಟ ಮೊತ್ತದ ಹಣವನ್ನು ಈ ಪ್ರತ್ಯೇಕ ಬ್ಯಾಂಕ್ಗಾಗಿ ಮೀಸಲು ಇಡುವಂತಹ ನಿಯಮವನ್ನು ರೂಪಿಸುವುದಕ್ಕೂ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ - Budget 2021 : ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್ ಪ್ರಯೋಜನಗಳಿವು
ಐಐಎಫ್ಸಿಎಲ್ (India Instructor Finance Company Limited) ಈಗಾಗಲೇ ಮೂಲಸೌಕರ್ಯ ಯೋಜನೆಗಳಿಗೆ ಹಣ ಒದಗಿಸುತ್ತಿದೆ. ಆದರೂ ಹೊಸದಾಗಿ ಇದೇ ಉದ್ದೇಶಕ್ಕೆ ಬ್ಯಾಂಕ್ ಸ್ಥಾಪಿಸಲು ಹೊರಟಿರುವುದರಿಂದ ಐಐಎಫ್ಸಿಎಲ್ ಅನ್ನು ನಿಷ್ಕ್ರಿಯಗೊಳಿಸಬಹುದು ಎಂಬ ಅನುಮಾನಗಳು ಮೂಡಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.