ಅಗ್ಗದ ದರದಲ್ಲಿ ಚಿನ್ನ ಖರೀದಿಗೆ ವರ್ಷಾರಂಭದಲ್ಲಿಯೇ ಸರ್ಕಾರ ನೀಡುತ್ತಿದೆ ಈ ಅವಕಾಶ
Sovereign Gold Bond Scheme 2021 - ಒಂದು ವೇಳೆ ನೀವೂ ಕೂಡ ಚಿನ್ನದಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ ಜನವರಿ 11 ರಿಂದ ಜನವರಿ 15ರವರೆಗೆ ನಿಮ್ಮ ಬಳಿ ಈ ಉತ್ತಮ ಅವಕಾಶವಿದೆ. ಮೋದಿ ಸರ್ಕಾರ ಪುನಃ ಅಗ್ಗದ ದರದಲ್ಲಿ ಚಿನ್ನ ಮಾರಾಟ ಮಾಡಲಿದೆ.
Sovereign Gold Bond Scheme 2021 - ನವದೆಹಲಿ: ಮೋದಿ ಸರ್ಕಾರ ಮತ್ತೊಮ್ಮೆ ಅಗ್ಗದ ದರದಲ್ಲಿ ಚಿನ್ನವನ್ನು ಮಾರಾಟ ಮಾಡಲಿದೆ. ಒಂದು ವೇಳೆ ನೀವೂ ಕೂಡ ಚಿನ್ನದಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ, ಜನವರಿ 11 ರಿಂದ ಜನವರಿ 15 ರವರೆಗೆ ಇನ್ಮ್ಮ ಬಳಿ ಉತ್ತಮ ಅವಕಾಶವಿದೆ. ಈ ಬಾರಿ ಸಾವೆರಿನ್ ಚಿನ್ನದ ಬಾಂಡ್ ಯೋಜನೆಯಲ್ಲಿ ಚಿನ್ನದ ಬೆಲೆಯನ್ನು ಗ್ರಾಂ.ಗೆ 5,104 ರೂ ನಿಗದಿಪಡಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಮಾಹಿತಿಯನ್ನು ಶುಕ್ರವಾರ ಪ್ರಕಟಣೆಯಲ್ಲಿ ನೀಡಿದೆ. ಚಂದಾದಾರಿಕೆ ಅವಧಿ ಪ್ರಾರಂಭವಾಗುವ ಮೊದಲು ವಾರದ ಕೊನೆಯ ಮೂರು ವಹಿವಾಟು ಅವಧಿಗಳಲ್ಲಿ ಬಾಂಡ್‌ನ ಬೆಲೆ 999 ಶುದ್ಧತೆಯ ಚಿನ್ನದ ಸರಾಸರಿ ಮುಕ್ತಾಯದ ಬೆಲೆಯನ್ನು ಆಧರಿಸಿದೆ ಎಂದು ಕೇಂದ್ರೀಯ ಬ್ಯಾಂಕ್ ವಿವರಿಸಿದೆ.ಈ ಸರಳ ಸರಾಸರಿ ಮುಕ್ತಾಯದ ಬೆಲೆಯನ್ನು ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಲಿಮಿಟೆಡ್ ಪ್ರಕಟಿಸಿದೆ.
ಜನವರಿ 19 ಸೆಟಲ್ಮೆಂಟ್ ದಿನಾಂಕ
ಸರ್ಕಾರ Gold Bond 2020-21 (ಸಿರೀಜ್ X) ಘೋಷಿಸಿದೆ. ಈ ಗೋಲ್ಡ್ ಬಾಂಡ್ ಗಳಲ್ಲಿ ನೀವು 11 ಜನವರಿ 2021 ರಿಂದ 15 ಜನವರಿ 2021 ರವರೆಗೆ ಹೂಡಿಕೆ ಮಾಡಬಹುದು. ಇದರ ಸೆಟಲ್ಮೆಂಟ್ ದಿನಾಂಕ ಜನವರಿ 19, 2021 ಆಗಿರಲಿದೆ. ಸಾವೆರಿನ್ ಗೋಲ್ಡ್ ಬಾಂಡ್ 2020-21(Series X) ನಲ್ಲಿ ಹೂಡಿಕೆ ಮಾಡಲು ಪ್ರತಿ ಗ್ರಾಂ ಚಿನ್ನದ ಬೆಲೆಯನ್ನು ರೂ. 5104 ನಿಗದಿಪಡಿಸಲಾಗಿದೆ. ಜನವರಿ 8 ರಂದು RBI ಈ ಘೋಷಣೆ ಮಾಡಿದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮತ್ತು ಡಿಜಿಟಲ್ ಮೋಡ್ ಮೂಲಕ ಪಾವತಿಸುವ ಹೂಡಿಕೆದಾರರಿಗೆ ವಿತರಣಾ ಬೆಲೆಯಲ್ಲಿ ಪ್ರತಿ ಗ್ರಾಂಗೆ 50 ರೂ.ಗಳ ರಿಯಾಯಿತಿ ನೀಡಲು ಭಾರತ ಸರ್ಕಾರ ನಿರ್ಧರಿಸಿದೆ. ಇಂತಹ ಹೂಡಿಕೆದಾರರಿಗೆ ಚಿನ್ನದ ಬಾಂಡ್‌ಗಳ ವಿತರಣಾ ಬೆಲೆ ಪ್ರತಿ ಗ್ರಾಂಗೆ 5,054 ರೂ. ಪಾವತಿಸಬೇಕು. ವಿಶೇಷವೆಂದರೆ ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ.
ಇದನ್ನು ಓದಿ- Refunding Failed Transactions: ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ಗೆ ಪತ್ರ ಬರೆದ CCPA
ಈ ಯೋಜನೆಯಡಿ ನೀವೂ 4 ಕೆ.ಜಿ ವರೆಗೆ ಚಿನ್ನ ಖರೀದಿಸಬಹುದು
ಯೋಜನೆಯಡಿಯಲ್ಲಿ, ವೈಯಕ್ತಿಕ ಹೂಡಿಕೆದಾರರು ಮತ್ತು ಹಿಂದೂ ಅವಿಭಾಜ್ಯ ಕುಟುಂಬಗಳು ಆರ್ಥಿಕ ವರ್ಷದಲ್ಲಿ ಕನಿಷ್ಠ ಒಂದು ಗ್ರಾಂ ಮತ್ತು ಗರಿಷ್ಠ ನಾಲ್ಕು ಕಿಲೋಗ್ರಾಂ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಟ್ರಸ್ಟ್ ಮತ್ತು ಇಂತಹ ಇತರ ಘಟಕಗಳು ಪ್ರತಿವರ್ಷ 20 ಕೆಜಿ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಚಿನ್ನದ ಬಾಂಡ್‌ಗಳನ್ನು ಬ್ಯಾಂಕುಗಳು, ಭಾರತದ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್‌ಗಳು, ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರಗಳ ಮೂಲಕ ಮಾರಾಟ ಮಾಡಲಾಗುತ್ತದೆ.
ಇದನ್ನು ಓದಿ-ಎಚ್ಚರ: Pizza ಆಸೆಗೆ ಅಕೌಂಟ್ ಖಾಲಿಯಾಗದಿರಲಿ!
ಇಲ್ಲಿಂದ ನೀವು ಗೋಲ್ಡ್ ಬಾಂಡ್ ಗಳನ್ನು ಖರೀದಿಸಬಹುದು
ಪ್ರತಿ SGB ಅಪ್ಲಿಕೇಶನ್‌ನೊಂದಿಗೆ ಹೂಡಿಕೆದಾರರ PAN ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕು. ಚಿನ್ನದ ಬಾಂಡ್‌ಗಳನ್ನು ಬ್ಯಾಂಕುಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (HSCIL), ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರಗಳು (NSE ಮತ್ತು BSE) ಮೂಲಕ ಮಾರಾಟ ಮಾಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.