Account Opening Rules Changed: ಬ್ಯಾಂಕ್ ಖಾತೆ ತೆರೆಯುವ ನಿಯಮದಲ್ಲಿ ಬದಲಾವಣೆ ಮಾಡಿದ RBI, ಯಾರಿಗೆ ಲಾಭ ಇಲ್ಲಿ ತಿಳಿಯಿರಿ

Account Opening Rules Changed: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚಾಲ್ತಿ ಖಾತೆ ನಿಯಮಗಳಲ್ಲಿ ಹಲವಾರು  ಪರಿಹಾರ ಘೋಷಿಸಿದೆ. ಇಂದಿನಿಂದಲೇ ಹೊಸ ನಿಯಮಗಳು ಜಾರಿಗೆ ಬಂದಿವೆ.

Last Updated : Dec 18, 2020, 02:09 PM IST
  • RBI ಚಾಲ್ತಿ ಖಾತೆ ನಿಯಮಗಳಲ್ಲಿ ಹಲವಾರು ಪರಿಹಾರ ಘೋಷಿಸಿದೆ.
  • ಇಂದಿನಿಂದಲೇ ಹೊಸ ನಿಯಮಗಳು ಜಾರಿಗೆ ಬಂದಿವೆ.
  • ಗ್ರಾಹಕರು ಹಾಗೂ ಬ್ಯಾಂಕ್ ಗಳಿಗೂ ಕೂಡ ಎಚ್ಚರಿಕೆ ನೀಡಿದ RBI.
Account Opening Rules Changed: ಬ್ಯಾಂಕ್ ಖಾತೆ ತೆರೆಯುವ ನಿಯಮದಲ್ಲಿ ಬದಲಾವಣೆ ಮಾಡಿದ RBI, ಯಾರಿಗೆ ಲಾಭ ಇಲ್ಲಿ ತಿಳಿಯಿರಿ title=
Account Opening Rules Changed

ನವದೆಹಲಿ: Account Opening Rules Changed - ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚಾಲ್ತಿ ಖಾತೆ ನಿಯಮಗಳಲ್ಲಿ ಹಲವಾರು  ಪರಿಹಾರಗಳನ್ನು ಘೋಷಿಸಿದೆ. ಇಂದಿನಿಂದಲೇ ಹೊಸ ನಿಯಮಗಳು ಜಾರಿಗೆ ಬಂದಿವೆ. ಹೊಸ ನಿಯಮಗಳ ಪ್ರಕಾರ, ಆಗಸ್ಟ್ 6 ರಂದು, RBI ವಾಣಿಜ್ಯ ಬ್ಯಾಂಕುಗಳು ಮತ್ತು ಪಾವತಿ ಬ್ಯಾಂಕುಗಳಿಗೆ ಸುತ್ತೋಲೆ ಹೊರಡಿಸಿದ್ದು, ಇದರಲ್ಲಿ ಚಾಲ್ತಿ ಖಾತೆಯ ಬಗ್ಗೆ ಕೆಲವು ಅಗತ್ಯ ಸೂಚನೆಗಳನ್ನು ನೀಡಿತ್ತು. ಆದರೆ ಇದೀಗ ಹಲವು  ಖಾತೆಗಳಿಗೆ ಈ ನಿಯಮಗಳಿಂದ ಪರಿಹಾರ ನೀಡಲಾಗಿದೆ.

ಆಗಸ್ಟ್ 6 ರಂದು ರಿಸರ್ವ್ ಬ್ಯಾಂಕ್ ಸುತ್ತೋಲೆ ಹೊರಡಿಸಿ,ಹಲವು ಗ್ರಾಹಕರಿಗೆ ಚಾಲ್ತಿ ಖಾತೆ ತೆರೆಯುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿತ್ತು.ಬ್ಯಾಂಕಿಂಗ್ ಸಿಸ್ಟಂನಿಂದ ಕ್ಯಾಶ್ ಕ್ರೆಡಿಟ್ ಅಥವಾ ಓವರ್ ಡ್ರಾಫ್ಟ್ ರೂಪದಲ್ಲಿ ಕ್ರೆಡಿಟ್ ಫೆಸಿಲಿಟಿ ಪಡೆದ ಗ್ರಾಹಕರು ಇದರಲ್ಲಿ ಶಾಮೀಲಾಗಿದ್ದರು ಎಂಬುದು ಇಲ್ಲಿ ಗಮನಾರ್ಹ.

ಹೊಸ ಸುತ್ತೋಲೆಯಲ್ಲಿ ಯಾವ ಬದಲಾವಣೆ
ಇದಲ್ಲದೆ ಹೊಸ ಸುತ್ತೋಲೆ ಪ್ರಕಾರ ಗ್ರಾಹಕರು ತಾವು ಸಾಲ ಪಡೆದ ಬ್ಯಾಂಕ್ ಮೂಲಕವೇ ಚಾಲ್ತಿ ಖಾತೆ ಅಥವಾ ಓವರ್ ಡ್ರಾಫ್ಟ್ ಖಾತೆ ತೆರೆಯುವುದು ಇದೀಗ ಅನಿವಾರ್ಯವಾಗಿದೆ.

ಇದನ್ನು ಓದಿ- Cheque Payment System: ಜನವರಿ 1ರಿಂದ ಬದಲಾಗಲಿರುವ ಈ ನಿಯಮವನ್ನು ತಪ್ಪದೇ ತಿಳಿಯಿರಿ

ಈ ನಿಯಮ ಜಾರಿಯಾಗಲು ಕಾರಣವೇನು?
ಬ್ಯಾಂಕಿನಿಂದ 50 ಕೋಟಿ ರೂ.ಗಿಂತ ಹೆಚ್ಚು ಸಾಲ ಪಡೆದ ಗ್ರಾಹಕರಿಗೆ ಈ ನಿಯಮ ಅನ್ವಯಿಸಲಿದೆ. ಗ್ರಾಹಕರು ಒಂದು ಬ್ಯಾಂಕಿನಿಂದ ಸಾಲ ತೆಗೆದುಕೊಂಡು ಮತ್ತೊಂದು ಬ್ಯಾಂಕ್‌ಗೆ ಹೋಗಿ ಚಾಲ್ತಿ ಖಾತೆ ತೆರೆಯುವುದು ಹಲವು ಬಾರಿ ಕಂಡುಬಂದಿದೆ ಎಂದು ರಿಸರ್ವ್ ಬ್ಯಾಂಕ್ (RBI) ಹೇಳಿದೆ. ಇದನ್ನು ಮಾಡುವುದರಿಂದ, ಕಂಪನಿಯ ಹಣದ ಹರಿವನ್ನು ಪತ್ತೆಹಚ್ಚಲು ಸಾಕಷ್ಟು ತೊಂದರೆಗಳಿವೆ. ಆದ್ದರಿಂದ, ಆರ್‌ಬಿಐ ಸುತ್ತೋಲೆ ಹೊರಡಿಸಿದ್ದು,  ಬೇರೆ ಬ್ಯಾಂಕ್ ಗಳಿಂದ ಓವರ್ ಡ್ರಾಫ್ಟ್ ಸೌಲಭ್ಯ ಪಡೆದ ಅಥವಾ ಕ್ಯಾಶ್ ಕ್ರೆಡಿಟ್ ಪಡೆದ ಗ್ರಾಹಕರ ಚಾಲ್ತಿ ಖಾತೆಯನ್ನು ಯಾವುದೇ ಬ್ಯಾಂಕ್ ತೆರೆಯಬಾರರು ಎಂದು ಹೇಳಿದೆ.

ಇದನ್ನು ಓದಿ-Debit & Credit Card Payment Rule: ನೂತನ ವರ್ಷದಿಂದ ಈ ನಿಯಮದಲ್ಲಿ ದೊಡ್ಡ ಬದಲಾವಣೆ, ನಿಮಗೂ ತಿಳಿದಿರಲಿ

ಬ್ಯಾಂಕ್ ಗಳು ಕೂಡ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು
ಚಾಲ್ತಿ ಖಾತೆ ತೆರೆಯುವ ನಿಯಮಗಳಲ್ಲಿ ಪರಿಹಾರ ಘೋಷಿಸಿರುವುದರ ಜೊತೆಗೆ, ಆರ್‌ಬಿಐ ಗ್ರಾಹಕರಿಗೆ ಎಚ್ಚರಿಕೆಯನ್ನು ಸಹ ನೀಡಿದೆ. ಈ ರಿಯಾಯಿತಿಯನ್ನು ಷರತ್ತುಗಳೊಂದಿಗೆ ಮಾತ್ರ ನೀಡಲಾಗುತ್ತಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ, ಆದ್ದರಿಂದ ಬ್ಯಾಂಕ್ ಸಹ ಇವುಗಳನ್ನು ಗಮನಿಸಬೇಕು. ಇದಲ್ಲದೆ, ಇದನ್ನು ಕೆಲವು ವಹಿವಾಟುಗಳಿಗೆ ಮಾತ್ರ ಬಳಸಲಾಗುವುದು ಎಂದು ಬ್ಯಾಂಕುಗಳು ಭರವಸೆ ನೀಡುತ್ತವೆ. ಇದಲ್ಲದೆ ಇದನ್ನು ಬ್ಯಾಂಕಿನ ಮೇಲೂ ಮೇಲ್ವಿಚಾರಣೆ ಮಾಡಲಾಗುವುದು. ನಗದು ಕ್ರೆಡಿಟ್ / ಓವರ್‌ಡ್ರಾಫ್ಟ್ ಅನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವಂತೆ ಆರ್‌ಬಿಐ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ.

Trending News