Refunding Failed Transactions: ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ಗೆ ಪತ್ರ ಬರೆದ CCPA

Refunding Failed Transactions: ಆನ್‌ಲೈನ್ ವಹಿವಾಟಿನ ಸಮಯದಲ್ಲಿ ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣ ಪಾವತಿ ಮಾಡಲಾಗುತ್ತದೆ ಆದರೆ ಹಲವು ಬಾರಿ ಯಾವುದೇ ಒಂದು ಕಾರಣಗಳಿಂದಾಗಿ ಆ ಆ ವಹಿವಾಟು ಪೂರ್ಣಗೊಳ್ಳುವುದಿಲ್ಲ. ವಹಿವಾಟಿನ ರದ್ದತಿಯ ಸಂದರ್ಭದಲ್ಲಿಯೂ ಇದು ಸಂಭವಿಸುತ್ತದೆ.

Written by - Nitin Tabib | Last Updated : Jan 2, 2021, 11:01 AM IST
  • ಆನ್ಲೈನ್ ನಲ್ಲಿ ಹಣ ವರ್ಗಾವಣೆ ವಿಷಯದಲ್ಲಿ ಹಲವು ಬಾರಿ ವಹಿವಾಟು ರದ್ದುಗೊಳ್ಳುತ್ತವೆ ಅಥವಾ ಪೂರ್ಣಗೊಳ್ಳುವುದಿಲ್ಲ.
  • ಇಂತಹ ಸಂದರ್ಭದಲ್ಲಿ ಬ್ಯಾಂಕ್ ಹಣ ಹಿಡಿರುಗಿಸುವವರೆಗೆ ಕಾಯಿವಿಕೆ ಗ್ರಾಹಕರಿಗೆ ಅನಿವಾರ್ಯ.
  • ಆದರೆ, ಕೆಲವೊಮ್ಮೆ ಈ ಕಾಯುವಿಕೆ ಗ್ರಾಹಕರ ಪಾಲಿಗೆ ವಿಪರೀತ ಎಂಬಂತೆ ಸಾಬೀತಾಗುತ್ತವೆ.
Refunding Failed Transactions: ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ಗೆ ಪತ್ರ ಬರೆದ CCPA title=
Refunding Failed Transactions (Representational Image)

Refunding Failed Transactions: ಆನ್‌ಲೈನ್ ವಹಿವಾಟಿನ ಸಮಯದಲ್ಲಿ ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣ ಪಾವತಿ ಮಾಡಲಾಗುತ್ತದೆ ಆದರೆ ಹಲವು ಬಾರಿ ಯಾವುದೇ ಒಂದು ಕಾರಣಗಳಿಂದಾಗಿ ಆ ಆ ವಹಿವಾಟು ಪೂರ್ಣಗೊಳ್ಳುವುದಿಲ್ಲ. ವಹಿವಾಟಿನ ರದ್ದತಿಯ ಸಂದರ್ಭದಲ್ಲಿಯೂ ಇದು ಸಂಭವಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಬ್ಯಾಂಕ್ ಗ್ರಾಹಕರಿಗೆ ಹಣ ಹಿಂದಿರುಗಿಸುವವರೆಗೆ ಕಾಯುವ ಒಂದೇ ಆಯ್ಕೆ ಗ್ರಾಹಕರ ಬಳಿ ಇರುತ್ತದೆ. ಕೆಲವೊಮ್ಮೆ ಈ ಕಾಯುವಿಕೆ ತುಂಬಾ ಸುದೀರ್ಘವಾಗಿರುತ್ತದೆ. ಬ್ಯಾಂಕ್ ಗಳ ಈ ನಿರ್ಲಕ್ಷ ಧೋರಣೆಯನ್ನು ಇದೀಗ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂತಹ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ ಮತ್ತು ಕೇಂದ್ರ ಬ್ಯಾಂಕ್ ಈ ವಿಷಯದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿದೆ ಎಂದು ಗ್ರಾಹಕ ಸಂರಕ್ಷಣಾ ನಿಯಂತ್ರಕ (ಸಿಸಿಪಿಎ) ಆರ್‌ಬಿಐಗೆ ಪತ್ರ ಬರೆದಿದೆ.

ಇದಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ನ ಉಪಗವರ್ನರ್ ಎಮ್. ಕೆ. ಜಾನಿ ಅವರಿಗ ಪತ್ರ ಬರೆದಿರುವ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ ಮುಖ್ಯ ಆಯುಕ್ತೆ ನಿಧಿ ಖರೆ, ವಹಿವಾಟು ವಿಫಲಗೊಂಡ (Failed Bank Transaction)ಅಥವಾ ರದ್ದುಗೊಂಡ ಮತ್ತು ಅವುಗಳಿಗೆ ಇದುವರೆಗೆ ಮರುಪಾವತಿ ಸಿಗದ ಸುಮಾರು 2850 ಪ್ರಕರಣಗಳು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ಇನ್ನೂ ಹಾಗೆ ಉಳಿದುಕೊಂಡಿವೆ. ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ಬಂದ ಒಟ್ಟು ದೂರುಗಳ ಶೇ.20 ಪ್ರಕರಣಗಳು ಇವು ಎಂದು ಹೇಳಿದ್ದಾರೆ.

ಇದನ್ನು ಓದಿ- WhatsApp Payನಲ್ಲಿ ಸೈಬರ್ ವಂಚನೆ ತಪ್ಪಿಸಲು ಈ 5 ತಂತ್ರ ಅನುಸರಿಸಿ, ನಿಮ್ಮ ಹಣ ಉಳಿಸಿ

ಬ್ಯಾಂಕ್ ಗಳು ಹಣವನ್ನು ಹಿಂದಿರುಗಿಸುತ್ತಿಲ್ಲ ಎಂಬುದು ನಿಧಿ ಆರೋಪವಲ್ಲ. ಆದರೆ, ಈ ಹಣ ಹಿಂದಿರುಗಿಸುವಿಕೆಯಲ್ಲಿ ಆರ್.ಬಿ.ಐ ನಿಗದಿಪಡಿಸಿರುವ ಕಾಲಾವಧಿಯಲ್ಲಿ ಅವು ಇತ್ಯರ್ಥವಾಗುತ್ತಿಲ್ಲ ಎಂಬುದು ಅವರ ಆರೋಪ. ದೇಶಾದ್ಯಂತ ಇರುವ ಎಲ್ಲಾ ಬ್ಯಾಂಕ್ ಗಳ ನಿಯಂತ್ರಣ ಸಂಸ್ಥೆಯಾಗಿರುವ RBI ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಇಂತಹ ಪ್ರಕರಣಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಪಡಿಸಲು ಬ್ಯಾಂಕ್ ಗಳಿಗೆ ಆದೇಶ ನೀಡಬೇಕು ಎಂದು ಅವರು ತಮ್ಮ ಪತ್ರದಲ್ಲಿ ಕೋರಿದ್ದಾರೆ. ಇದರಿಂದ ಗ್ರಾಹಕರ ಸಿಲುಕಿಕೊಂಡ ಹಣ ಅವರಿಗೆ ಪುನಃ ಸಿಗುವ ಪ್ರಕ್ರಿಯೆ ವೇಗಪಡೆದುಕೊಳ್ಳಲಿದೆ ಮತ್ತು ಈ ನಿಟ್ಟಿನಲ್ಲಿ ಯಾವುದೇ ರೀತಿಯ ಸಹಾಯಕ್ಕೆ ಸಿಸಿಪಿಎ ಸಿಧವಾಗಿದೆ ಅಂದು ಖರೆ ಹೇಳಿದ್ದಾರೆ.

ಇದನ್ನು ಓದಿ- Bank Transaction Rules: ವಹಿವಾಟು ವಿಫಲವಾದರೆ ಬ್ಯಾಂಕ್ ನೀಡುತ್ತೆ 100 ರೂ. ಪರಿಹಾರ, ಹೇಗೆ... ಇಲ್ಲಿದೆ ವಿವರ

ಎನ್‌ಸಿಎಚ್‌ ಬಂದ ದೂರುಗಳ ವಿಶ್ಲೇಷಣೆಯು ಐಎಂಪಿಎಸ್ ಮತ್ತು ಯುಪಿಐನಂತಹ ಬ್ಯಾಂಕಿಂಗ್ ಸೇವೆಗಳಲ್ಲಿ ಹೆಚ್ಚುತ್ತಿರುವ ವೈಫಲ್ಯ ಅಥವಾ ರದ್ದತಿ ಮತ್ತು ಮರುಪಾವತಿ ಘಟನೆಗಳು ಇದಕ್ಕೆ ಸಾಕ್ಷಿಯಾಗಿದೆ ಎಂದು ತೋರಿಸಿದೆ. ವಿಶೇಷವೆಂದರೆ, ಕಳೆದ ವರ್ಷ ಜುಲೈ 24 ರಂದು ಸಿಸಿಪಿಎ ರಚನೆಯಾಗಿದೆ. ಗ್ರಾಹಕರ ಹಕ್ಕುಗಳನ್ನು ರಕ್ಷಿಸುವುದು ಇದರ ಉದ್ದೇಶ. ಇದು ಅನ್ಯಾಯದ ವ್ಯಾಪಾರ ಅಭ್ಯಾಸಗಳು, ತಪ್ಪುದಾರಿಗೆಳೆಯುವ ಜಾಹೀರಾತುಗಳು ಮತ್ತು ಗ್ರಾಹಕರ ಹಕ್ಕುಗಳನ್ನು ನಿರ್ಲಕ್ಷಿಸುವ ಪ್ರಕರಣಗಳನ್ನು ನಿಯಂತ್ರಿಸಬೇಕಾಗಿದೆ. ಇದು ಗ್ರಾಹಕ ವರ್ಗದ ಹಕ್ಕುಗಳ ರಕ್ಷಣೆಯನ್ನು ಉತ್ತೇಜಿಸುತ್ತದೆ. ಇದು ಅನೇಕ ಪ್ರಕರಣಗಳಲ್ಲಿ ತನಿಖೆಯ ಹಕ್ಕನ್ನು ಸಹ ಹೊಂದಿದೆ.

ಇದನ್ನು ಓದಿ-  Income Tax Return Filing Online: ಮತ್ತೆ ವಿಸ್ತರಣೆಯಾದ ITR ಸಲ್ಲಿಕೆಯ ಗಡುವು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News