ನವದೆಹಲಿ : ಏರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯು ಸಾರ್ವಜನಿಕರನ್ನು ಚಿಂತೆಗೆ ಈಡು ಮಾಡಿದೆ.  ಈ ಕಾರಣದಿಂದಾಗಿ ವಾಹನ ಸವಾರರ ಚಿತ್ತ  ಈಗ  ಹೆಚ್ಚಿನ ಮೈಲೇಜ್ ಹೊಂದಿರುವ ವಾಹನಗಳತ್ತ ಹರಿದಿದೆ. ಇದಲ್ಲದೆ, ಎಲೆಕ್ಟ್ರಿಕ್ ವಾಹನಗಳು (Electric vehicle) ಕೂಡಾ ಈಗ ಗ್ರಾಹಕರ ಮುಂದಿರುವ ಉತ್ತಮ ಆಯ್ಕೆ ಎಂದರೆ ತಪ್ಪಾಗದು.  ನೀವು ಕೂಡಾ ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಬಜೆಟ್ ಗೆ ಸರಿಹೊಂದುವಂತಹ  EV ಇಲ್ಲಿದೆ. 


COMMERCIAL BREAK
SCROLL TO CONTINUE READING

ಬೆಲೆ ಕೇವಲ 4.5 ಲಕ್ಷ ರೂ : 
ಮುಂಬೈ ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್‌ಅಪ್ , ವಿಶ್ವದ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರನ್ನು ತಯಾರಿಸಿರುವುದಾಗಿ ಹೇಳಿದೆ (Cheapest electric car). ಸ್ಟಾರ್ಮ್ ಮೋಟಾರ್ಸ್ ಹೆಸರಿನ ಈ ಸ್ಟಾರ್ಟ್‌ಅಪ್, ಸ್ಟಾರ್ಮ್ R3 (Storm R3) ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ಕೇವಲ 4.5 ಲಕ್ಷ ರೂ. ಮುಂಬೈ ಮೂಲದ ಸ್ಟಾರ್ಮ್ ಮೋಟಾರ್ಸ್ ಈ ಎಲೆಕ್ಟ್ರಿಕ್ ಕಾರಿನ ಬುಕ್ಕಿಂಗ್ ಆರಂಭಿಸಿದೆ (Storm R3 Booking). ಗ್ರಾಹಕರು ಕೇವಲ 10,000 ರೂಪಾಯಿ ಟೋಕನ್ ಮೊತ್ತ ಪಾವತಿಸಿ, Storm R3 ಅನ್ನು ಬುಕ್ ಮಾಡಬಹುದು. ಕಂಪನಿಯು ಈ ಕಾರನ್ನು ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ.  ಈ ಕಾರನ್ನು ಸಿಂಗಲ್ ಚಾರ್ಜ್‌ನಲ್ಲಿ 50 ಕಿಮೀ ವರೆಗೆ ಓಡಿಸಬಹುದು.


ಇದನ್ನೂ ಓದಿ :  PM Jan Dhan ಖಾತೆದಾರರು ಈ ತಿಂಗಳಲ್ಲಿಯೇ ಮಾಡಿ ಮುಗಿಸಬೇಕು ಈ ಕೆಲಸ ಇಲ್ಲವಾದರೆ ಆಗಲಿದೆ ನಷ್ಟ


ಮೂರು ಚಕ್ರವಿರುವ ಕಾರು : 
ಮೊದಲ ಹಂತದಲ್ಲಿ, ಈ ಎಲೆಕ್ಟ್ರಿಕ್ ಕಾರನ್ನು ದೆಹಲಿ-ಎನ್‌ಸಿಆರ್ ಮತ್ತು ಮುಂಬೈ (Mumbai) ಗ್ರಾಹಕರಿಗೆ ಮಾತ್ರ ಪರಿಚಯಿಸಲಾಗಿದೆ. ಕಂಪನಿಯ ವೆಬ್‌ಸೈಟ್ ಪ್ರಕಾರ, ಮುಂಬೈ, ಥಾಣೆ, ನವಿ ಮುಂಬೈ, ನವದೆಹಲಿ, ಗುರುಗ್ರಾಮ್ ಮತ್ತು ನೋಯ್ಡಾ ಗ್ರಾಹಕರು ಪ್ರಸ್ತುತ ಈ EV ಖರೀದಿಸಬಹುದು. ಈ ಎಲೆಕ್ಟ್ರಿಕ್ ಕಾರು  (Electric Car) ಸಾಕಷ್ಟು ವಿಶಿಷ್ಟವಾಗಿದೆ ಮತ್ತು ನೋಟದಲ್ಲಿ ಆಕರ್ಷಕವಾಗಿದೆ. ಈ EV ಮೂರು ಚಕ್ರಗಳೊಂದಿಗೆ ಬರುತ್ತದೆ ಆದರೆ ಇದನ್ನು ಮೂರು-ಚಕ್ರ ವಾಹನದ ಸಾಲಿನಲ್ಲಿ ಪರಿಗಣಿಸುವುದಿಲ್ಲ. ಏಕೆಂದರೆ ಮೂರು-ಚಕ್ರ ವಾಹನದ ಮುಂಭಾಗದಲ್ಲಿ 1 ಚಕ್ರವನ್ನು ಹೊಂದಿದೆ. ಆದರೆ ಈ ಕಾರಿನ ಹಿಂದಿನ ಭಾಗದಲ್ಲಿ ಒಂದು ಚಕ್ರವನ್ನು ನೀಡಲಾಗಿದೆ.


ಇದನ್ನೂ ಓದಿ :   Arecanut Today Price: ರಾಜ್ಯದಲ್ಲಿ ರಾಶಿ ಅಡಿಕೆಗೆ ಬಂಪರ್ ಧಾರಣೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.