IPL 2022: ದೆಹಲಿ ಕ್ಯಾಪಿಟಲ್ಸ್ ಬಸ್ ಮೇಲೆ ದಾಳಿ! ದಾಳಿಕೋರರನ್ನು ಬಂಧಿಸಿದ ಪೊಲೀಸರು

IPL 2022: ಐಪಿಎಲ್ 2022 ರ ಮೊದಲು, ಆಟಗಾರರ ಭದ್ರತೆಯಲ್ಲಿ ದೊಡ್ಡ ಲೋಪವು ಮುನ್ನೆಲೆಗೆ ಬಂದಿದೆ. 5 ರಿಂದ 6 ಜನರು ದೆಹಲಿ ಕ್ಯಾಪಿಟಲ್ಸ್ ಬಸ್ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ.

Written by - Zee Kannada News Desk | Last Updated : Mar 16, 2022, 12:13 PM IST
  • ದೆಹಲಿ ಕ್ಯಾಪಿಟಲ್ಸ್ ಬಸ್ ಮೇಲೆ ದಾಳಿ
  • ದೆಹಲಿ ಕ್ಯಾಪಿಟಲ್ ಐಪಿಎಲ್ ತಂಡದ ನಿಂತಿದ್ದ ಬಸ್ ಮೇಲೆ ದಾಳಿ
  • ದಾಳಿಕೋರರ ವಿರುದ್ಧ ಎಫ್ಐಆರ್ ದಾಖಲು
IPL 2022: ದೆಹಲಿ ಕ್ಯಾಪಿಟಲ್ಸ್ ಬಸ್ ಮೇಲೆ ದಾಳಿ! ದಾಳಿಕೋರರನ್ನು ಬಂಧಿಸಿದ ಪೊಲೀಸರು  title=
IPL 2022: Delhi Capitals Bus attacked

ನವದೆಹಲಿ: ಐಪಿಎಲ್ ಸೀಸನ್ 15 ಮಾರ್ಚ್ 26 ರಿಂದ ಆರಂಭವಾಗಲಿದೆ. ಎಲ್ಲಾ ತಂಡಗಳ ಸಿದ್ಧತೆಗಳು ಭರದಿಂದ ಸಾಗಿವೆ. ಈ ಬಾರಿ ಎಲ್ಲಾ ಪಂದ್ಯಗಳು ಮುಂಬೈ ಮತ್ತು ಪುಣೆಯಲ್ಲಿ ನಡೆಯಲಿವೆ. ಮುಂಬೈನ ಮೂರು ಸ್ಟೇಡಿಯಂಗಳಲ್ಲಿ ಅಂದರೆ ವಾಂಖೆಡೆ, ಬ್ರಾಬನ್ ಮತ್ತು ಡಿವೈ ಪಾಟೀಲ್‌ನಲ್ಲಿ ಪಂದ್ಯಗಳು ನಡೆಯಲಿವೆ. ಇದಕ್ಕಾಗಿ ಎಲ್ಲಾ ತಂಡಗಳ ಆಟಗಾರರು ಮುಂಬೈ ಕಡೆ ಪ್ರಯಾಣಿಸುತ್ತಿದ್ದಾರೆ. ಇದೆಲ್ಲದರ ನಡುವೆ ಆಟಗಾರರ ಭದ್ರತೆಯಲ್ಲಿ ಭಾರೀ ಲೋಪ ಮುನ್ನೆಲೆಗೆ ಬಂದಿದೆ.

ದೆಹಲಿ ಕ್ಯಾಪಿಟಲ್ಸ್ (Delhi Capitals) ತಂಡದ ಬಸ್ ಮೇಲೆ ದಾಳಿ ಮಾಡಿದ ಆರೋಪದ ಮೇಲೆ ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿರುವುದಾಗಿ ಮುಂಬೈ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಇದನ್ನೂ ಓದಿ- IPL 2022: ಐಪಿಎಲ್‌ನಲ್ಲಿ ಎಚ್ಚರಿಕೆ ವಹಿಸದಿದ್ದರೆ ಆಘಾತ ಗ್ಯಾರಂಟಿ! ಪ್ಲೇಯರ್ಸ್ ತಪ್ಪಿಗೆ ಬಿಸಿಸಿಐ ವಿಧಿಸುವ ದಂಡ ಎಷ್ಟು ಗೊತ್ತಾ?

ದೆಹಲಿ ಕ್ಯಾಪಿಟಲ್ಸ್ ಬಸ್ ಮೇಲೆ ದಾಳಿ:
ಮಾರ್ಚ್ 16 ರಂದು, ಠಾಕ್ರೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯಗಳಿಗೆ ಆಟಗಾರರನ್ನು ಕರೆತರಲು 5-ಸ್ಟಾರ್ ಹೋಟೆಲ್‌ನ ಹೊರಗೆ ನಿಲ್ಲಿಸಿದ್ದ ಐಷಾರಾಮಿ ಬಸ್‌ನ ಗಾಜುಗಳನ್ನು ಒಡೆದು ದುಷ್ಕೃತ್ಯ ಮೆರೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ದೆಹಲಿ ಕ್ಯಾಪಿಟಲ್ ಐಪಿಎಲ್ ತಂಡದ ನಿಂತಿದ್ದ ಬಸ್ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ಐಪಿಸಿಯ 143,147,149,427 ಸೆಕ್ಷನ್‌ಗಳ ಅಡಿಯಲ್ಲಿ 5-6 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಎನ್‌ಐ ಟ್ವೀಟ್ ಮಾಡಿದೆ.

ಇದನ್ನೂ ಓದಿ- IPL 2022: ಐಪಿಎಲ್ 2022ರ ನಿಯಮಗಳಲ್ಲಿ ಬದಲಾವಣೆ

ದೆಹಲಿ ತಂಡ ಈ ಹೋಟೆಲ್‌ನಲ್ಲಿ ತಂಗಿದೆ:
ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ ತಾಜ್ ಪ್ಯಾಲೇಸ್ ಎಂಬ ಹೋಟೆಲ್‌ನಲ್ಲಿ ದೆಹಲಿ ತಂಡ ತಂಗಿದೆ. ಪ್ರಸಿದ್ಧವಾದ 'ಗೇಟ್‌ವೇ ಆಫ್ ಇಂಡಿಯಾ' ಈ ಹೋಟೆಲ್‌ಗೆ ತುಂಬಾ ಹತ್ತಿರದಲ್ಲಿದೆ ಮತ್ತು ಇದು ವಾಂಖೆಡೆ ಸ್ಟೇಡಿಯಂಗೆ ಕೂಡ ಹತ್ತಿರದಲ್ಲಿದೆ. 

ಗಮನಾರ್ಹವಾಗಿ, ದೆಹಲಿ ಕ್ಯಾಪಿಟಲ್ಸ್ ಕಳೆದ ವಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಗಾಗಿ ತಮ್ಮ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿತ್ತು. ಇದರಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್, ವೇಗದ ಬೌಲರ್ ಅನ್ರಿಚ್ ನಾರ್ಟ್ಜೆ ಮತ್ತು ಹೊಸ ಆಟಗಾರ ಡೇವಿಡ್ ವಾರ್ನರ್ ಹೊಸ ಜೆರ್ಸಿಯೊಂದಿಗೆ ಪೋಸ್ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News