ನವದೆಹಲಿ: ನೈಸರ್ಗಿಕ ಅನಿಲದ (ಸಿಎನ್‌ಜಿ) ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ದೆಹಲಿ-ಎನ್‌ಸಿಆರ್‌ನಲ್ಲಿ ಪ್ರತಿ ಕೆಜಿಗೆ 2 ರೂ.ಗಳಷ್ಟು ಹೆಚ್ಚಳವಾಗಿದೆ. ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ದೇಶದ ಇತರ ಭಾಗಗಳಲ್ಲಿಯೂ CNG ಬೆಲೆಯನ್ನು ಹೆಚ್ಚಿಸಿದೆ. ಸಿಎನ್‌ಜಿಯ ಹೊಸ ದರಗಳು ಇಂದು ಅಂದರೆ ಭಾನುವಾರ ಬೆಳಗ್ಗೆಯಿಂದಲೇ ಜಾರಿಗೆ ಬಂದಿದೆ.


COMMERCIAL BREAK
SCROLL TO CONTINUE READING

ದೆಹಲಿ-ಎನ್‌ಸಿಆರ್‌ನಲ್ಲಿ ಈಗ ಸಿಎನ್‌ಜಿ ಬೆಲೆ ಎಷ್ಟು?


ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್‍ನ ದರ ಹೆಚ್ಚಳದ ನಂತರ, ಸಿಎನ್‌ಜಿ ಬೆಲೆ ಈಗ ದೆಹಲಿಯಲ್ಲಿ ಕೆಜಿಗೆ 73.61 ರೂ., ನೋಯ್ಡಾದಲ್ಲಿ ಕೆಜಿಗೆ 76.17 ರೂ. ಮತ್ತು ಗುರುಗ್ರಾಮ್‌ನಲ್ಲಿ ಕೆಜಿಗೆ 81.94 ರೂ. ಆಗಿದೆ.


ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್‍ನಿಂದ ದರ ಪರಿಷ್ಕರಣೆ


Money Earning: ಕೇವಲ ಮೂರು ತಿಂಗಳಲ್ಲಿ ಈ ಕೆಲಸ ಮಾಡಿ ಮೂರು ಲಕ್ಷ ಸಂಪಾದಿಸಿ


ಸಿಟಿ ಗ್ಯಾಸ್ ವಿತರಕರಿಂದ ಬೆಲೆ ಹೆಚ್ಚಳ


ಕಳೆದ ವರ್ಷ ಅಕ್ಟೋಬರ್‌ನಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ಅನಿಲ ಬೆಲೆಗಳು ಏರಲು ಪ್ರಾರಂಭಿಸಿದಾಗ ನಗರ ಪ್ರದೇಶದ ಗ್ಯಾಸ್ ವಿತರಕರು ಕಾಲಕಾಲಕ್ಕೆ ಬೆಲೆಗಳನ್ನು ಹೆಚ್ಚಿಸುತ್ತಿದ್ದಾರೆ.


ಈ ಮೊದಲು ಯಾವಾಗ ಬೆಲೆ ಹೆಚ್ಚಳವಾಗಿತ್ತು?


ಇದಕ್ಕೂ ಮೊದಲು ದೆಹಲಿ-ಎನ್‌ಸಿಆರ್‌ನಲ್ಲಿ ಸಿಎನ್‌ಜಿ ಬೆಲೆಯನ್ನು ಏಪ್ರಿಲ್ 14ರಂದು ಹೆಚ್ಚಿಸಲಾಗಿತ್ತು. ಅಂದು ಸಿಎನ್‌ಜಿ ದರವನ್ನು ಕೆಜಿಗೆ 2.50 ರೂ. ಹೆಚ್ಚಳ ಮಾಡಲಾಗಿತ್ತು. ಏಪ್ರಿಲ್ 14ರಂದು ದೆಹಲಿಯಲ್ಲಿ ಸಿಎನ್‌ಜಿ ಬೆಲೆ ಕೆಜಿಗೆ 69.11 ರಿಂದ 71.61 ಕ್ಕೆ ಏರಿಕೆಯಾಗಿದೆ. ನೈಸರ್ಗಿಕ ಅನಿಲವನ್ನು ‘ಸಂಕುಚಿತಗೊಳಿಸಿದಾಗ’ ಅದು CNG ಆಗುತ್ತದೆ, ಇದನ್ನು ವಾಹನಗಳಲ್ಲಿ ಇಂಧನವಾಗಿ ಬಳಸಲಾಗುತ್ತದೆ.


ಇದನ್ನೂ ಓದಿ: Bank-Post Office ವಹಿವಾಟಿನ ನಿಯಮಗಳಲ್ಲಿ ಬದಲಾವಣೆ, ನಿಮಗೂ ತಿಳಿದಿರಲಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.