Corona Impact: ಕೊರೊನಾ ಎರಡನೇ ಅಲೆ, 5 ಲಕ್ಷ ಕೋಟಿ ರೂ. ವಾಣಿಜ್ಯ ನಷ್ಟ
Corona Impact: ಕರೋನಾದ ಎರಡನೇ ಅಲೆ 5 ಲಕ್ಷ ಕೋಟಿ ರೂ.ಗಳ ವಾಣಿಜ್ಯ ನಷ್ಟಕ್ಕೆ ಕಾರಣವಾಗಿದೆ, ಇದರಲ್ಲಿ ಪ್ರಾಣ (Covid-19 Cases In India) ಮತ್ತು ಆಸ್ತಿಪಾಸ್ತಿ ನಷ್ಟವಾಗಿದೆ. ಕೇವಲ ರಾಷ್ಟ್ರ ರಾಜಧಾನಿ ದೆಹಲಿ 25 ಸಾವಿರ ಕೋಟಿ ರೂ. ವಾಣಿಜ್ಯ ನಷ್ಟ ಅನುಭವಿಸಿದೆ.
Corona Impact: ಕರೋನಾದ ಎರಡನೇ ಅಲೆ (COVID-19) ದೇಶಾದ್ಯಂತ ಹಾನಿಯನ್ನುಂಟು ಮಾಡಿದೆ. ಕರೋನಾದ ಈ ಸುನಾಮಿಯಲ್ಲಿ ದೇಶದ ವಾಣಿಜ್ಯ ಕ್ಷೇತ್ರ ಭಾರಿ ನಷ್ಟವನ್ನು (Business Loss) ಅನುಭವಿಸುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಘೋಷಣೆಯ ಹಿನ್ನೆಲೆ ಅಂಗಡಿ ಮುಂಗಟ್ಟುಗಳ ಶಟರ್ ಡೌನ್ ಮಾಡಲಾಗಿದೆ. ಇದರಿಂದ ವ್ಯಾಪಾರಿಗಳಿಗೆ ಭಾರಿ ಪ್ರಮಾಣದ ನಷ್ಟ ಉಂಟಾಗಿದೆ. ದೆಹಲಿ ಮತ್ತು ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲಾಕ್‌ಡೌನ್, ಅನೇಕ ರಾಜ್ಯಗಳಲ್ಲಿ ಕರೋನಾದಿಂದ ರಾತ್ರಿ ಕರ್ಫ್ಯೂ, ವಾರಾಂತ್ಯದ ಲಾಕ್‌ಡೌನ್, ಭಾಗಶಃ ಲಾಕ್‌ಡೌನ್ (Lockdown) ಮತ್ತು ವಿವಿಧ ನಿರ್ಬಂಧಗಳು ವಿಧಿಸಿರುವ ಹಿನ್ನೆಲೆ ದೇಶದಲ್ಲಿ 5 ಲಕ್ಷ ಕೋಟಿ ರೂ.ಗಳ ವಾಣಿಜ್ಯ ನಷ್ಟಕ್ಕೆ ಕಾರಣವಾಗಿದೆ ಎಂದು ದೇಶದ ವ್ಯಾಪಾರಿಗಳ ಸಂಘಟನೆಯಾಗಿರುವ ಕ್ಯಾಟ್ (CAIT) ವರದಿ ಮಾಡಿದೆ.
ಈ ಐದು ಕೋಟಿ ರೂ ವಾಣಿಜ್ಯ ನಷ್ಟದಲ್ಲಿ ಚಿಲ್ಲರೆ ವ್ಯಾಪಾರ ವಿಭಾಗ 3.5 ಲಕ್ಷ ಕೋಟಿ ರೂ ಅನುಭವಿಸಿದ್ದರೆ, ಸಗಟು ವ್ಯಾಪಾರ ವಿಭಾಗ 1.5 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಅಂದಾಜಿಸಲಾಗಿದೆ. ಕೊರೋನಾ ಭೀತಿಯ ಹಿನ್ನೆಲೆ ದೇಶದ ಶೇ.80 ರಷ್ಟು ಜನರು ಶಾಪಿಂಗ್ ಗಾಗಿ ಮಾರುಕಟ್ಟೆಗೆ ಬರುತ್ತಿಲ್ಲ ಎಂದು ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಹೇಳಿದೆ. ಕ್ಯಾಟ್ ನ ಸಂಶೋಧನಾ ವಿಭಾಗವಾಗಿರುವ ಕ್ಯಾಟ್ ರಿಸರ್ಚ್ ಅಂಡ್ ಟ್ರೇಡ್ ಡೆವಲಪ್ಮೆಂಟ್ ಸೊಸೈಟಿ ಮೂಲಕ ವಿಭಿನ್ನ ರಾಜ್ಯಗಳ ವ್ಯಾಪಾರಿ ಸಂಘಟನೆಗಳ ಜೊತೆಗೆ ಮಾತುಕತೆ ನಡೆಸುವ ಮೂಲಕ ಈ ಹಾನಿಯ ಅಂದಾಜು ವ್ಯಕ್ತಪಡಿಸಿದೆ ಎಂಬುದು ಇಲ್ಲಿ ಗಮನಾರ್ಹ.
25 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದ ದೆಹಲಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಕೂಡ ಕೊರೊನಾ ಭಾರಿ ಹಾನಿಗೆ ಕಾರಣವಾಗಿದೆ. ಕಳೆದ ಕೆಲ ದಿನಗಳಿಂದ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಿತ್ಯ ಸರಾಸರಿ 20 ರಿಂದ 22 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಪಾಸಿಟಿವಿಟಿ ದರದಲ್ಲಿ ನಿರಂತರ ಏರಿಕೆಯಾಗುತ್ತಿರುವುದು ದುಃಖದ ವಿಷಯವಾಗಿದೆ. ಈ ಪರಿಸ್ಥಿತಿ ಹಿನ್ನೆಲೆ ರಾಜ್ಯದ ಕೆಜ್ರಿವಾಲ್ ನೇತೃತ್ವದ ಸರ್ಕಾರ ಎರಡು ವಾರಗಳ ಲಾಕ್ ಡೌನ್ ಘೋಷಿಸಿದೆ. ಈ ಲಾಕ್ ಡೌನ್ ನಿಂದ ದೆಹಲಿಯ ವ್ಯಾಪಾರ ಹಾಗೂ ವ್ಯಾಪಾರಿಗಳಿಗೆ ಭಾರಿ ಉಂಟಾಗಿದೆ. ಕೇವಲ ದೆಹಲಿ ಒಂದರಲ್ಲೇ ಸುಮಾರು 25 ಸಾವಿರ ಕೋಟಿ ರೂ. ಹಾನಿಯಾಗಿದೆ ಎಂದು ಕ್ಯಾಟ್ ತನ್ನ ವರದಿಯಲ್ಲಿ ತಿಳಿಸಿದೆ. ಇದರಲ್ಲಿ 15 ಸಾವಿರ ಕೋಟಿ ರೂ. ಚಿಲ್ಲರೆ ವ್ಯಾಪಾರ ವಲಯಕ್ಕೆ ಹಾನಿಯಾದರೆ, ಸಗಟು ವ್ಯಾಪಾರ ವಿಭಾಗ 10 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದೆ.
ಇದನ್ನೂ ಓದಿ- RBI Alert! ದೇಶಾದ್ಯಂತ ಹಣದುಬ್ಬರ ಹೆಚ್ಚಾಗಲಿದೆ, ಕಾರಣ ಇಲ್ಲಿದೆ
ಕೊರೊನಾ ಮಹಾಮಾರಿಯ ಕಾರಣ ಸಾಮಾನ್ಯ ಜನರು ಇ-ಕಾಮರ್ಸ್ ತಾಣಗಳ ಮೂಲಕ ಅತ್ಯಾವಶ್ಯಕ ವಸ್ತುಗಳನ್ನು ತರಿಸಿಕೊಲ್ಲುತ್ತಿದ್ದಾರೆ. ಲಾಕ್ ಡೌನ್ ಹಿನ್ನೆಲೆ ಅವರು ಕೇವಲ ತಮ್ಮ ಮನೆ ಹತ್ತಿರದ ಅಂಗಡಿಯವರೆಗೆ ಮಾತ್ರ ಹೋಗಲು ಅವಕಾಶ ಸಿಗುತ್ತಿದೆ. ಲಾಕ್ ಡೌನ್ ಕಾರಣ ದೆಹಲಿಯಲ್ಲಿ ಅಂತರಾಜ್ಯ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿದೆ. ಗ್ರಾಹಕರಷ್ಟೇ ಅಲ್ಲ ವ್ಯಾಪಾರಿಗಳು ಕೂಡ ಕೊರೊನಾ ಸುನಾಮಿಗೆ ಬೆಚ್ಚಿಬಿದ್ದಿದ್ದಾರೆ.
ಇದನ್ನೂ ಓದಿ- ರಾಜ್ಯದಲ್ಲಿ ಇಂದು ರಾತ್ರಿ 9 ರಿಂದ 'ಸಂಪೂರ್ಣ ಲಾಕ್‌ಡೌನ್' : ಯಾವುದುಕ್ಕೆಲ್ಲ ನಿರ್ಬಂಧವಿದೆ?
ದಾರಿತಪ್ಪಿದ ವೈದ್ಯಕೀಯ ವ್ಯವಸ್ಥೆಯ ಹಿನ್ನೆಲೆ ಒಂದು ವೇಳೆ ಅಂಗಡಿ ತೆರೆದರೆ, ಸಿಬ್ಬಂದಿಯಾಗಲಿ ಅಥವಾ ಗ್ರಾಹಕರಾಗಲಿ ಕೊರೊನಾ (Coronavirus In India) ದಾಳಿಗೆ ತುತ್ತಾಗಬಹುದು ಎಂಬ ಭಯ ಅವರಿಗೆ ಕಾಡಲಾರಂಭಿಸಿದೆ. ಈ ಬಾರಿಯ ಎರಡನೇ ಅಲೆಯಲ್ಲಿ ದೆಹಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಿಗಳು ಕೊರೊನಾ ಸೋಂಕಿನಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕ್ಯಾಟ್ ವರದಿ ಮಾಡಿದೆ.
ಇದನ್ನೂ ಓದಿ- ಮನೆಗಳಲ್ಲಿಯೂ Face Mask ಧರಿಸುವ ಕಾಲ ಬಂದಿದೆ, ನೀತಿ ಆಯೋಗದ ಸದಸ್ಯ ವಿ.ಕೆ ಪಾಲ್ ಎಚ್ಚರಿಕೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.