Dhanatrayodashi 2021: ಈ ಬಾರಿಯ ಧನತ್ರಯೋದಶಿಯ ದಿನದಂದು ಶೇ.20 ಡಿಸ್ಕೌಂಟ್ ನಲ್ಲಿ ಚಿನ್ನದ ನಾಣ್ಯ ಖರೀದಿಗೆ ಅವಕಾಶ
Dhanatrayodashi 2021 Shopping - ಧನತ್ರಯೋದಶಿಯ ದಿನ ಖರೀದಿಗೆ ಮಂಗಳಕರ ದಿನ ಎಂದು ಹೇಳಲಾಗುತ್ತದೆ. ನೀವು ಸಹ ಚಿನ್ನದ ನಾಣ್ಯಗಳನ್ನು ಖರೀದಿಸಲು ಬಯಸಿದರೆ, Amazon ನ ಮಾರಾಟದಲ್ಲಿ ಚಿನ್ನದ ನಾಣ್ಯಗಳ ಮೇಲೆ 20% ವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ.
ನವದೆಹಲಿ: Dhanteras 2021 Shopping - ಈ ವರ್ಷ ಧನತ್ರಯೋದಶಿ (Dhanatrayodashi 2021) ನವೆಂಬರ್ 2 ರಂದು ಆಚರಿಸಲಾಗುತ್ತದೆ. ಈ ಬಾರಿಯ ಧನತ್ರಯೋದಶಿಯ ದಿನ ನೀವೂ ಕೂಡ ನಿಮ್ಮ ಮನೆಗೆ ಚಿನ್ನದ ನಾಣ್ಯಗಳನ್ನು (Gold Coins) ತರಲು ನೀವು ಯೋಚಿಸುತ್ತಿದ್ದರೆ, ನಾವು ನಿಮಗಾಗಿ ಕೆಲವು ಅದ್ಭುತ ಆಯ್ಕೆಗಳನ್ನು ತಂದಿದ್ದೇವೆ. ಧನತ್ರಯೋದಶಿಯ ಸಂದರ್ಭದಲ್ಲಿ, ಅಮೆಜಾನ್‌ನ (Amazon) ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ (Great Indian Festival Sale) ನಿಜವಾದ ಚಿನ್ನದ ನಾಣ್ಯಗಳು 20% ವರೆಗೆ ರಿಯಾಯಿತಿಯನ್ನು ನೀವು ಪಡೆಯಬಹುದು. ಈ ಕುರಿತು ಹೆಚ್ಚಿನ ವಿವರ ತಿಳಿಯೋಣ ಬನ್ನಿ.
24 ಕ್ಯಾರೆಟ್ ನ 2 ಗ್ರಾಂ ಚಿನ್ನದ ನಾಣ್ಯ - Malabar Gold and Diamonds ಒಂದು ಪ್ರಸಿದ್ಧ ಬ್ರಾಂಡ್ ಆಗಿದೆ. Amazon ನಲ್ಲಿ ಅದರ 24k 2 ಗ್ರಾಂ ಚಿನ್ನದ ನಾಣ್ಯಗಳ ಮೇಲೆ ನೀವು ದೊಡ್ಡ ರಿಯಾಯಿತಿಗಳನ್ನು ಪಡೆಯಬಹುದು. ದೇವಿ ಲಕ್ಷ್ಮಿಯ ಚಿತ್ರವಿರುವ ಈ ನಾಣ್ಯವನ್ನು ನೀವು 5,714 ರೂಪಾಯಿಗಳ ಬದಲಿಗೆ 5,412 ರೂಪಾಯಿಗೆ ಖರೀದಿಸಬಹುದು. ನೀವು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ ನೀವು 1,500 ರೂ.ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಈ ರೀತಿಯಾಗಿ ನೀವು 4 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ 24k ಚಿನ್ನದ ನಾಣ್ಯವನ್ನು ಮನೆಗೆ ತೆಗೆದುಕೊಂಡು ಹೋಗಬಹುದು.
24 ಕ್ಯಾರೆಟ್ ನ (24k Gold Coin) ಒಂದು ಗ್ರಾಂ ಚಿನ್ನದ ನಾಣ್ಯ - MMTC-PAMP ಕಂಪನಿಯ 1 ಗ್ರಾಂ ಚಿನ್ನದ ನಾಣ್ಯವನ್ನು ನೀವು ಅಮೆಜಾನ್ ನಲ್ಲಿ 6,330ರೂ.ಗಳ ಬದಲಾಗಿ 5,495 ರೂ.ಗಳಿಗೆ ಖರೀದಿಸಬಹುದು. ಕಮಲದ ಚಿತ್ರವಿರುವ ಈ ನಾಣ್ಯದ ಮೇಲೆ ನೀವು ಅನೇಕ ಬ್ಯಾಂಕ್ ಕೊಡುಗೆಗಳನ್ನು ಸಹ ಪಡೆಯಬಹುದು ನೀವು ICICI ಬ್ಯಾಂಕ್ ಡೆಬಿಟ್ ಕಾರ್ಡ್ ಬಳಸಿದರೆ, ನಂತರ ನೀವು 549.50 ರೂ.ವರೆಗೆ ರಿಯಾಯಿತಿಯನ್ನು ಪಡೆಯಬಹುದು.
24 ಕ್ಯಾರೆಟ್ ನ ಎರಡು ಗ್ರಾಂನ ಹಳದಿ ಚಿನ್ನದ ನಾಣ್ಯ (2g Gold Coin) - Kalyan Jewellers ಕ್ಯಾಂಡೆರೆ ಶ್ರೇಣಿಯಿಂದ ನೀವು 24k ಹಳದಿ ಚಿನ್ನದ ನಾಣ್ಯ 2 ಗ್ರಾಂ ಮೇಲೆ 24% ರಿಯಾಯಿತಿಯನ್ನು ಪಡೆಯಬಹುದು. ಇದರ ಮೂಲ ಬೆಲೆ ರೂ 13,871 ಆಗಿದ್ದರೆ ನೀವು ಅದನ್ನು ರೂ 10,565 ಕ್ಕೆ ಮನೆಗೆ ತೆಗೆದುಕೊಂಡು ಹೋಗಬಹುದು. ನೀವು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ, ನಿಮಗೆ ಒಂದು ಸಾವಿರ ರೂಪಾಯಿಗಳವರೆಗೆ ರಿಯಾಯಿತಿ ಸಿಗುತ್ತದೆ. ಇಂತಹ ಇನ್ನೂ ಹಲವು ಬ್ಯಾಂಕ್ ಕೊಡುಗೆಗಳು ಈ ಡೀಲ್‌ನಲ್ಲಿ ಸೇರಿವೆ.
24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ನಾಣ್ಯ- Muthoot Gold Bullion Corporation ಲಕ್ಷ್ಮಿ ದೇವಿ ಇರುವ 24 ಕ್ಯಾರೆಟ್ ಚಿನ್ನದ 1 ಗ್ರಾಂ ಹಳದಿ ಚಿನ್ನದ ನಾಣ್ಯವನ್ನು ನೀವು ರೂ 5,750 ರ ಬದಲಿಗೆ ರೂ 5,488 ಕ್ಕೆ ಪಡೆಯಬಹುದು. ನೀವು ICICI ಬ್ಯಾಂಕ್ ಡೆಬಿಟ್ ಕಾರ್ಡ್ ಅನ್ನು ಬಳಸಿದರೆ, ನಂತರ ನೀವು ರೂ 548.80 ವರೆಗೆ ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು.
ಇದನ್ನೂ ಓದಿ-Change Bank Branch: ಈ ವಿಧಾನವನ್ನು ಅನುಸರಿಸಿ ಕುಳಿತಲ್ಲೇ ಬ್ಯಾಂಕ್ ಬ್ರಾಂಚ್ ಬದಲಾಯಿಸಬಹುದು
24 ಕ್ಯಾರೆಟ್ ನ 10 ಗ್ರಾಂ ಹಳದಿ ಚಿನ್ನದ ನಾಣ್ಯ - Malabar Gold and Diamonds ಕಂಪನಿಯ ಲಕ್ಷ್ಮಿ ದೇವಿ ಚಿತ್ರವಿರುವ 24k ಚಿನ್ನದ ನಾಣ್ಯಗಳನ್ನು ನೀವು ಕಡಿಮೆ ಬೆಲೆಗೆ ಖರೀದಿಸಬಹುದು. ಈ ಚಿನ್ನದ ನಾಣ್ಯವು 10 ಗ್ರಾಂ ತೂಗುತ್ತದೆ ಮತ್ತು ಇದರ ನಿಜವಾದ ಬೆಲೆ 54,500 ರೂ. ನೀವು ಇದನ್ನು ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಿಂದ ರೂ 51,865 ಕ್ಕೆ ಖರೀದಿಸಬಹುದು. ನೀವು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ, ನಂತರ ನೀವು 1,500 ರೂ.ಗಳ ರಿಯಾಯಿತಿಯನ್ನು ಪಡೆಯಬಹುದು. ಈ ಡೀಲ್‌ನಲ್ಲಿ ನೀವು ಅನೇಕ ಬ್ಯಾಂಕ್ ಕೊಡುಗೆಗಳನ್ನು ಸಹ ಕಾಣಬಹುದು.
ಅಮೆಜಾನ್ ಮಾರಾಟವು ನವೆಂಬರ್ 2 ರವರೆಗೆ ಜಾರಿಯಲ್ಲಿರಲಿದೆ. ಇಂತಹ ಪರಿಸ್ಥಿತಿಯಲ್ಲಿ ನಾಳೆಯವರೆಗೆ ಮಾತ್ರ ನೀವು ಕಡಿಮೆ ಬೆಲೆಗೆ ಚಿನ್ನದ ನಾಣ್ಯಗಳು, ಚಿನ್ನದ ತುಂಡುಗಳು ಮತ್ತು ಪೆಂಡೆಂಟ್‌ಗಳನ್ನು ಖರೀದಿಸಬಹುದು.
ಇದನ್ನೂ ಓದಿ-Gold Price Today: ಚಿನ್ನ ಖರೀದಿಸಲು ಇದು ಸೂಕ್ತ ಸಮಯವೇ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ