Gold Price Today: ಚಿನ್ನ ಖರೀದಿಸಲು ಇದು ಸೂಕ್ತ ಸಮಯವೇ..?

ಪ್ರತಿ 10 ಗ್ರಾಂ ಚಿನ್ನದ ಬೆಲೆಯು ಭಾರತೀಯ ಮಾರುಕಟ್ಟೆಯಲ್ಲಿ 47,700 ರೂ.ಗಿಂತಲೂ ಕಡಿಮೆಯಾಗಿದೆ. ದಾಖಲೆಯ ಗರಿಷ್ಠ ಮಟ್ಟದಿಂದ ಚಿನ್ನದ ದರವು ಸುಮಾರು 9,500 ರೂ. ಕಡಿಮೆಯಾಗಿದೆ.

Written by - Puttaraj K Alur | Last Updated : Nov 1, 2021, 01:05 PM IST
  • ಚಿನ್ನ ಖರೀದಿಗೆ ಇದೇ ಸೂಕ್ತ ಸಮಯವೆಂದು ಮಾರುಕಟ್ಟೆ ತಜ್ಞರು ಸಲಹೆ ನೀಡಿದ್ದಾರೆ
  • ಧಂತೇರಸ್‌ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿ ಜೋರಾಗಿದೆ
  • ಡಿಜಿಟಲ್ ಗೋಲ್ಡ್ ಖರೀದಿಸುವುದು ಭವಿಷ್ಯದಲ್ಲಿ ಹೆಚ್ಚಿನ ಲಾಭವಾಗಲಿದೆ
Gold Price Today: ಚಿನ್ನ ಖರೀದಿಸಲು ಇದು ಸೂಕ್ತ ಸಮಯವೇ..?  title=
ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿ ಜೋರಾಗಿದೆ

ನವದೆಹಲಿ: ಬೆಲೆಬಾಳುವ ಲೋಹವನ್ನು ಖರೀದಿಸಲು ಮಂಗಳಕರ ಸಂದರ್ಭವೆಂದು ಪರಿಗಣಿಸಲಾದ ಧಂತೇರಸ್‌(Dhanteras 2021)ಗಿಂತ ಮುಂಚಿತವಾಗಿ ಭಾರತದಲ್ಲಿ ಚಿನ್ನದ ಬೆಲೆ ಗಮನಾರ್ಹ ಕುಸಿತವನ್ನು ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಕುಸಿದಿರುವುದೇ ಇದಕ್ಕೆ ಕಾರಣ. ಕಳೆದ ಕೆಲವು ದಿನಗಳಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ 530 ರೂಪಾಯಿ ಇಳಿಕೆಯಾಗಿದೆ. ಮುಂಬೈ, ದೆಹಲಿ ಮತ್ತು ಇತರ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ ತಿಳಿದುಬಂದಿದೆ.

ವರದಿಗಳ ಪ್ರಕಾರ ಪ್ರತಿ 10 ಗ್ರಾಂ ಚಿನ್ನದ ಬೆಲೆ(Gold Price)ಯು ಭಾರತೀಯ ಮಾರುಕಟ್ಟೆಯಲ್ಲಿ 47,700 ರೂ.ಗಿಂತಲೂ ಕಡಿಮೆಯಾಗಿದೆ. ದಾಖಲೆಯ ಗರಿಷ್ಠ ಮಟ್ಟದಿಂದ ಚಿನ್ನದ ದರವು ಸುಮಾರು 9,500 ರೂ. ಕಡಿಮೆಯಾಗಿದೆ. ಬೆಳಕಿನ ಹಬ್ಬ ದೀಪಾವಳಿ ಮತ್ತು ಧಂತೇರಸ್‌ ನಲ್ಲಿ ಭಾರತೀಯ ಗ್ರಾಹಕರು ಚಿನ್ನ ಖರೀದಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಚಿನ್ನದ ದರ ಗಮನಾರ್ಹ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಈಗಲೇ ಖರೀದಿ ಮಾಡುವುದು ಸೂಕ್ತವೆಂದು ಮಾರುಕಟ್ಟೆ ತಜ್ನರು ಸಲಹೆ ನೀಡಿದ್ದಾರೆ. ಡಿಜಿಟಲ್ ಗೋಲ್ಡ್ ಖರೀದಿಸುವುದು ಭವಿಷ್ಯದಲ್ಲಿ ಹೆಚ್ಚಿನ ಲಾಭ ತರಲಿದೆ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: November 2021: ನವೆಂಬರ್ ತಿಂಗಳ ಈ 6 ಮಹತ್ವದ ಬದಲಾವಣೆಗೆ ಈಗಲೇ ಸಿದ್ಧರಾಗಿ

ಮಲ್ಟಿ ಕಮೊಡಿಟಿ ಎಕ್ಸ್​ಚೇಂಜ್​ನಲ್ಲಿ (MCX) ಚಿನ್ನವು(Gold Rate Today) ಕನಿಷ್ಠ ಮಟ್ಟವನ್ನು ತಲುಪಿದೆ. 13,548 ಲಾಟ್‌ಗಳ ವ್ಯಾಪಾರ ವಹಿವಾಟಿನಲ್ಲಿ ಚಿನ್ನವು 10 ಗ್ರಾಂಗೆ ಶೇ.0.12ರಷ್ಟು ಹೆಚ್ಚಳವಾಗಿದ್ದು,  47,692 ರೂ.ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ ಗೆ ಶೇ.0.1ರಷ್ಟು ಇಳಿಕೆಯಾಗಿದ್ದು, 1,781.78 ಅಮೆರಿಕನ್ ಡಾಲರ್ ಗೆ ತಲುಪಿದೆ. ಯುಎಸ್ ಚಿನ್ನದ ಫ್ಯೂಚರ್ಸ್ ಶೇ.01 ರಷ್ಟು ಕಡಿಮೆಯಾಗಿ 1,782.80ಕ್ಕೆ ಇಳಿದಿದೆ. ವಿದೇಶಿ ವಿನಮಯ ಮಾರುಕಟ್ಟೆಯಲ್ಲಿನ ಬದಲಾವಣೆ, ಕಚ್ಚಾ ತೈಲಬೆಲೆ ಏರಿಕೆ, ಜಾಗತಿಕ ಮಟ್ಟದ ಹಣದುಬ್ಬರ ಹಾಗೂ ದುರ್ಬಲ ಡಾಲರ್​ ಕಾರಣ ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿದೆ ಎಂದು ತಿಳಿದುಬಂದಿದೆ.

ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ

ಬೆಂಗಳೂರಿನಲ್ಲಿ 22ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 44,700 ರೂ.

ದೆಹಲಿಯಲ್ಲಿ ಚಿನ್ನದ ಬೆಲೆ 10 ಗ್ರಾಂ 22 ಕ್ಯಾರೆಟ್‌ಗೆ 46,850 ರೂ.

ಮುಂಬೈನಲ್ಲಿ ಚಿನ್ನದ ದರ 10 ಗ್ರಾಂ 22 ಕ್ಯಾರೆಟ್‌ಗೆ 46,740 ರೂ.

ಚೆನ್ನೈನಲ್ಲಿ 22ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 45,010 ರೂ.

ಕೋಲ್ಕತ್ತಾದಲ್ಲಿ ಚಿನ್ನದ ದರ 10 ಗ್ರಾಂ 22 ಕ್ಯಾರೆಟ್‌ಗೆ 47,150 ರೂ.

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್‌ನ 10 ಗ್ರಾಂ 44,700 ರೂ.

ಕೇರಳದಲ್ಲಿ ಚಿನ್ನದ ಬೆಲೆ 10 ಗ್ರಾಂ 22 ಕ್ಯಾರೆಟ್‌ಗೆ 44,700 ರೂ.

ಪುಣೆಯಲ್ಲಿ ಚಿನ್ನದ ಬೆಲೆ 10 ಗ್ರಾಂ 22 ಕ್ಯಾರೆಟ್‌ಗೆ 46,050 ರೂ.

ಅಹಮದಾಬಾದ್‌ನಲ್ಲಿ ಚಿನ್ನದ ದರ 10 ಗ್ರಾಂ 22 ಕ್ಯಾರೆಟ್‌ಗೆ 45,900 ರೂ.

ಅಹಮದಾಬಾದ್‌ನಲ್ಲಿ ಚಿನ್ನದ ಬೆಲೆ 10 ಗ್ರಾಂ 22 ಕ್ಯಾರೆಟ್‌ಗೆ 45,900 ರೂ.

ಜೈಪುರದಲ್ಲಿ ಚಿನ್ನದ ದರ 10 ಗ್ರಾಂ 22 ಕ್ಯಾರೆಟ್‌ಗೆ 47,400 ರೂ.

ಲಕ್ನೋದಲ್ಲಿ ಚಿನ್ನದ ಬೆಲೆ 10 ಗ್ರಾಂ 22 ಕ್ಯಾರೆಟ್‌ಗೆ 45,500 ರೂ.

ಪಾಟ್ನಾದಲ್ಲಿ ಚಿನ್ನದ ದರ 10 ಗ್ರಾಂ 22-ಕ್ಯಾರೆಟ್‌ಗೆ 46,050 ರೂ.

ನಾಗ್ಪುರದಲ್ಲಿ ಚಿನ್ನದ ಬೆಲೆ 22-ಕ್ಯಾರೆಟ್‌ನ 10n ಗ್ರಾಂಗೆ 46,740 ರೂ. ಇದೆ.

ಇದನ್ನೂ ಓದಿ: Aadhaar Card Update: ನಿಮ್ಮ ಆಧಾರ್‌ಗೆ eSign ಅಥವಾ ಡಿಜಿಟಲ್ ಸಹಿ ಮಾಡುವುದು ಹೇಗೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News