EPFO News: 6 ಕೋಟಿ ಚಂದಾದಾರರಿಗೊಂದು ಮಹತ್ವದ ಮಾಹಿತಿ, ಆದಷ್ಟು ಬೇಗ ಈ ಕೆಲಸ ಮಾಡಿ
EPFO News - ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ತನ್ನ ಒಂದು ನಿಯಮದಲ್ಲಿ ಬದಲಾವಣೆ ಮಾಡಿದೆ. ಇದರಿಂದ ನೌಕರಿ ಮಾಡುವ ಜನರಿಗೆ ತೊಂದರೆ ಎದುರಾಗುವ ಸಾಧ್ಯತೆ ಇದೆ.
ನವದೆಹಲಿ: How To Link Aadhaar With EPFO And UAN - 6 ಕೋಟಿಗೂ ಹೆಚ್ಚು ಇಪಿಎಫ್‌ಒ (EPFO) ಸದಸ್ಯರಿಗೆ, ಜೂನ್ 1 ರಿಂದ ಕೆಲವು ನಿಯಮಗಳು ಬದಲಾಗಿವೆ. ಸಾಮಾಜಿಕ ಭದ್ರತಾ ಸಂಹಿತೆ 2020 ರ (Social Security Code 2020) ಅಡಿಯಲ್ಲಿ ಇಪಿಎಫ್‌ಒ (EPFO)ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ನಿಯಮದ ಪ್ರಕಾರ, ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ (ECR Filing Protocol) ಅಂದರೆ ಜೂನ್ 1 ರ ನಂತರ ಖಾತೆಯನ್ನು ಆಧಾರ್‌ನೊಂದಿಗೆ (Aadhaar) ಲಿಂಕ್ ಮಾಡಲಾಗದ ಖಾತೆದಾರರಿಗೆ ಇಸಿಆರ್ (ECR) ಭರ್ತಿ ಮಾಡಲಾಗುವುದಿಲ್ಲ. ಅಂದರೆ, ಅವರ ಕಂಪನಿ ನೀಡುವ ಕೊಡುಗೆ ಪಿಎಫ್ ಖಾತೆಯಲ್ಲಿ (PF Account) ಪಡೆಯುವುದು ಖಾತೆದಾರರಿಗೆ ಕಷ್ಟಕರವಾಗಲಿದೆ. ನೌಕರರು ಖಾತೆಯಲ್ಲಿ ತಮ್ಮ ಕೊಡುಗೆಯನ್ನು ಮಾತ್ರ ಪಡೆಯಬಹುದು.
EPFO ಅಧಿಕೃತ ವೆಬ್ ಸೈಟ್ ಘೆ ಭೇಟಿ ನೀಡಿ, ನಿಮ್ಮ ಖಾತೆಯನ್ನು ಮೊದಲು ಆಧಾರ್ ಜೊತೆಗೆ ಲಿಂಕ್ ಮಾಡಿ ಬಳಿಕ UAN ಸಂಖ್ಯೆಯನ್ನೂ ಕೂಡ ಆಧಾರ್ ಕಾರ್ಡ್ ನಿಂದ ವೆರಿಫೈ ಮಾಡಿ. ಇದರಿಂದ ನಿಮಗೆ ಕಂಪನಿಯಿಂದ ಸಿಗುವ ಕೊಡುಗೆಯಲ್ಲಿ ಯಾವುದೇ ರೀತಿಯ ಅಡಚಣೆ ಎದುರಾಗುವುದಿಲ್ಲ. ಹಾಗಾದರೆ ಬನ್ನಿ PF ಖಾತೆಯಿಂದ (Provident Fund Account) ಆಧಾರ್ ಲಿಂಕ್ ಹೇಗೆ ಮಾಡಬೇಕು ತಿಳಿದುಕೊಳ್ಳೋಣ.
ಇದನ್ನೂ ಓದಿ- EPFO Rules: ನಿಮ್ಮ ಪಿಎಫ್ ಖಾತೆಯಲ್ಲಿ ಸಿಗಲಿದೆ 50,000 ರೂ. ನೇರ ಪ್ರಯೋಜನ, ಆದರೆ...
PF ಖಾತೆ ಹಾಗೂ UAN ಸಂಖ್ಯೆಯನ್ನು ಆಧಾರ್ ಜೊತೆಗೆ ಹೇಗೆ ಲಿಂಕ್ ಮಾಡಬೇಕು?(How To Link Aadhaar With EPFO And UAN
>> ಎಲ್ಲಕ್ಕಿಂತ ಮೊದಲು ನೀವು EPFO ಪೋರ್ಟಲ್ ಆಗಿರುವ epfindia.gov.inಗೆ ಭೇಟಿ ನೀಡಿ, ಈ ಕಳಗೆ ಸೂಚಿಸಲಾಗಿರುವ ಸ್ಟೆಪ್ಸ್ ಗಳನ್ನೂ ಅನುಸರಿಸಿ.
>> epfindia.gov.in ನಲ್ಲಿ ಲಾಗಿನ್ ಮಾಡಿ.
>> 'Online Services' ಆಪ್ಶನ್ ನಲ್ಲಿ 'e-KYC portal'ಗೆ ಭೇಟಿ ನೀಡಿ ಹಾಗೂ Link UAN Aadhaar ಮೇಲೆ ಕ್ಲಿಕ್ಕಿಸಿ.
>> ಇಲ್ಲಿ ನಿಮ್ಮ UAN ಸಂಖ್ಯೆ ಹಾಗೂ ರಜಿಸ್ಟರ್ಡ್ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
>> ನಿಮ್ಮ ರಜಿಸ್ಟರ್ಡ ಮೊಬೈಲ್ ಸಂಖ್ಯೆಗೆ OTP ಬರಲಿದೆ.
ಇದನ್ನೂ ಓದಿ-PF ಖಾತೆದಾರರಿಗೆ 5 ಪ್ರಯೋಜನಗಳ ಲಾಭ : ಇಲ್ಲಿದೆ ನೋಡಿ!
>> ಇದೀಗ OTP ಹಾಗೂ 12 ಅಂಕಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ.
>> ಬಳಿಕ ಸಬ್ಮಿಟ್ ಗುಂಡಿಯ ಮೇಲೆ ಕ್ಲಿಕ್ಕಿಸಿ.
>> ಈಗ OTP ವೆರಿಫಿಕೆಶನ್ ಆಪ್ಶನ್ ಮೇಲೆ ಕ್ಲಿಕ್ಕಿಸಿ.
>> ನಿಮ್ಮ ಆಧಾರ್ ವಿವರದ ಪರಿಶೀಲಿಸಲು ನಿಮ್ಮ ಆಧಾರ್ ನಂಬರ್ ಗೆ ಲಿಂಕ್ ಇರುವ ಮೇಲ್ ಗಾಗಿ ಅಧಿಕೃತ ಮೊಬೈಲ್ ನಂಬರ್ ಮೇಲೆ OTP ಸಿದ್ಧಪಡಿಸಿ.
>> ಈಗ EPFO ನಿಮ್ಮ ಆಧಾರ್-EPFO ಜೋಡಣೆಯ ಪಂಜೀಕರಣಕ್ಕಾಗಿ ನಿಮ್ಮ ಉದ್ಯೋಗದಾತರನ್ನು ಸಂಪರ್ಕಿಸಲಿದೆ. ಒಂದು ವೇಳೆ ನಿಮ್ಮ ಉದ್ಯೋಗದಾತರು ನಿಮ್ಮ ಆಧಾರ್ ಸೀಡಿಂಗ್ ಅನ್ನು EPFO ಖಾತೆಯ ಜೊತೆಗೆ ಖಾತರಿಪಡಿಸಿದಾಗ, ನಿಮ್ಮ EPFO ಖಾತೆ ನಿಮ್ಮ AADHAAR ಖಾತೆಯ ಜೊತೆಗೆ ಜೋಡಣೆಯಾಗಲಿದೆ (Aadhaar-UAN Link).
ಇದನ್ನೂ ಓದಿ-EPFO Good News: ಜುಲೈ ತಿಂಗಳಿನಲ್ಲಿ ಸಿಗುತ್ತಾ ಬಡ್ಡಿ? EPFOಗೆ ಸಿಕ್ತು ಕಾರ್ಮಿಕ ಸಚಿವಾಲಯದ ಅನುಮತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.