ನವದೆಹಲಿ : ಕೊರೋನಾದಿಂದ ಆರ್ಥಿಕವಾಗಿ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಕುಟುಂಬದಲ್ಲಿ ಒಬ್ಬರನ್ನೇ ಜೀವನಾಧಾರವಾಗಿಸಿದ್ದ ಕುಟುಂಬಗಳು ಇಂದು ಕೊರೋನಾದಿಂದಾಗಿ ಆಸರೆಯನ್ನೇ ಕಳೆದುಕೊಂಡಿದೆ. ಇಂತಹ ಕುಟುಂಬಳಿಗೆ ಸರ್ಕಾರ ಪರಿಹಾರ ಧನ ಒದಗಿಸುತ್ತಿದೆ. ಇನ್ನೊಂದೆಡೆ ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್(EPFO) ಕೂಡ ಹೀಗೆ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯದ ಹಸ್ತ ನೀಡಲು ಮುಂದಾಗಿವೆ.
ಇಂತಹ ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶದಿಂದ EPFO ತನ್ನ ಪಿಂಚಣಿ ಯೋಜನೆಯಲ್ಲಿ ಬದಲಾವಣೆ ತಂದಿದೆ. ಇದರಿಂದ ನೌಕರರ ರಾಜ್ಯ ವಿಮೆಯಲ್ಲಿ ನೊಂದಾಯಿತ ಇಲಾಖೆಗಳಿಗೆ ಪಿಂಚಣಿ ಯೋಜನೆಯ ಲಾಭ ಸಿಗಲಿದೆ. ಇದಲ್ಲದೆ ಇಡಿಎಲ್‌ಐ (Employees Deposit Linked Insurance Scheme) ಲಾಭ ಕೂಡ ಸಿಗುತ್ತದೆ.
ಇದನ್ನೂ ಓದಿ : EPFO Alerts: ಪಿಎಫ್ಗೆ ಸಂಬಂಧಿಸಿದ ಈ ಕೆಲಸವನ್ನು ಪೂರ್ಣಗೊಳಿಸದಿದ್ದರೆ ನಿಮ್ಮ ಹಣ ಸಿಲುಕಬಹುದು
ಕಾರ್ಮಿಕರ ರಾಜ್ಯ ವಿಮಾ ನಿಗಮ(ESIC) ನಿಯಮಗಳ ಪ್ರಕಾರ ಪಿಂಚಣಿಯಲ್ಲಿ ನಲ್ಲಿ ದಿನ ಸಂಬಳದ ಶೇಕಡಾ. 90 ರಷ್ಟು ಹಣವನ್ನು ಅವಲಂಭಿತರಿಗೆ ಸಿಗಲಿದೆ. ಒಂದು ವೇಳೆ ಕುಟುಂಬದ ದುಡಿಯುತ್ತಿರುವ ಅಥವಾ ಕುಟುಂಬಕ್ಕೆ ಆಸರೆಯಂತಿದ್ದ ವ್ಯಕ್ತಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರೆ, ಈ ನಿಯಮ ಮಾರ್ಚ್ 24, 2020 ರಿಂದ 24 ಮಾರ್ಚ್ 2022 ರವರೆಗಿನ ಸಾವು ಪ್ರಕರಣಗಳಿಗೆ ಅನ್ವಯಿಸಲಿದೆ. ಈ ಪ್ರಸ್ತಾವನೆಯ ಮೇಲೆ ಕಾರ್ಮಿಕ ಸಚಿವಾಲಯ ಸತತವಾಗಿ ಕಾರ್ಯನಿರ್ವಹಿಸುತ್ತಿದೆ.
ಇದನ್ನೂ ಓದಿ : Gold-Silver Rate : ಆಭರಣ ಪ್ರಿಯರೆ ಗಮನಿಸಿ : ಇಂದಿನ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ!
EPFO ಹಾಗೂ EDLI ಯೋಜನೆಯ ಅಡಿ ಇದುವರೆಗೆ ಮೃತಪಟ್ಟವರ ಕುಟುಂಬ ಸದಸ್ಯರಿಗೆ 6 ಲಕ್ಷ ರೂ. ನೀಡಲಾಗುತ್ತಿತ್ತು. ಇದೀಗ ಈ ಹಣ(Money)ವನ್ನು 7 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಕಳೆದ ವರ್ಷದ ಫೆಬ್ರವರಿಯಿಂದ ಮುಂದಿನ ಮೂರು ವರ್ಷಗಳವರೆಗೆ ಈ ನಿಯಮ ಜಾರಿಯಲ್ಲಿರಲಿದೆ. ಇದರ ಅಡಿ ಕನಿಷ್ಠ ಅಂದರೆ ರೂ.2.5 ಲಕ್ಷ ರೂ.ಗಳು ಸಿಗಲಿವೆ.
ಇದನ್ನೂ ಓದಿ : 7th Pay Commission: ತಂದೆ ತಾಯಿ ಸಾವಿನ ನಂತರ ಮಕ್ಕಳಿಗೆ ಪ್ರತಿ ತಿಂಗಳು 1.25 ಲಕ್ಷ ಪಿಂಚಣಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ