Finance Minister: ಸರ್ಕಾರಿ ಬ್ಯಾಂಕುಗಳ ಮುಖ್ಯಸ್ಥರ ಭೇಟಿಗೆ ಮುಂದಾದ ಸೀತಾರಾಮನ್, ಕಾರಣ ಇಲ್ಲಿದೆ
ಸ್ಟಾಂಡ್ ಅಪ್ ಇಂಡಿಯಾ ಯೋಜನೆಯನ್ನು 2016 ರಲ್ಲಿ ಆರಂಭಿಸಲಾಗಿದೆ. ಈ ಯೋಜನೆಯ ಅಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರಿಗೆ ಬ್ಯಾಂಕುಗಳ ವತಿಯಿಂದ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಬ್ಯಾಂಕುಗಳ ವತಿಯಿಂದ ಸಿಗುವ ಈ ಸಾಲದ ಮೊತ್ತ 10 ಲಕ್ಷ ರೂ.ಗಳಿಂದ 1 ಕೋಟಿ ರೂ.ಗಳವರೆಗೆ ಇರಲಿದೆ.
ಸರ್ಕಾರದ ಯೋಜನೆಗಳ ಲಾಭವನ್ನು ಸಮಾಜದ ಕೊನೆಯ ವರ್ಗದವರಿಗೂ ಕೊಂಡೊಯ್ಯಲು ಸರ್ಕಾರ ಸಾಧ್ಯವಾದಷ್ಟು ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮುಖ್ಯ ಅಧಿಕಾರಿಗಳ ಸಭೆ ನಡೆಯಲಿದೆ. ಈ ತಿಂಗಳ ಅಂತ್ಯದಲ್ಲಿ ಸಭೆ ನಡೆಯಲಿದೆ. ಪರಿಶಿಷ್ಟ ಜಾತಿ (ಎಸ್‌ಸಿ) ಯವರು ಸರ್ಕಾರದ ಯೋಜನೆಯ ಲಾಭ ಪಡೆಯುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಈ ಸಭೆ ಗಮನಹರಿಸಲಿದೆ. ವಾಸ್ತವದಲ್ಲಿ, ಕಳೆದ ಕೆಲವು ವರ್ಷಗಳಲ್ಲಿ, ಸ್ಟ್ಯಾಂಡ್-ಅಪ್ ಇಂಡಿಯಾ, ಪ್ರಧಾನ ಮಂತ್ರಿ ಮುದ್ರಾ ಯೋಜನೆ, ಕ್ರೆಡಿಟ್ ಎನ್ಹಾನ್ಸ್ಮೆಂಟ್ ಗ್ಯಾರಂಟಿ ಯೋಜನೆ ಸೇರಿದಂತೆ ಪರಿಶಿಷ್ಟ ವರ್ಗದ ಉನ್ನತಿಗಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ.
ಫಲಾನುಭವಿಗಳಿಗೆ ಯೋಜನೆಯ ಲಭ್ಯತೆ ಕುರಿತು ಸಭೆ
ತಿಂಗಳಾಂತ್ಯದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಯೋಜನೆಯಿಂದಾಗುವ ಪ್ರಯೋಜನಗಳ ಕುರಿತು ಪ್ರಮುಖವಾಗಿ ಚರ್ಚೆ ನಡೆಯಲಿದೆ. ಇದರಲ್ಲಿ ಸರ್ಕಾರಿ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ಸಮುದಾಯದವರಿಗೆ ಸಿಗುವ ಇತರ ಪ್ರಯೋಜನಗಳನ್ನು ಒಳಗೊಂಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷರು, ಹಣಕಾಸು ಸೇವಾ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳು ಹಣಕಾಸು ಸಚಿವರೊಂದಿಗಿನ ಸಭೆಯಲ್ಲಿ ಉಪಸ್ಥಿತರಿರಲ್ಲಿದಾರೆ.
ಇದನ್ನೂ ಓದಿ-Inflation: ಹಣದುಬ್ಬರದಿಂದ ಸಂಕಷ್ಟಕ್ಕೊಳಗಾದ ಜನತೆ, RBI ಅಧಿಕಾರಿಗಳು ಹೇಳಿದ್ದೇನು?
ಸ್ಟ್ಯಾಂಡ್-ಅಪ್ ಯೋಜನೆಯ ಮೂಲಕ SC/ST ಸಮುದಾಯದ ಉನ್ನತಿ
ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಯನ್ನು 2016 ರಲ್ಲಿ ಪ್ರಾರಂಭಿಸಲಾಗಿದೆ. ಈ ಯೋಜನೆಯ ಮೂಲಕ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಮಹಿಳೆಯರಿಗೆ ಬ್ಯಾಂಕ್‌ನಿಂದ ಸಾಲ ನೀಡಲಾಗುತ್ತದೆ. ಬ್ಯಾಂಕ್‌ಗಳಿಂದ ಸಿಗುವ ಈ ಮೊತ್ತ 10 ಲಕ್ಷದಿಂದ ಒಂದು ಕೋಟಿ ರೂ. ವರೆಗೆ ಇರಲಿದೆ. ಯೋಜನೆಯ ಮೂಲಕ, SC / ST ಮತ್ತು ಮಹಿಳಾ ಉದ್ಯಮಿಗಳಿಗೆ ಉತ್ಪಾದನೆ ಮತ್ತು ಸೇವಾ ವಲಯದಲ್ಲಿ ಉತ್ತೇಜನ ನೀಡಲಾಗುತ್ತದೆ. ಈ ಯೋಜನೆಯಲ್ಲಿ, ಬ್ಯಾಂಕ್‌ನ ಪ್ರತಿಯೊಂದು ಶಾಖೆಯಿಂದ ಯಾವುದೇ ಒಬ್ಬ ಎಸ್‌ಸಿ/ಎಸ್‌ಟಿ ಅಥವಾ ಮಹಿಳಾ ಸಾಲಗಾರರಿಗೆ 10 ಲಕ್ಷದಿಂದ ಒಂದು ಕೋಟಿ ರೂಪಾಯಿಗಳ ಸಾಲವನ್ನು ನೀಡಲಾಗುತ್ತದೆ. 2019-20 ರಲ್ಲಿ, ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಯನ್ನು 2020-25 ರ ಅವಧಿಯೊಂದಿಗೆ 15 ನೇ ಹಣಕಾಸು ಆಯೋಗದ ಸಂಪೂರ್ಣ ಅವಧಿಗೆ ವಿಸ್ತರಿಸಲಾಯಿತು.
ಇದನ್ನೂ ಓದಿ-Stock Market Outlook: ಮುಂದಿನ ವಾರ ಷೇರು ಮಾರುಕಟ್ಟೆಯ ಪಾಲಿಗೆ ಹೇಗಿರಲಿದೆ?
ಸರ್ಕಾರದ ಯೋಜನೆ ಸಹಕಾರಿಯಾಗಲಿದೆ
ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಯನ್ನು ಎಲ್ಲಾ ನಿಗದಿತ ವಾಣಿಜ್ಯ ಬ್ಯಾಂಕ್‌ಗಳಿಗೆ ವಿಸ್ತರಿಸಲಾಗಿದೆ, ಇದು ಸುಮಾರು 2.5 ಲಕ್ಷ ಸಾಲಗಾರರಿಗೆ ಪ್ರಯೋಜನವನ್ನು ಒದಗಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಜುಲೈ 22, 2022 ರವರೆಗೆ ಎಸ್‌ಸಿ/ಎಸ್‌ಟಿ ಮತ್ತು ಮಹಿಳಾ ಉದ್ಯಮಿಗಳು ಸೇರಿದಂತೆ ಒಟ್ಟು 1,44, 223 ಜನರಿಗೆ ಇದುವರೆಗೆ ಸಾಲಗಳನ್ನು ನೀಡಲಾಗಿದೆ. ಇನ್ನೊಂದೆಡೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ, ಉತ್ಪಾದನೆ, ವ್ಯಾಪಾರ, ಸೇವೆ ಮತ್ತು ಇತರ ಕೃಷಿ ಸಂಬಂಧಿತ ಚಟುವಟಿಕೆಗಳಿಂದ ಆದಾಯವನ್ನು ಹೆಚ್ಚಿಸಲು ಸದಸ್ಯ ಸಾಲ ಸಂಸ್ಥೆ (MLI) ನಿಂದ ರೂ 10 ಲಕ್ಷದವರೆಗೆ ಮೇಲಾಧಾರ-ಮುಕ್ತ ಸಾಂಸ್ಥಿಕ ಸಾಲವನ್ನು ನೀಡಲಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಯೋಜನೆಯ ಪ್ರಾರಂಭದಿಂದ ಜುಲೈ 1, 2022 ರವರೆಗೆ 19.61 ಲಕ್ಷ ಕೋಟಿ ಮೌಲ್ಯದ 35.88 ಕೋಟಿ ಸಾಲಗಳನ್ನು ವಿತರಿಸಲಾಗಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.