Gold and Silver Price Today: ಚಿನ್ನ ಪ್ರಿಯರಿಗೊಂದು ಸಂತಸದ ಸುದ್ದಿ, ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ
Gold and Silver Price Today - ಇಂದು ಚಿನ್ನದ ಬೆಲೆ 10 ಗ್ರಾಂಗೆ 172 ರೂಪಾಯಿ ಇಳಿಕೆಯಾಗಿದೆ.
Gold and Silver Price Today - ರೂಪಾಯಿ ಮೌಲ್ಯ ಬಲವರ್ಧನೆಯ ನಡುವೆ ಇಂದು ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಇಂದು ಡಿಸೆಂಬರ್ 21ರ ಮಂಗಳವಾರ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 172 ರೂಪಾಯಿ ಇಳಿಕೆಯಾಗಿದೆ. ಇದರಿಂದಾಗಿ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ (Gold Price Today) 47,246 ರೂ.ಗೆ ತಲುಪಿದೆ. ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಈ ಮಾಹಿತಿಯನ್ನು ನೀಡಿದೆ. ಇದರಿಂದಾಗಿ ಹಿಂದಿನ ವಹಿವಾಟಿನಲ್ಲಿ 10 ಗ್ರಾಂ ಚಿನ್ನದ ಬೆಲೆ 47,418 ರೂ.ಗೆ ತಲುಪಿ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿತ್ತು.
ಇದನ್ನೂ ಓದಿ-Investment on Gold: ರಾಜ್ಯದಲ್ಲಿ ಚಿನ್ನ, ವಜ್ರ, ಬೆಳ್ಳಿ ಆಭರಣಗಳ ಮೇಲೆ ಬಂಡವಾಳ ಹೂಡಿಕೆ ಹೆಚ್ಚಳ
ಮತ್ತಷ್ಟು ಹೊಳೆದ ಬೆಳ್ಳಿ
ಇನ್ನೊಂದೆಡೆ, ಚಿನ್ನಕ್ಕಿಂತ ಭಿನ್ನ ಎಂಬಂತೆ ಇಂದು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಬೆಳ್ಳಿ ಬೆಲೆ 342 ರೂಪಾಯಿಗಳಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ 60,508 (Silver Price Today) ರೂಪಾಯಿಗಳಿಗೆ ತಲುಪಿದೆ. ಒಂದು ವಹಿವಾಟಿ ದಿನದ ಹಿಂದೆ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 60,166 ರೂ.ಗೆ ತಲುಪಿತ್ತು.
ಇದನ್ನೂ ಓದಿ-ಮನೆಯಲ್ಲಿರುವ ಚಿನ್ನದಿಂದ ಗಳಿಸಲು ದೊಡ್ಡ ಅವಕಾಶ, ದೇಶದ ಅತಿದೊಡ್ಡ ಬ್ಯಾಂಕಿನಿಂದ ಸಿಗಲಿದೆ ಡಬಲ್ ಲಾಭ
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿಯ ಬೆಲೆ ಹೇಗಿದೆ? (Gold-Silver Rate In Global Market)
ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 17 ಪೈಸೆ ಏರಿಕೆಯಾಗಿ 75.73ಕ್ಕೆ ತಲುಪಿದೆ. ಇದು US ಡಾಲರ್ ಎದುರು 31 ಪೈಸೆ ಜಿಗಿದು 75.59 (ತಾತ್ಕಾಲಿಕ) ಕ್ಕೆ ತಲುಪಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನ 1,797 ಡಾಲರ್‌ಗೆ ಏರಿಕೆಯಾಗಿದ್ದು, ಬೆಳ್ಳಿ ಪ್ರತಿ ಔನ್ಸ್‌ಗೆ 22.53 ಡಾಲರ್ ಮೇಲೆ ವಹಿವಾಟು ನಡೆಸುತ್ತಿದೆ.ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಪ್ರಕಾರ, "ನ್ಯೂಯಾರ್ಕ್ ಮೂಲದ ಕಮಾಡಿಟಿ ಎಕ್ಸ್‌ಚೇಂಜ್, ಕಾಮೆಕ್ಸ್‌ನಲ್ಲಿ ಮಂಗಳವಾರ ಚಿನ್ನದ ಬೆಲೆ ಶೇ.0.36 ರಷ್ಟು ಏರಿಕೆಯೊಂದಿಗೆ ಚಿನ್ನದ ಬೆಲೆ $1,797 ಒಂದು ಔನ್ಸ್.ಗೆ ತಲುಪಿದೆ. ಪ್ರಸ್ತುತ ಅಮೆರಿಕಾದಲ್ಲಿ ಚಿನ್ನದ ಬೆಲೆ USD 1,800 ಪ್ರತಿ ಔನ್ಸ್ಕ್ ಗಿಂತ ಕಡಿಮೆ ವಹಿವಾಟು ನಡೆಸುತ್ತಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.