/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: Gold Hallmarking: ಒಂದು ವೇಳೆ ನೀವೂ ಕೂಡ ಚಿನ್ನಾಭರಣ ವ್ಯಾಪಾರಿಗಳಿದ್ದರೆ, ಈ ಸುದ್ದಿ ನಿಮಗೆ ಭಾರಿ ನೆಮ್ಮದಿಯನ್ನು ನೀಡಲಿದೆ. ಹಬ್ಬದ ಋತು ಆರಂಭಕ್ಕೂ ಮುನ್ನ ಸರ್ಕಾರ ಆಭರಣ ವ್ಯಾಪಾರಿಗಳಿಗೆ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ಹೌದು, ಸರ್ಕಾರ ಗೋಲ್ಡ್ ಹಾಲ್ ಮಾರ್ಕಿಂಗ್ ನಿಯಮ ಕಾರ್ಯಗತಗೊಳಿಸುವಿಕೆಯನ್ನು ನವೆಂಬರ್ 30ವರೆಗೆ ವಿಸ್ತರಿಸಿದೆ. ಈ ಮೊದಲು ಈ ಗಡುವು ಆಗಸ್ಟ್ 31ಕ್ಕೆ ಕೊನೆಗೊಂಡಿತ್ತು.

HUID ನಿಯಮಗಳಲ್ಲಿಯೂ ಭಾರಿ ನೆಮ್ಮದಿ
ಚಿನ್ನದ ಹಾಲ್‌ಮಾರ್ಕಿಂಗ್ ಹೊರತಾಗಿ, ಆಭರಣ ವ್ಯಾಪಾರಿಗಳು ಹಾಲ್‌ಮಾರ್ಕಿಂಗ್ ಯುನಿಕ್  ID (HUID) ನಿಯಮದಿಂದಲೂ ಪರಿಹಾರ ದೊರೆತಿದೆ ಎನ್ನಲಾಗಿದೆ.  ಹೌದು ಇದೀಗ  HUID ನಿಯಮಗಳು ಕೇವಲ ಹಾಲ್‌ಮಾರ್ಕಿಂಗ್ (Gold Jelwllery Hallmarking) ಕೇಂದ್ರದವರೆಗೆ ಮಾತ್ರ ಸೀಮಿತವಾಗಲಿವೆ. ಇದರ ಅಡಿ ಆಭರಣ ವ್ಯಾಪಾರಿಗಳನ್ನು (Jewellers) ಮತ್ತು ಗ್ರಾಹಕರನ್ನು ಪತ್ತೆ ಮಾಡಲಾಗುವುದಿಲ್ಲ. ಈ HUID ಬಗ್ಗೆ ಆಭರಣ ವ್ಯಾಪಾರಿಗಳು ಗೊಂದಲದಲ್ಲಿದ್ದರು. ವಾಸ್ತವವಾಗಿ, ಚಿನ್ನದ ಹಾಲ್‌ಮಾರ್ಕಿಂಗ್‌ಗೆ ಸಂಬಂಧಿಸಿದ ದೊಡ್ಡ ಸಮಸ್ಯೆ ಎಚ್‌ಯುಐಡಿಯಲ್ಲೇ ಅಡಗಿದೆ. ಏಕೆಂದರೆ ಒಮ್ಮೆ ನೋಂದಣಿ ಮಾಡಿದ ನಂತರ, ವಿನ್ಯಾಸವನ್ನು ಬದಲಾಯಿಸಲು ಎಚ್‌ಯುಐಡಿಗೆ ಕಷ್ಟವಾಗುತ್ತಿದೆ. ಆಭರಣದಲ್ಲಿನ ಯಾವುದೇ ಬದಲಾವಣೆಯು ಮರು-ನೋಂದಣಿಗೆ ಕಾರಣವಾಗುತ್ತದೆ ಮತ್ತು ಇದು ದೊಡ್ಡ ಸಮಸ್ಯೆಗೆ ತಂದೊಡ್ಡಿದೆ. 

ಈ ಆಭರಣ ವ್ಯಾಪಾರಿಗಳಿಗೆ ನೆಮ್ಮದಿ ಸಿಗಲಿದೆ
ಈ ವ್ಯವಸ್ಥೆಯಲ್ಲಿ, ಕೆಲವು ಘಟಕಗಳನ್ನು ಕಡ್ಡಾಯ ಹಾಲ್‌ಮಾರ್ಕಿಂಗ್‌ನಿಂದ ವಿನಾಯಿತಿ ನೀಡಲಾಗಿದೆ. ವಾರ್ಷಿಕ ರೂ. 40 ಲಕ್ಷದ ವಹಿವಾಟು ಹೊಂದಿರುವ ಆಭರಣ ವ್ಯಾಪಾರಿಗಳಿಗೆ ಕಡ್ಡಾಯ ಹಾಲ್‌ಮಾರ್ಕಿಂಗ್‌ನಿಂದ ವಿನಾಯಿತಿ ನೀಡಲಾಗಿದೆ. ಸರ್ಕಾರದ ವ್ಯಾಪಾರ ನೀತಿಯಂತೆ ಆಭರಣಗಳನ್ನು ರಫ್ತು ಮಾಡುವ ಮತ್ತು ಆಮದು ಮಾಡಿಕೊಳ್ಳುವ ಘಟಕಗಳಿಗೆ ವಿನಾಯಿತಿ ನೀಡಲಾಗಿದೆ. ಇದರ ಹೊರತಾಗಿ, ಅಂತರರಾಷ್ಟ್ರೀಯ ಪ್ರದರ್ಶನ ಹಾಗೂ B2B (ವ್ಯಾಪಾರದಿಂದ ವ್ಯಾಪಾರಕ್ಕೆ) ದೇಶೀಯ ಪ್ರದರ್ಶನಕ್ಕೆ ಸರ್ಕಾರದ ಅನುಮೋದನೆಯೊಂದಿಗೆ ಇದರಿಂದ ವಿನಾಯಿತಿ ಇರಲಿದೆ. 

ಇದನ್ನೂ ಓದಿ-ಫ್ಲಿಪ್‌ಕಾರ್ಟ್‌ Big Billion Days ಜೊತೆಗೆ Amazon ಪೈಪೋಟಿ : ಸೆಲ್ ದಿನಾಂಕ ಬದಲಾವಣೆ, ಮತ್ತಷ್ಟು ಡಿಸ್ಕೌಂಟ್!

ಎಲ್ಲಿ ಹಾಲಮಾರ್ಕಿಂಗ್ ಕಡ್ಡಾಯ?
ಪ್ರಸ್ತುತ, ದೇಶದ 256 ಜಿಲ್ಲೆಗಳಲ್ಲಿ ಕಡ್ಡಾಯವಾಗಿ ಚಿನ್ನದ ಹಾಲ್‌ಮಾರ್ಕಿಂಗ್ ನಿಯಮಗಳು ಅನ್ವಯವಾಗುತ್ತವೆ. 18 ಕ್ಯಾರೆಟ್, 22 ಕ್ಯಾರೆಟ್ ಜೊತೆಗೆ ಈಗ 20 ಕ್ಯಾರೆಟ್, 23 ಕ್ಯಾರೆಟ್ ಮತ್ತು 24 ಕ್ಯಾರೆಟ್ ಕೂಡ ಅನುಮತಿಸಲಾಗಿದೆ. ಹಾಲ್‌ಮಾರ್ಕ್ ಅನ್ನು ಹೊಸ ಆಭರಣಗಳ ಜೊತೆಗೆ ಹಳೆಯ ಆಭರಣಗಳ ಮೇಲೂ ಹಾಕಬೇಕು. ಇದಲ್ಲದೇ, ಕೈಗಡಿಯಾರಗಳು, ಕಾರಂಜಿ ಪೆನ್ನುಗಳು ಮತ್ತು ಕುಂದನ್, ಪೋಲ್ಕಿ ಮತ್ತು ಜಡೌ ಆಭರಣಗಳಲ್ಲಿ ಬಳಸುವ ಚಿನ್ನವನ್ನು ಅಗತ್ಯವಾದ ಹಾಲ್‌ಮಾರ್ಕಿಂಗ್‌ನಿಂದ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ-Amazon ಕಂಪನಿಯ ಈ ಸಿಕ್ರೆಟ್ ಸೈಟ್ ನಲ್ಲಿ ಎಂದಾದರು ಶಾಪಿಂಗ್ ಮಾಡಿದ್ದೀರಾ? ಅಗ್ಗದ ಬೆಲೆ ಕಂಡು ನೀವೂ ಬೆಚ್ಚಿಬೀಳುವಿರಿ

ಕಡ್ಡಾಯ ಹಾಲ್‌ಮಾರ್ಕಿಂಗ್‌ನ ನಿಯಮಗಳು ಜೂನ್ 16, 2021 ರಿಂದ ಅನ್ವಯವಾಗುತ್ತವೆ. ಆಭರಣ ವ್ಯಾಪಾರಿಗಳು ಈ ನಿಯಮಗಳಿಗೆ ಸಿದ್ಧರಿಲ್ಲ ಮತ್ತು ಇದರ ವಿರುದ್ಧ ಆಭರಣ ವ್ಯಾಪಾರಿಗಳು ಮುಷ್ಕರ ನಡೆಸಿದ್ದರು. ಇದರಲ್ಲಿ ಸುಮಾರು 350 ಸಂಘಗಳು ಭಾಗವಹಿಸಿದ್ದವು. ಇದು ಬಹಳ ಕಷ್ಟಕರ ಪ್ರಕ್ರಿಯೆ ಎಂದು ಸಂಘ ಹೇಳಿದ್ದು, ಇದನ್ನು ಕಾರ್ಯಗತಗೊಳಿಸಲು ಸಮಯಾವಕಾಶ ಬೇಕು ಮತ್ತು ಇದು ಇನ್ನೂ ಸಿದ್ಧವಾಗಿಲ್ಲ. ಇದರೊಂದಿಗೆ, ದೊಡ್ಡ ಕಂಪನಿಗಳನ್ನು ಹೊರತುಪಡಿಸಿ ಸಣ್ಣ ಮತ್ತು ದೊಡ್ಡ ಆಭರಣ ವ್ಯಾಪಾರಿಗಳ ವ್ಯಾಪಾರ ಸ್ಥಗಿತಗೊಳ್ಳಲಿದೆ ಎಂದು ಅವರು ವಾದಿಸಿದ್ದರು.

ಇದನ್ನೂ ಓದಿ-Big Billion Days Dates : ಮತ್ತೆ ಬರುತ್ತಿದೆ 'Flipkart ಬಿಗ್ ಬಿಲಿಯನ್ ಡೇ'! ಈ ದಿನಾಂಕದಿಂದ ಆರಂಭ, ಸಂಪೂರ್ಣ ಮಾಹಿತಿ ಇಲ್ಲಿದೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
Gold Hallmarking Big Update: big news for jewellers gold hallmarking deadline extended for next three month know here in detail
News Source: 
Home Title: 

ಹಬ್ಬಗಳು ಆರಂಭವಾಗುವುದಕ್ಕು ಮುನ್ನ ಗೋಲ್ಡ್ ಹಾಲಮಾರ್ಕಿಂಗ್ ಕುರಿತು ಬಿಗ್ ಅಪ್ಡೇಟ್ ಪ್ರಕಟ

Gold Hallmarking Big Update: ಹಬ್ಬಗಳು ಆರಂಭವಾಗುವುದಕ್ಕು ಮುನ್ನ ಗೋಲ್ಡ್ ಹಾಲಮಾರ್ಕಿಂಗ್ ಕುರಿತು ಬಿಗ್ ಅಪ್ಡೇಟ್ ಪ್ರಕಟ
Caption: 
Gold Hallmarking (File Photo)
Yes
Is Blog?: 
No
Tags: 
Facebook Instant Article: 
Yes
Highlights: 

ಹಬ್ಬದ ಋತುವಿಗೂ ಮುನ್ನ ಆಭರಣ ವ್ಯಾಪಾರಿಗಳಿಗೆ ಭಾರಿ ನೆಮ್ಮದಿ ನೀಡಿದ ಸರ್ಕಾರ.

ಮೂರು ತಿಂಗಳವರೆಗೆ ಹಲ್ಲ್ಮಾರ್ಕಿಂಗ್ ನಿಯಮ ಜಾರಿಯಿಂದ ವಿನಾಯಿತಿ.

HUID ನಿಯಮಗಳೂ ಕೂಡ ಅನ್ವಯಿಸುವುದಿಲ್ಲ.

Mobile Title: 
ಹಬ್ಬಗಳು ಆರಂಭವಾಗುವುದಕ್ಕು ಮುನ್ನ ಗೋಲ್ಡ್ ಹಾಲಮಾರ್ಕಿಂಗ್ ಕುರಿತು ಬಿಗ್ ಅಪ್ಡೇಟ್ ಪ್ರಕಟ
Nitin Tabib
Publish Later: 
No
Publish At: 
Sunday, September 26, 2021 - 15:05
Created By: 
Nitin Tabib
Updated By: 
Nitin Tabib
Published By: 
Nitin Tabib
Request Count: 
2
Is Breaking News: 
No