ನವದೆಹಲಿ: ದುರ್ಬಲ ಜಾಗತಿಕ ಸೂಚನೆಗಳಿಂದಾಗಿ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಮುಖದತ್ತ ಸಾಗುತ್ತಿದೆ. ಸದ್ಯದ ಚಿನ್ನವಾರಪೇಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 44.930ಕ್ಕೆ ಕುಸಿತಗೊಂಡಿದ್ದರೆ, ಒಂದು ಕೆಜಿ ಬೆಳ್ಳಿ ಬೆಲೆ 67,510 ರೂ.ಗಳಿಗೆ ಸೀಮಿತಗೊಂಡಿದೆ.


COMMERCIAL BREAK
SCROLL TO CONTINUE READING

ಜಾಗತಿಕ ಮಾರುಕಟ್ಟೆಯ ಹಿಂದಿನ ಸೆಷನ್‍ನಲ್ಲಿ ಚಿನ್ನದ ಬೆಲೆ(Gold Rate) ಶೇ.0.35 ರಷ್ಟು ಹೆಚ್ಚಿದ್ದರೆ, ಬೆಳ್ಳಿ ಬೆಲೆ ಶೇ.1.2 ರಷ್ಟು ಏರಿಕೆ ಕಂಡಿತ್ತು.


SBI Doorstep Banking : ಕೂತಲ್ಲೇ ಸಿಗಲಿದೆ ಈ ಹತ್ತು ಸೇವೆಗಳ ಲಾಭ


ಅಮೆರಿಕಾದ ಫೆಡರಲ್ ರಿಸರ್ವ್ ನೀತಿ ಸಭೆಯ ನಡವಳಿಕೆಯಿಂದ ಇಂದು ಚಿನ್ನದ ಬೆಲೆ ಪ್ರತಿ ಔನ್ಸ್ 1,732.32 ಡಾಲರ್‍ಗೆ ನಿಗಯಾಗಿದೆ. ಚಿನ್ನಕ್ಕೆ 1700 ಡಾಲರ್ನ(Dollar) ಬೆಂಬಲವಿದ್ದರೂ ಹೂಡಿಕೆ ಬೇಡಿಕೆ ಪಾತಾಳದತ್ತ ಮುಖ ಮಾಡಿದೆ. ಮತ್ತೆ ನಿಗತ ಹಣಕಾಸು ನೀತಿ ಸಭೆ ಸೇರಿದ ನಂತರ ಷೇರು ಮಾರುಕಟ್ಟೆ ಸರಿದಾರಿಗೆ ಬರುವ ಸಾಧ್ಯತೆ ಇದೆ ಅಲ್ಲಿಯವರೆಗೆ ಚಿನ್ನದ ಇಟಿಎಫ್‍ಗಳು ಪ್ರಕಾಶಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


Business Opportunity: ಕೇವಲ 5 ಲಕ್ಷ ರೂ. ಬಂಡವಾಳ ಹೂಡಿ ತಿಂಗಳಿಗೆ 70 ಸಾವಿರ ಆದಾಯ ಪಡೆಯಲು ಇಲ್ಲಿದೆ ಅವಕಾಶ


ಹಳದಿ ಲೋಹ 45,000 ದಿಂದ 45,200ರೂ.ಗಳಿಗೆ ಬಂದರೆ ಪರಿಸ್ಥಿತಿ ಸುಧಾರಿಸಲಿದೆ ಎಂದು ನಾವು ಭಾವಿಸಿದ್ದೇವೆ ಎಂದು ಅನಂದ್‍ರತಿ ಷೇರು(Share Market) ಮತ್ತು ಸ್ಟಾಕ್ ಬ್ರೋಕರ್ ಸಂಸ್ಥೆಯ ಜಿಗರ್ ತ್ರಿವೇದಿ ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಮಟ್ಟದ ಕೆಲವು ಕಟು ನಿರ್ಧಾರಗಳಿಂದ ವಿಶ್ವದ ಚಿನ್ನ ವಿನಿಮಯ ವ್ಯಾಪಾರ ವಹಿವಾಟು ಶೇ.0.2ರಷ್ಟು ಕುಸಿತಗೊಂಡಿದೆ.


'LIC IPO ನಿಂದ ಯಾರ ನೌಕರಿಯೂ ಹೋಗಲ್ಲ, ಹೂಡಿಕೆದಾರರಿಗೆ ಭಾರಿ ಲಾಭ'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.