'LIC IPO ನಿಂದ ಯಾರ ನೌಕರಿಯೂ ಹೋಗಲ್ಲ, ಹೂಡಿಕೆದಾರರಿಗೆ ಭಾರಿ ಲಾಭ'

LIC IPO Latest News:ಬಹು ನಿರೀಕ್ಷಿತ LIC IPO ಪ್ರಕ್ರಿಯೆ ಆರಂಭಗೊಂಡಿದೆ. ಕಾಲ ಕೂಡಿಬಂದಾಗ ಅದರ ಮಾರುಕಟ್ಟೆಯ ಬೆಲೆ ಎಷ್ಟು ಎಂಬುದನ್ನು ಘೋಸಿಸಲಾಗುವುದು. ಮಾರುಕಟ್ಟೆಯಲ್ಲಿ ಇದರ ಬೆಲೆ ಹೆಚ್ಚಾಗಲಿ ಮತ್ತು ಆದಷ್ಟು ಹೆಚ್ಚು ಹೂಡಿಕೆದಾರರು ಇದರಲ್ಲಿ ಹೂಡಿಕೆ ಮಾಡಬೇಕು ಎಂಬುದು ಸರ್ಕಾರದ ಉದ್ದೇಶ.

Written by - Nitin Tabib | Last Updated : Mar 15, 2021, 03:26 PM IST
  • LIC IPO ಕುರಿತು ನೂತನ ಮಾಹಿತಿ ಬಹಿರಂಗ.
  • LIC IPO ಬರುವುದರಿಂದ ಯಾರ ನೌಕರಿಯೂ ಹೋಗಲ್ಲ.
  • ಇದರಿಂದ LIC ಹಾಗೂ ಹೂಡಿಕೆದಾರರು ಇಬ್ಬರಿಗೂ ಕೂಡ ಲಾಭ.
'LIC IPO ನಿಂದ ಯಾರ ನೌಕರಿಯೂ ಹೋಗಲ್ಲ, ಹೂಡಿಕೆದಾರರಿಗೆ ಭಾರಿ ಲಾಭ' title=

LIC IPO Latest News - ಭಾರತೀಯ ಜೀವ ವಿಮಾ ನಿಗಮದ ಪ್ರಸ್ತಾವಿತ IPO ಜಾರಿಗೆ ಬರುವುದರಿಂದ ಯಾರೊಬ್ಬರ ನೌಕರಿಗೆ ಕುತ್ತು ಬರುವುದಿಲ್ಲ ಎಂದು ಕೇಂದ್ರ ಹಣಕಾಸು ಖಾತೆ  ರಾಜ್ಯ ಸಚಿವ ಅನುರಾಗ ಠಾಕೂರ್ ಸೋಮವಾರ ಹೇಳಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ LIC ಹಾಗೂ ಹೂಡಿಕೆದಾರರು ಇಬ್ಬರಿಗೂ ಕೂಡ ಲಾಭವಾಗಲಿದೆ ಎಂದು ಅವರು ಹೇಳಿದ್ದಾರೆ. PTI ಪ್ರಕಟಿಸಿರುವ ವರದಿಯ ಪ್ರಕಾರ, ಲೋಕಸಭೆಯಲ್ಲಿ ಅವರು ಈ ಕುರಿತು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಹಾಗೂ ತೆಲಂಗಾಣ ರಾಷ್ಟ್ರ ಸಮೀತಿಯ ನಮಾ ನಾಗೆಶ್ವರ್ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸುತ್ತ ಅವರು ಈ ವಿಷಯ ತಿಳಿಸಿದ್ದಾರೆ.  ಈ ವೇಳೆ IPO ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಸಂಸ್ಥೆಯಲ್ಲಿ ಆದಷ್ಟು ಹೆಚ್ಚು ಜನರು ಹೂಡಿಕೆ ಮಾಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.

Price will be quoted at the appropriate time
ವರದಿಗಳ ಪ್ರಕಾರ, 'IPO (LIC IPO) ಜಾರಿಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಸರಿಯಾದ ಸಮಯಕ್ಕೆ ಮಾರುಕಟ್ಟೆಯಲ್ಲಿ ಅದರ ಬೆಲೆ ಎಷ್ಟು ಎಂಬುದನ್ನು ಘೋಷಿಸಲಾಗುವುದು . ಮಾರುಕಟ್ಟೆಯಲ್ಲಿ ಅದರ ಬೆಲೆ ಹೆಚ್ಚಾಗಬೇಕು ಹಾಗೂ ಆದಷ್ಟು ಹೆಚ್ಚು ಸಂಖ್ಯೆಯಲ್ಲಿ ಜನರು ಅದರಲ್ಲಿ ಹೂಡಿಕೆ ಮಾಡಬೇಕು ಇದು ಸರ್ಕಾರದ ಪ್ರಯತ್ನವಾಗಿದೆ. ಇದೇ ವೇಳೆ ಈ ಪ್ರಕ್ರಿಯೆಯಿಂದ ಯಾರೊಬ್ಬರ ನೌಕರಿಗೂ ಕೂಡ ಕುತ್ತು ಬರುವುದಿಲ್ಲ. ಈ ಪ್ರಕ್ರಿಯೆಯಿಂದ LIC (Life Insurance Corporation Of India) ಹಾಗೂ ಹೂಡಿಕೆದಾರರು ಇಬ್ಬರಿಗೂ ಕೂಡ ಲಾಭ ಉಂಟಾಗಲಿದೆ ಎಂದು ಠಾಕೂರ್' ಹೇಳಿದ್ದಾರೆ.

ಇದನ್ನೂ ಓದಿ- Bank fraud : ಸೂಕ್ತ ಸಮಯದಲ್ಲಿ ಈ ಕೆಲಸ ಮಾಡಿದ್ರೆ ಸಿಗಲಿದೆ refund

ಅಭಿವೃದ್ಧಿ ದರ ಎರಡಂಕಿ ಇರುವ ಸಾಧ್ಯತೆ (Growth rate is going to be in double digits)
ದೇಶದ ಆರ್ಥಿಕ ಸ್ಥಿತಿ ಸರಿಯಾಗಿಲ್ಲ ಎಂಬುದನ್ನು ತಿವಾರಿ ಉಲ್ಲೇಖಿಸಿದ ಬಳಿಕ ಅವರಿಗೆ ಉತ್ತರ ನೀಡಿರುವ ಠಾಕೂರ್, ಭಾರತದ ಆರ್ಥಿಕತೆ ತುಂಬಾ ವೇಗದಲ್ಲಿ ಚೇತರಿಸಿಕೊಳ್ಳುತ್ತಿದ್ದು, ಆರ್ಥಿಕ ವೃದ್ಧಿದರ ಎರಡಂಕಿಯಲ್ಲಿ ಇರಲಿದೆ ಎಂದು ಹಲವು ಸಂಸ್ಥೆಗಳು ಸಮೀಕ್ಷೆ ನಡೆಸಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಪೆಟ್ರೋಲ್-ಡಿಸೇಲ್ ಗಳನ್ನು GST ವ್ಯಾಪ್ತಿಗೆ ತರುವ ಸಾಧ್ಯತೆಗಳ ಕುರಿತು ಮಾತನಾಡಿರುವ ಅವರು, GST ಕೌನ್ಸಿಲ್ ಈ ಕುರಿತು ನಿರ್ಣಯ ಕೈಗೊಳ್ಳಬೇಕಿದೆ. ಆದರೆ, GST ಮೇಲೆ ರಾಜ್ಯಸರ್ಕಾರಗಳು ಸುಂಕ ಕಡಿಮೆ ಮಾಡಿದರೆ, ಕೇಂದ್ರ ಸರ್ಕಾರ ಕೂಡ ಸುಂಕ ಕಡಿತಗೊಳಿಸುವ ಕುರಿತು ಯೋಚಿಸಲಿದೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-IPPB: ನೀವೂ ಪೋಸ್ಟ್ ಆಫೀಸ್ ನಲ್ಲಿ SB ಖಾತೆ ಹೊಂದಿದ್ದೀರಾ? ಹಾಗಾದ್ರೆ ಏಪ್ರಿಲ್ 1 ರಿಂದ ಇದನ್ನು ನೆನಪಿಡಿ

ಕಂಪನಿಯ ಪೇಡ್ ಅಪ್ ಕ್ಯಾಪಿಟಲ್ 100 ಕೋಟಿ ರೂ. (Paid up capital of the company 100 crores)
ಇತ್ತೀಚೆಗಷ್ಟೇ ಭಾರತೀಯ ಜೀವ ವಿಮಾ ನಿಗಮದ ಅಧಿಕೃತ ಬಂಡವಾಳವನ್ನು 25,000 ಕೋಟಿ ರೂ.ಗಳಿಗೆ ಉಲ್ಲೇಖನೀಯ ಮಟ್ಟದಲ್ಲಿ ಹೆಚ್ಚಿಸಲು ಪ್ರಸ್ತಾವನೆಯೊಂದನ್ನು ಮಾಡಲಾಗಿದೆ. ಇದರಿಂದ ಮುಂದಿನ ಆರ್ಥಿಕ ವರ್ಷದಲ್ಲಿ ಕಂಪನಿಯ ಲಿಸ್ಟಿಂಗ್ ನಲ್ಲಿ ಸುಧಾರಣೆಯಾಗಲಿದೆ. ಪ್ರಸ್ತುತ ಸುಮಾರು 29 ಕೋಟಿ ಪಾಲಸಿಗಳೊಂದಿಗೆ ಭಾರತೀಯ ಜೀವವಿಮಾ ಕಂಪನಿಗೆ ಪೇಡ್ ಅಪ್ ಕ್ಯಾಪಿಟಲ್ 100 ಕೋಟಿ ರೂ. ಆಗಿದೆ. 1956 ರಲ್ಲಿ ಕೇವಲ 5 ಕೋಟಿ ರೂ. ಆರಂಭಿಕ ಬಂಡವಾಳದೊಂದಿಗೆ LIC ಅಸ್ತಿತ್ವಕ್ಕೆ ಬಂದಿತ್ತು.

ಇದನ್ನೂ ಓದಿ- Bank Merger - ಈ 7 ಬ್ಯಾಂಕ್ ಗಳಲ್ಲಿ ನೀವೂ ಖಾತೆ ಹೊಂದಿದ್ದೀರಾ? ಹಾಗಾದ್ರೆ ಈ ಸುದ್ದಿ ತಪ್ಪದೆ ಓದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News