ನವದೆಹಲಿ: Business Opportunity- ಒಂದು ವೇಳೆ ನೀವೂ ಕೂಡ ಹೊಸ ಉದ್ಯಮ ಪ್ರಾರಂಭಿಸಲು ಯೋಜನೆ ರೂಪಿಸುತ್ತಿದ್ದರೆ, ಡೈರಿ ಉತ್ಪನ್ನಗಳ (Dairy Product) ವ್ಯವಹಾರವು ಒಂದು ಉತ್ತಮ ಆಯ್ಕೆಯಾಗಿದೆ. ಹಲವಾರು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ವರದಿಗಳ ಪ್ರಕಾರ, ದೇಶದಲ್ಲಿ ಡೈರಿ ಉತ್ಪನ್ನಗಳ ಬೇಡಿಕೆ ನಿರಂತರವಾಗಿ ಹೆಚ್ಚಾಗುತ್ತಿದೆ ಮತ್ತು ಇದರಲ್ಲಿ ಹಾನಿ ಸಂಭವಿಸುವ ಸಾಧ್ಯತೆ ಕೂಡ ತುಂಬಾ ಕಡಿಮೆಯಾಗಿದೆ. ವಿಶೇಷವೆಂದರೆ ನೀವು ಈ ವ್ಯವಹಾರವನ್ನು(Small Business) ಕೇವಲ 5 ಲಕ್ಷ ರೂಪಾಯಿಗಳಿಂದ ಪ್ರಾರಂಭಿಸಬಹುದು ಮತ್ತು ಪ್ರತಿ ತಿಂಗಳು 70 ಸಾವಿರ ರೂಪಾಯಿಗಳವರೆಗೆ ಗಳಿಕೆ ಮಾಡಬಹದು.
ಮೋದಿ ಸರ್ಕಾರ ನೀಡುತ್ತದೆ ಧನ ಸಹಾಯ
ಮೋದಿ ಸರ್ಕಾರದ (Modi Government) ಜನಪ್ರಿಯ ಯೋಜನೆಯಾದ ಪ್ರಧಾನಿ ಮುದ್ರಾ (Mudra Scheme) ಸಾಲ ಯೋಜನೆಯಡಿ ಉದ್ಯೋಗ ಪ್ರಾರಂಭಿಸಲು ಬಂಡವಾಳದ ಅವಕಾಶ ಕೂಡ ಇರಲಿದೆ. ಈ ಯೋಜನೆ ಆರಂಭಿಸಲು ಸರ್ಕಾರ ಕೇವಲ ಆರ್ಥಿಕ ಸಹಾಯ ಮಾತ್ರ ಮಾಡದೆ, ನಿಮಗೆ ಇಡೀ ಯೋಜನೆಯ ಬಗ್ಗೆ ಮಾಹಿತಿ ಕೂಡ ನೀಡುತ್ತದೆ.ಆದರೂ ಕೂಡ ಈ ವ್ಯವಹಾರಕ್ಕಾಗಿ ನೀವು ಮೊದಲೇ ಸಿದ್ಧತೆ ಮಾಡಿಕೊಳ್ಳುವುದು ಉತ್ತಮ.
ಯೋಜನೆಗೆ ಎಷ್ಟು ಬಂಡವಾಳ ಬೇಕಾಗಬಹುದು?
ಡೈರಿ ಉತ್ಪನ್ನಗಳ ವ್ಯವಹಾರ ಪ್ರಾರಂಭಿಸಲು, ಯೋಜನೆಯ ವೆಚ್ಚವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನೀವು ಅದರಲ್ಲಿ ರುಚಿಯಾದ ಹಾಲು, ಮೊಸರು, ಬೆಣ್ಣೆ ಹಾಲು ಮತ್ತು ತುಪ್ಪವನ್ನು ತಯಾರಿಸಬಹುದು ಮತ್ತು ಮಾರಾಟ ಮಾಡಬಹುದು. ಪ್ರಧಾನ ಮಂತ್ರಿ ಮುದ್ರಾ ಯೋಜನೆಯಿಂದ ಸಿದ್ಧಪಡಿಸಿದ ಪ್ರಾಜೆಕ್ಟ್ ಪ್ರೊಫೈಲ್ ಪ್ರಕಾರ, ಸುಮಾರು 16 ಲಕ್ಷ 50 ಸಾವಿರ ರೂ. ಬಂಡವಾಳದ ಮೂಲಕ ನೀವು ಈ ಉದ್ಯಮದ ಸಿದ್ಧತೆ ಆರಂಭಿಸಬಹುದು. ಇದರಲ್ಲಿ ನೀವು ವೈಯಕ್ತಿಕವಾಗಿ ಸುಮಾರು 5 ಲಕ್ಷ ರೂ.ಗಳನ್ನು ಹೂಡಿಕೆ ಮಾಡಬೇಕು. ಮುದ್ರಾ ಯೋಜನೆಯಡಿ ಬ್ಯಾಂಕ್ ನಿಮಗೆ ಶೇ.70 ರಷ್ಟು ಹಣಕಾಸಿನ ಸಹಾಯ ನೀಡುತ್ತದೆ. ಬ್ಯಾಂಕಿನಿಂದ, ನೀವು 7.5 ಲಕ್ಷ ರೂಪಾಯಿಗಳನ್ನು ಟರ್ಮ್ ಸಾಲವಾಗಿ ಮತ್ತು 4 ಲಕ್ಷ ರೂಪಾಯಿಗಳನ್ನು ವರ್ಕಿಂಗ್ ಕ್ಯಾಪಿಟಲ್ ರೂಪದಲ್ಲಿ ಸಾಲ ಪಡೆಯಬಹುದು.
ಕಚ್ಚಾ ಸಾಮಗ್ರಿಗಳ ಮೇಲಿನ ವೆಚ್ಚ
ಯೋಜನೆಯ ವರದಿಯ ಪ್ರಕಾರ, ನೀವು ಒಂದು ತಿಂಗಳಲ್ಲಿ ಸುಮಾರು 12 ಸಾವಿರ 500 ಲೀಟರ್ ಕಚ್ಚಾ ಹಾಲನ್ನು ಹಾಗೂ 1000 ಕೆಜಿ ಸಕ್ಕರೆ ಖರೀದಿಸಬೇಕು. ಅಂತೆಯೇ, ನೀವು 200 ಕೆಜಿ ಫ್ಲೇವರ್ ಮತ್ತು 625 ಕೆಜಿ ಸ್ಪೈಸ್ ಮತ್ತು ಉಪ್ಪಿನ ವ್ಯವಸ್ಥೆ ಕೂಡ ಮಾಡಬೇಕು. ಈ ಕಚ್ಚಾ ಸಾಮಗ್ರಿಗಳಿಗಾಗಿ ನಿಮಗೆ ಪ್ರತಿ ತಿಂಗಳಿಗೆ ಸುಮಾರು 4 ಲಕ್ಷ ರೂ. ಖರ್ಚು ಬರುತ್ತದೆ.
ವಹಿವಾಟು ಹೇಗಿರಲಿದೆ?
ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಪ್ರಾಜೆಕ್ಟ್ ಪ್ರೊಫೈಲ್ ಪ್ರಕಾರ, ನೀವು ಒಂದು ವೇಳೆ ಈ ಬಿಸಿನೆಸ್ ಆರಂಭಿಸಿದರೆ, ನೀವು ಒಂದು ವರ್ಷದಲ್ಲಿ ಸುಮಾರು 75 ಸಾವಿರ ಲೀಟರ್ ಫ್ಲೇವರ್ಡ್ ಹಾಲಿನ ಮಾರಾಟ ಮಾಡಬಹುದು. ಇದಲ್ಲದೆ, ಸುಮಾರು 36 ಸಾವಿರ ಲೀಟರ್ ಮೊಸರು, 90 ಸಾವಿರ ಲೀಟರ್ ಬಟರ್ ಮಿಲ್ಕ್ ಮತ್ತು 4500 ಕೆಜಿ ತುಪ್ಪವನ್ನು ತಯಾರಿಸಿ ಮಾರಾಟ ಮಾಡಬಹುದು. ಇದರೊಂದಿಗೆ ವಾರ್ಷಿಕವಾಗಿ ನೀವು ಸುಮಾರು 82 ಲಕ್ಷ 50 ಸಾವಿರ ರೂಪಾಯಿ ವಹಿವಾಟು ಮಾಡಬಹುದು.
ಇದರಲ್ಲಿ ನಿಮ್ಮ ನಿವ್ವಳ ಲಾಭ ಎಷ್ಟು?
ಒಂದು ವೇಳೆ ವಾರ್ಷಿಕವಾಗಿ ನೀವು 82 ಲಕ್ಷ 50 ಸಾವಿರ ರೂ.ಗಳ ವಾರ್ಷಿಕ ವಹಿವಾಟು ನಡೆಸಿದರೆ, ನಿಮಗೆ ವಾರ್ಷಿಕವಾಗಿ 74 ಲಕ್ಷ 40 ಸಾವಿರ ಖರ್ಚು ಬರುತ್ತದೆ. ಇದರಲ್ಲಿ ಒಟ್ಟು ಮೊತ್ತದ ಮೇಲಿನ ಶೇ.14 ರಷ್ಟು ಬಡ್ಡಿ ಕೂಡ ಶಾಮೀಲಾಗಿದೆ. ಹೀಗಾಗಿ ವಾರ್ಷಿಕವಾಗಿ ನಿಮಗೆ 8 ಲಕ್ಷ 10 ಸಾವಿರ ರೂ.ಗಳ ನಿವ್ವಳ ಲಾಭ ಉಂಟಾಗಲಿದೆ.
ಇದನ್ನೂ ಓದಿ-'LIC IPO ನಿಂದ ಯಾರ ನೌಕರಿಯೂ ಹೋಗಲ್ಲ, ಹೂಡಿಕೆದಾರರಿಗೆ ಭಾರಿ ಲಾಭ'
ಉದ್ಯೋಗ ಆರಂಭಿಸಲು ಎಷ್ಟು ಜಾಗ ಬೇಕಾಗುತ್ತದೆ?
ಈ ಪ್ರಾಜೆಕ್ಟ್ ಗಾಗಿ 1000 ಸ್ಕ್ವೆಯರ್ ಫೀಟ್ ಜಾಗದ ಆವಶ್ಯಕತೆ ಇರುತ್ತದೆ. ಇದರಲ್ಲಿ 500 ಸ್ಕ್ವೆಯರ್ ಫೀಟ್ ಜಾಗ ಪ್ರೊಸೆಸಿಂಗ್ ಯುನಿಟ್ ಗಾಗಿ ಬೇಕಾಗುತ್ತದೆ. 150 ಸ್ಕ್ವೆಯರ್ ಫೀಟ್ ಜಾಗ ರೆಫ್ರಿಜಿರೇಶನ್ ರೂಮ್ ಹಾಗೂ 150 ಸ್ಕ್ವೆಯರ್ ಫೀಟ್ ಜಾಗ ವಾಶಿಂಗ್ ಏರಿಯಾಗಾಗಿ ಬೇಕಾಗುತ್ತದೆ. ಆಫೀಸ್ ಗಾಗಿ 100 ಸ್ಕ್ವೆಯರ್ ಫೀಟ್ ಜಾಗ ಮತ್ತು ಟಾಯ್ಲೆಟ್ ಇತ್ಯಾದಿ ಸೌಕರ್ಯಗಳಿಗೆ 100 ಸ್ಕ್ವೆಯರ್ ಫೀಟ್ ಜಾಗ ಬೇಕಾಗುತ್ತದೆ.
ಇದನ್ನೂ ಓದಿ-ನೀವು ಪಿಎಫ್ ಖಾತೆಯ UAN ಮರೆತಿದ್ದರೆ, ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ಮಾಹಿತಿ ಪಡೆಯಿರಿ
ಯಾವ ಯಾವ ಮಶೀನ್ ಗಳು ಬೇಕಾಗುತ್ತವೆ?
ಪ್ರಾಜೆಕ್ಟ್ ರಿಪೋರ್ಟ್ ಪ್ರಕಾರ ಕ್ರೀಂ ಸೇಪರೇಟರ್, ಪ್ಯಾಕಿಂಗ್ ಮಶೀನ್, ಆಟೋಕ್ಲೇವ್, ಬಾಟಲ್ ಕ್ಯಾಪಿಂಗ್ ಮಶೀನ್, ರೆಫ್ರಿಜಿರೇಟರ್, ಫ್ರೀಜರ್, ಕೆನ್ ಕೂಲರ್, ಕಾಪರ್ ಬಾಟಮ್ ಹೀಟಿಂಗ್ ವೆಸೆಲ್ಸ್, ಸ್ಟೇನ್ಲೆಸ್ ಸ್ಟೀಲ್ ಸ್ಟೋರಿಂಗ್ ವೆಸಲ್ಸ್, ಪ್ಲಾಸ್ಟಿಕ್ ಟ್ರೇಗಳು, ಡಿಸ್ಪೆನ್ಸರ್, ಫಿಲರ್, ಸಾಲ್ಟ್ ಕಂವೆಯರ್ಸ್ ಹಾಗೂ ಸೀಲರ್ಸ್ ಇತ್ಯಾದಿ ಮಶೀನ್ ಗಳು ಅವಶ್ಯಕವಾಗಿವೆ.
ಇದನ್ನೂ ಓದಿ-Bank ಗ್ರಾಹಕರೇ ಗಮನಿಸಿ: ಇನ್ಮುಂದೆ Credit Card ಪಡೆಯುವುದು ಸುಲಭವಲ್ಲ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.