Gold Price Today : ಹತ್ತು ಸಾವಿರದಷ್ಟು ಅಗ್ಗವಾಯಿತು ಚಿನ್ನದ ಬೆಲೆ , ಇಂದಿನ ದರಕ್ಕಾಗಿ ಇಲ್ಲಿ ಚೆಕ್ ಮಾಡಿ
Gold, Silver Rate Update, 09 August 2021 : ಚಿನ್ನ, ಬೆಳ್ಳಿ ಖರೀದಿಸುವವರಿಗೆ ಚಿನ್ನದಂಥ ಸುದ್ದಿಯಿದೆ. ಚಿನ್ನ-ಬೆಳ್ಳಿ ಬೆಲೆಯಲ್ಲಿ ಸತತ ಇಳಿಮುಖ ದಾಖಲಾಗಿದೆ.
ನವದೆಹಲಿ : Gold, Silver Rate Update, 09 August 2021 : ಚಿನ್ನ, ಬೆಳ್ಳಿ ಖರೀದಿಸುವವರಿಗೆ ಚಿನ್ನದಂಥ ಸುದ್ದಿಯಿದೆ. ಚಿನ್ನ-ಬೆಳ್ಳಿ ಬೆಲೆಯಲ್ಲಿ ಸತತ ಇಳಿಮುಖ ದಾಖಲಾಗಿದೆ. ಎಂಸಿಎಕ್ಸ್‌ನಲ್ಲಿ, ಸೋಮವಾರ ಅಂದರೆ ಆಗಸ್ಟ್ 9ಕ್ಕೆ, ಚಿನ್ನದ ಬೆಲೆಯಲ್ಲಿ (Gold rate) ಶೇ. 1.3ರಷ್ಟು ಕುಸಿತ ದಾಖಲಾಗಿದೆ. 10 ಗ್ರಾಂ ಚಿನ್ನದ ಮೇಲೆ 600 ರೂ . ಗಳಷ್ಟು ಇಳಿಕೆ ಕಂಡುಬಂದಿದೆ. ಅಂದರೆ, ಬೆಲೆ ಇಳಿಕೆ ನಂತರ ಚಿನ್ನದ ದರ 46,029 ರೂ.ಗೆ ತಲುಪಿದೆ. ಇದೇ ವೇಳೆ, ಬೆಳ್ಳಿಯ ಬೆಲೆಯಲ್ಲಿಯೂ 1.6 ಶೇಕಡಾ ಅಂದರೆ 1400 ರೂ.ಗಳಷ್ಟು ಕುಸಿಟ ದಾಖಲಾಗಿದೆ.
ಕಳೆದ ವಾರ ಚಿನ್ನದ ದರ (ಜುಲೈ 02-06)
ದಿನ ಗೋಲ್ಡ್ (MCX ಅಕ್ಟೋಬರ್ )
ಸೋಮವಾರ 48086/10 ಗ್ರಾಂ
ಮಂಗಳವಾರ 47864/10 ಗ್ರಾಂ
ಬುಧವಾರ 47892/10 ಗ್ರಾಂ
ಗುರುವಾರ 47603/10 ಗ್ರಾಂ
ಶುಕ್ರವಾರ 47570/10 ಗ್ರಾಂ
ಇದನ್ನೂ ಓದಿ : Aadhaar Update: ಆಧಾರ್‌ನಲ್ಲಿ ವಿಳಾಸ ನವೀಕರಿಸಲು ಈ ಸೌಲಭ್ಯ ಸ್ಥಗಿತಗೊಳಿಸಿದ UIDAI
ಸುಮಾರು 10,162 ರೂ. ಯಷ್ಟು ಚಿನ್ನ ಅಗ್ಗ :
ಕಳೆದ ವರ್ಷ, ಕರೋನಾ (Coronavirus) ಬಿಕ್ಕಟ್ಟಿನಿಂದಾಗಿ, ಜನರು ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡಿದ್ದರು. ಆಗಸ್ಟ್ 2020 ರಲ್ಲಿ, MCX ನಲ್ಲಿ 10 ಗ್ರಾಂ ಚಿನ್ನದ ಬೆಲೆ (Gold rate) ರೂ. 56191 ರ ಗರಿಷ್ಠ ಮಟ್ಟವನ್ನು ತಲುಪಿತ್ತು. ಈಗ ಅಕ್ಟೋಬರ್ ಫ್ಯೂಚರ್ಸ್ MCX ನಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 46,029 ರೂ.ಗಳ ಮಟ್ಟದಲ್ಲಿದೆ. ಅಂದರೆ, ಇದು ಇನ್ನೂ 10,162 ರೂಗಳಷ್ಟು ಅಗ್ಗವಾಗಲಿದೆ.
ಮಿಸ್ಡ್ ಕಾಲ್ ಮೂಲಕ ಚಿನ್ನದ ದರವನ್ನು ಕಂಡುಹಿಡಿಯಿರಿ :
ಮನೆಯಲ್ಲಿ ಕುಳಿತು ಈ ದರಗಳನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದು. ಇದಕ್ಕಾಗಿ, 8955664433 ನಂಬರ್ ಗೆ ಮಿಸ್ಡ್ ಕಾಲ್ (Missed call) ನೀಡಬೇಕು. ಮಿಸ್ಡ್ ಕಾಲ್ ನೀಡಿದ ಕೂಡಲೇ ನಿಮ್ಮ ಫೋನ್‌ಗೆ ಸಂದೇಶ ಬರುತ್ತದೆ. ಇದರಲ್ಲಿ ಇತ್ತೀಚಿನ ದರಗಳನ್ನು ಪರಿಶೀಲಿಸಬಹುದು.
ಇದನ್ನೂ ಓದಿ : PM Kisan: ಇಂದಿನಿಂದ ರೈತರ ಖಾತೆ ಸೇರಲಿದೆ 2000 ರೂ., ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈ ರೀತಿ ಪರಿಶೀಲಿಸಿ
ಬೆಳ್ಳಿ ದರದಲ್ಲೂ ಇಳಿಕೆ :
MCX ನಲ್ಲಿ ಬೆಳ್ಳಿ ದರದಲ್ಲೂ (Silver rate) ಭಾರೀ ಇಳಿಕೆಯಾಗಿದೆ.
ಈ ವಾರದ ಬೆಳ್ಳಿಯ ದರ :
ದಿನ ಬೆಳ್ಳಿ (MCX ಸೆಪ್ಟೆಂಬರ್ - ಭವಿಷ್ಯ)
ಸೋಮವಾರ 67889/ಕೆಜಿ
ಮಂಗಳವಾರ 67914/ಕೆಜಿ
ಬುಧವಾರ 67500/ಕೆಜಿ
ಗುರುವಾರ 66998/ಕೆಜಿ
ಶುಕ್ರವಾರ 66900/ಕೆಜಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ