Gold Price Today: 46 ಸಾವಿರ ರೂ.ಗಿಂತಲೂ ಕಡಿಮೆ ಇದೆ ಚಿನ್ನ, ನಿಮ್ಮ ನಗರದ ದರ ಪರಿಶೀಲಿಸಿ
ಬೆಲೆಬಾಳುವ ಹಳದಿ ಲೋಹದ ಬಗ್ಗೆ ಮಾರುಕಟ್ಟೆಯಲ್ಲಿ ಸೃಷ್ಟಿಯಾದ ಊಹಾಪೋಹಗಳಿಂದಾಗಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ನವದೆಹಲಿ: ಚಿನ್ನದ ಬೆಲೆ ಇಂದು(ಸೆ.28) ಭಾರತದಲ್ಲಿ 10 ಗ್ರಾಂಗೆ 40 ರೂ. ಏರಿಕೆ ಕಂಡಿದೆ. ಆದಾಗ್ಯೂ ಚಿನ್ನದ ದರವು ಪ್ರತಿ 10 ಗ್ರಾಂನ 22 ಕ್ಯಾರೆಟ್‌ಗೆ 46 ಸಾವಿರ ರೂ.ಗಿಂತಲೂ ಕಡಿಮೆ ಇದೆ. ಬೆಲೆಬಾಳುವ ಹಳದಿ ಲೋಹದ ಬಗ್ಗೆ ಮಾರುಕಟ್ಟೆಯಲ್ಲಿ ಸೃಷ್ಟಿಯಾದ ಊಹಾಪೋಹಗಳಿಂದಾಗಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಭಾರತದ ಬಹು ಸರಕು ವಿನಿಮಯ ಕೇಂದ್ರ(Multi Commodity Exchange of India)ದಲ್ಲಿ ಮಂಗಳವಾರ 841 ಲಾಟ್‌ಗಳ ವ್ಯಾಪಾರ ವಹಿವಾಟಿನಲ್ಲಿ ಚಿನ್ನವು ಪ್ರತಿ 10 ಗ್ರಾಂಗೆ ಶೇ.017ರಷ್ಟು ಹೆಚ್ಚಳವಾಗಿದ್ದು, 46,071 ರೂ.ಗೆ ತಲುಪಿದೆ. ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಸೃಷ್ಟಿಸಿದ ತಾಜಾ ಸ್ಥಾನಗಳಿಂದ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಇದನ್ನೂ ಓದಿ: Amazon ಕಂಪನಿಯ ಈ ಸಿಕ್ರೆಟ್ ಸೈಟ್ ನಲ್ಲಿ ಎಂದಾದರು ಶಾಪಿಂಗ್ ಮಾಡಿದ್ದೀರಾ? ಅಗ್ಗದ ಬೆಲೆ ಕಂಡು ನೀವೂ ಬೆಚ್ಚಿಬೀಳುವಿರಿ
ಈ ಮಧ್ಯೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನವು ಪ್ರತಿ ಔನ್ಸ್ ಗೆ ಶೇ.0.1ರಷ್ಟು ಇಳಿಕೆಯಾಗಿದ್ದು, 1,748.01 ಡಾಲರ್‌ಗೆ ತಲುಪಿದೆ. ಇದೆಲ್ಲದೆ ಯುಎಸ್ ಚಿನ್ನದ ಫ್ಯೂಚರ್‌ಗಳು ಶೇ.0.3ರಷ್ಟು ಇಳಿಕೆಯಾಗಿ 1,747.50ಕ್ಕೆ ತಲುಪಿದೆ ಎಂದು ತಿಳಿದುಬಂದಿದೆ.
ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ ನೋಡಿ...
ನಗರ |
22K Gold (Per 10gm) | 24K Gold (Per 10gm) |
ಬೆಂಗಳೂರು |
43,200 ರೂ. | 47,130 ರೂ. |
ದೆಹಲಿ |
45,500 ರೂ. | 49,640 ರೂ. |
ಮುಂಬೈ |
45,290 ರೂ. | 46,290 ರೂ. |
ಚೆನ್ನೈ |
Rs 43,550 ರೂ. | 47,510 ರೂ. |
ಕೋಲ್ಕತ್ತಾ |
45,760 ರೂ. | 48,460 ರೂ. |
ಹೈದರಾಬಾದ್ |
43,200 ರೂ. | 47,130 ರೂ. |
ಅಹಮದಾಬಾದ್ |
44,480 ರೂ. | 47,720 ರೂ. |
ಲಕ್ನೋ |
44,110 ರೂ. | 46,910 ರೂ. |
ಕೇರಳ |
43,200 ರೂ. | 47,130 ರೂ. |
ಇದನ್ನೂ ಓದಿ: ಫ್ಲಿಪ್‌ಕಾರ್ಟ್ Big Billion Days ಜೊತೆಗೆ Amazon ಪೈಪೋಟಿ : ಸೆಲ್ ದಿನಾಂಕ ಬದಲಾವಣೆ, ಮತ್ತಷ್ಟು ಡಿಸ್ಕೌಂಟ್!
ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಕುಸಿತ ಕಾಣುತ್ತಿರುವುದು ಖರೀದಿದಾರರಿಗೆ ಖುಷಿ ನೀಡುತ್ತಿದೆ. ಕಡಿಮೆ ಬೆಲೆಯಲ್ಲಿ ಹಳದಿ ಲೋಹ ಲಭ್ಯವಾಗುತ್ತಿರುವುದರಿಂದ ಹಬ್ಬದ ದಿನಗಳಲ್ಲಿ ಚಿನ್ನ ಖರೀದಿ ಜೋರಾಗಿದೆ. ಮೇಲೆ ಉಲ್ಲೇಖಿಸಿರುವ ಚಿನ್ನದ ಬೆಲೆ ಸರಕು ಮತ್ತು ಸೇವಾ ತೆರಿಗೆ (GST) ಇಲ್ಲದಿದ್ದು ಮತ್ತು ಆಭರಣ ಅಂಗಡಿಗಳಲ್ಲಿನ ದರಕ್ಕೆ ಹೊಂದಿಕೆಯಾಗದೇ ಇರಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.